i
ಈ ಮತಕೇಂದ್ರದಲ್ಲಿ ಮತ ಹಾಕಿದವರು ರಾಜರಾಗ್ತಾರೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಲೋಕಸಭಾ ಚುನಾವಣೆ ಈ ಸಲ ವಿಶೇಷ ಕುತೂಹಲವನ್ನು ಮೂಡಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಶಿವಮೊಗ್ಗ ಜಿಲ್ಲಾ ಪಂಚಾಯತ್ಆವರಣದಲ್ಲಿ ಅರಮನೆ ಮಾದರಿಯ ಮತಗಟ್ಟೆಯನ್ನು ನಿರ್ಮಿಸಲಾಗಿದ್ದು ಮತದಾರರನ್ನು ಸೆಳೆಯುತ್ತಿದೆ
ಮತದಾರರೇ ಪ್ರಭುಗಳು ಎಂಬ ದ್ಯೇಯವಾಕ್ಯದಡಿಯಲ್ಲಿ ಈ ಮತಗಟ್ಟೆ ನಿರ್ಮಿಸಲಾಗಿದೆ. ಮತಗಟ್ಟೆಯಲ್ಲಿ ಸಿಬ್ಬಂದಿಗಳು ಸಹ ರಾಜ ಪೋಷಾಕುವಿನಿಂದ ಮತದಾರರನ್ನ ಸ್ವಾಗಿಸುತ್ತಿದ್ದಾರೆ. ಅಲ್ಲದೆ ಮತದಾರರು ಕಿರೀಟತೊಟ್ಟು ಸಿಂಹಾಸನದಲ್ಲಿ ಕುಳಿತು ಫೋಟೋ ಕ್ಲಿಕ್ಕಿಸುವ ಅವಕಾಶ ನೀಡಲಾಗಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು. ಈ ಉದ್ದೇಶದಿಂದ ಈ ಮತಗಟ್ಟೆ ಸಿದ್ದವಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಖ್ಯ ಯೋಜನಾಧಿಕಾರಿಳ ಮಾರ್ಗದರ್ಶನದಂತೆ ಈ ವಿಶೇಷ ಮತಗಟ್ಟೆ ರೂಪುಗೊಂಡಿದೆ.