i
ಡ್ಯಾನ್ಸ್ ಜೆಎಂಐಟಿ ಡ್ಯಾನ್ಸ್ ನೃತ್ಯ ಸ್ಪರ್ಧೆ ಪ್ರಜ್ಞಾ ಪ್ರಥಮ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-೨0೨೪ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಸ್ಫೂರ್ತಿ-೨0೨೪ರ ಅಂಗವಾಗಿ ಡ್ಯಾನ್ಸ್ ಜೆಎಂಐಟಿ ಡ್ಯಾನ್ಸ್ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸೋಲೋ ವಿಭಾಗದಲ್ಲಿ ಪ್ರಜ್ಞಾ ಪ್ರಥಮ, ತಿಲಕ್ ದ್ವಿತೀಯ ಸ್ಥಾನ ಗಳಿಸಿದರೆ, ಗ್ರೂಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಎಲೆಕ್ಟ್ರಿಕಲ್ ಸ್ಟ್ರೈಕರ್ಸ್ ತಂಡ ಪ್ರಥಮ, ಮುಕ್ತಾ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸ್ಫೂರ್ತಿ-೨೦೨೪ರ ಮುಖ್ಯ ಸಂಚಾಲಕ ಡಾ. ಬಿ.ಜಿ.ಕುಮಾರಸ್ವಾಮಿ,ವಿವಿಧ ಇಲಾಖಾ ಮುಖ್ಯಸ್ಥರುಗಳು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಕಿರುತೆರೆ ಹಾಗೂ ರಿಯಾಲಿಟಿ ಶೋ ನೃತ್ಯ ಸಂಯೋಜಕರಾದ ದಾವಣಗೆರೆ ಡಿ-ವೈರಸ್ ಸ್ಟನ್ನರ್ಸ್ ಡ್ಯಾನ್ಸ್ ಕಲಾ ಅಕಾಡೆಮಿಯ ದಯಾನಂದ್ ಎಸ್ ನಾಯಕ್ ಹಾಗೂ ಆನಂದ್ ಎಸ್ ಆಗಮಿಸಿದ್ದರು.