ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶ್ರೀ ಕಾಟಮಹಾಲಿಂಗೇಶ್ವರ ಕೃಪಾಫೋಷಿತ ನಾಟಕ ಮಂಡಳಿ, ಚಿಲ್ಲಹಳ್ಳಿ ಇವರ ವತಿಯಿಂದ ಶ್ರಾವಣ ಮಹೋತ್ಸವದ ಅಂಗವಾಗಿ ಬೃಹತ್ ಸಾಮಾಜಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ದಿನಾಂಕ 08-09-2026 ಮಂಗಳವಾರ ರಾತ್ರಿ 9:30ಕ್ಕೆ ಸರಿಯಾಗಿ ಚಿಲ್ಲಹಳ್ಳಿ ಗ್ರಾಮದಲ್ಲಿ "ಸಮಾಜಕ್ಕೆ ಶಿಕ್ಷೆ ಅರ್ಥಾತ್ ರೈತನ ನರಳಾಟ" ಎಂಬ ಸುಂದರ ಸಾಮಾಜಿಕ ನಾಟಕವು ಪ್ರದರ್ಶನಗೊಳ್ಳಲಿದೆ.
ನಾಟಕದ ವಿವರಗಳು: ಸಂಗೀತ ನಿರ್ದೇಶನ: ರಮೇಶ್, ಕ್ಯಾದಿಗುಂಟೆ ರಿದಂಪ್ಯಾಡ್: ಬದ್ರಿ ಹೂವಿನಹೊಳೆ,
ವ್ಯವಸ್ಥಾಪಕರು: ಸಮಸ್ತ ಚಿಲ್ಲಹಳ್ಳಿ ಗ್ರಾಮಸ್ಥರು
ಪಾತ್ರವರ್ಗ:
ಶೋಭಾ, ಚಿತ್ರದುರ್ಗ – ಶೀಲಾ (ಕಥಾನಾಯಕಿ)
ವೀಣಾ, ತುಮಕೂರು – ಶಕುಂತಲಾ (ಖಳನಾಯಕಿ)
ಮಂಜುಶ್ರೀ, ಚಿತ್ರದುರ್ಗ – ಸಂಗವ್ವ (ಹಾಸ್ಯ)
ಟಿ.ಎಸ್.ರಾಮಣ್ಣ – ಶಿವಾನಂದ (ಜಮೀನ್ದಾರರು)
ಸಿ.ಲೋಕಣ್ಣ – ಜಗದೀಶ್ (ಕಥಾನಾಯಕ)
ಟಿ.ರಾಮು – ಉಪಕಥಾನಾಯಕ (ಡಾ.ಪ್ರಕಾಶ್)
ಎಸ್.ಯೋಗೇಶ್ – ಶ್ರೀಕಾಂತ್ (ಯುವ ರೈತ)
ಕೆ.ವಿ.ನರೇಂದ್ರ (ಮಾಜಿ ಗ್ರಾ.ಪಂ. ಸದಸ್ಯರು) – ಜಗನ್ನಾಥ್ (ಖಳನಾಯಕ)
ಆರ್. ಹೇಮರಾಜ್, ಆರ್.ಆರ್. ಟ್ರಾವೆಲ್ಸ್ – ಸಂಗಣ್ಣ (ಹಾಸ್ಯ)
ಎಂ.ರವಿ – ಕೊಟ್ರೇಶಿ (ಹಾಸ್ಯ)
ಟಿ.ಜಿ.ಆರ್.ಮಹೇಶ್ – ಕಂರಪ್ಪ (ಹಾಸ್ಯ)
ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸಬೇಕಾಗಿ ಚಿಲ್ಲಹಳ್ಳಿ ಗ್ರಾಮಸ್ಥರು ಕೋರಿದ್ದಾರೆ.




