![](https://www.chandravallinews.com/wp-content/uploads/2024/05/WhatsApp-Image-2024-05-16-at-5.37.00-PM-3.jpeg)
i
ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಪ್ಪ ಎಂಬ ಸುಮಾರು 40-45 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ವ್ಯಕ್ತಿಯ ವಿಳಾಸ ಅಥವಾ ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಈತನ ಚಹರೆ ಸುಮಾರು 5.10 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಕಿಬ್ಬೊಟ್ಟೆಯ ಮೇಲೆ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ತಿಳಿಕೇಸರಿ ಕಪ್ಪು ಮಿಶ್ರಿತ ಬಣ್ಣದ ಅರ್ಧ ತೋಳಿನ ಟೀಶರ್ಟ್ ಮತ್ತು ಹಸಿರು ಬಣ್ಣದ ಚಡ್ಡಿ ಇರುತ್ತದೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರಿದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ದೂರವಾಣಿ ನಂ 08182 -261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.