Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಿಎಂ ಡಿ.ಕೆ ಶಿವಕುಮಾರ್‌ಸರ್ಕಾರಕ್ಕೆ 100 ದಿನದ ಸಂಭ್ರಮ: ಹೊಸ ಯೋಜನೆಗಳ ಮಹಾಪೂರ!

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು
100 ದಿನಗಳನ್ನು ಪೂರೈಸಿದ ಶುಭ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಪ್ರಮುಖ ಹೊಸ ಯೋಜನೆಗಳು, ಉಪಕ್ರಮಗಳು ಹಾಗೂ ಜನಪರ ನಿರ್ಧಾರಗಳಿಗೆ ಚಾಲನೆ ನೀಡಿದೆ.

ಸರ್ಕಾರವು ಘೋಷಿಸಿರುವ ಪ್ರಮುಖ ಹೊಸ ಯೋಜನೆಗಳು ಮತ್ತು ಜನಪರ ನಿರ್ಧಾರಗಳ ವಿವರಗಳು ಕೆಳಗಿನಂತಿವೆ.

Advertisement

ಸೇವಾ ಒನ್ಡಿಜಿಟಲ್ ವೇದಿಕೆ: ಒನ್ ಗವರ್ನ್‌ಮೆಂಟ್, ಒನ್ ಡಿಜಿಟಲ್ಪರಿಕಲ್ಪನೆಯಡಿಯಲ್ಲಿ ಈ ವೇದಿಕೆಯನ್ನು ಪರಿಚಯಿಸಲಾಗಿದೆ. ನಾಗರಿಕರು ಒಂದೇ ಡಿಜಿಟಲ್ ವೇದಿಕೆಯ ಮೂಲಕ ಸರ್ಕಾರದ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಲು ಮತ್ತು ತಮ್ಮ ಅಗತ್ಯಗಳನ್ನು ಸರ್ಕಾರಕ್ಕೆ ತಲುಪಿಸಲು ಇದು ಅನುಕೂಲ ಮಾಡಿಕೊಡಲಿದೆ.

ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ:
ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ರೈತರಿಗೆ ಸೂಕ್ತ ಸಮಯದಲ್ಲಿ ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೃಷಿ ಸಲಹೆಗಳನ್ನು ಒದಗಿಸುವುದು ಇದರ ಮೂಲ ಉದ್ದೇಶ. ಮೊದಲ ಹಂತದಲ್ಲಿ ಮಂಡ್ಯ
, ಬೆಳಗಾವಿ, ವಿಜಯಪುರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.

‘BMTC 2.0’ ಮೊಬೈಲ್ ಅಪ್ಲಿಕೇಶನ್: ನಗರ ಸಾರಿಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಆ್ಯಪ್ ರೂಪಿಸಲಾಗಿದೆ. ಇದರಿಂದ ಬಸ್‌ಗಳ ಲೈವ್ ಟ್ರ್ಯಾಕಿಂಗ್, ಸಮಯ ಹಾಗೂ ಮಾರ್ಗಗಳ ಪರಿಶೀಲನೆ, ಡಿಜಿಟಲ್ ಟಿಕೆಟ್ ಖರೀದಿ, ವ್ಯಾಲೆಟ್ ಸೌಲಭ್ಯ, ಮಲ್ಟಿಮೋಡಲ್ ಜರ್ನಿ ಪ್ಲಾನರ್, ಬಿಎಂಟಿಸಿ ಮತ್ತು ನಮ್ಮ ಮೆಟ್ರೊಗೆ ಸಂಯೋಜಿತ ಟಿಕೆಟ್ ವ್ಯವಸ್ಥೆ ಹಾಗೂ ದಿನನಿತ್ಯದ, ಸಾಪ್ತಾಹಿಕ, ಮಾಸಿಕ ಪಾಸ್‌ಗಳ ಸೌಲಭ್ಯ ದೊರೆಯಲಿದೆ.

ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ (KSRTC ಅವತಾರ 2.0): ಈ ಆ್ಯಪ್ ಅಥವಾ ವಾಟ್ಸ್‌ಆ್ಯಪ್ ಮೂಲಕ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಇದರೊಂದಿಗೆ ಕೆಎಸ್‌ಆರ್‌ಟಿಸಿ ಮತ್ತು ಕೆಎಸ್‌ಟಿಡಿಸಿ ಪ್ರವಾಸ ಪ್ಯಾಕೇಜ್‌ಗಳು ಹಾಗೂ ಡಿಜಿಟಲ್ ಮಾಸಿಕ ಪಾಸ್‌ಗಳ ಸೌಲಭ್ಯವೂ ಲಭ್ಯವಿರಲಿದೆ.

15 ಲಕ್ಷ ವಸತಿ ನಿವೇಶನ ಹಂಚಿಕೆ:
ರಾಜ್ಯಾದ್ಯಂತ ಬಡವರಿಗೆ ಒಟ್ಟು
15 ಲಕ್ಷ ನಿವೇಶನ ಹಂಚುವ ಗುರಿ ಹೊಂದಲಾಗಿದ್ದು, ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಲು ಸಂಪುಟ ಸಭೆ ನಿರ್ಧರಿಸಿದೆ. ಮೊದಲ ಹಂತದಲ್ಲಿ 30 ಜಿಲ್ಲೆಗಳಲ್ಲಿ 5 ಲಕ್ಷ ಸೈಟುಗಳನ್ನು ವಿತರಿಸಲಾಗುವುದು. ಈ ಯೋಜನೆಗೆ ಸ್ಥಳ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮೊದಲ ಪ್ರಾತಿನಿಧ್ಯ ನೀಡಲಾಗುವುದು.

ಉದ್ಯೋಗ ನಿಧಿ ಯೋಜನೆ: ರಾಜ್ಯದ 10 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಜಿಲ್ಲೆಗಳಲ್ಲಿ ಹೊಸದಾಗಿ ಉದ್ಯೋಗ ಸೃಷ್ಟಿಸುವ ಕಂಪನಿ ಮಾಲೀಕರಿಗೆ, ಅವರು ನೀಡುವ ಪ್ರತಿ ಉದ್ಯೋಗಿಯ ಆಧಾರದ ಮೇಲೆ ಮಾಸಿಕ 2,500 ಪ್ರೋತ್ಸಾಹ ಧನ ನೀಡಲಾಗುತ್ತದೆ.

ಶ್ರಮಿಕ ನಿವಾಸಯೋಜನೆ (ಕಾರ್ಮಿಕರಿಗೆ 10 ಸಾವಿರ ಮನೆ):
ಕೈಗಾರಿಕಾ ಕಾರ್ಮಿಕರು ತಮ್ಮ ಕೆಲಸದ ಸ್ಥಳದ ಸಮೀಪದಲ್ಲೇ ವಾಸಿಸಲು ಅನುಕೂಲವಾಗುವಂತೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಕಾರ್ಮಿಕರಿಗೆ ಮನೆ ಕಟ್ಟಿಕೊಡುವ ಉದ್ದಿಮೆಗಳಿಗೆ ಸರ್ಕಾರದಿಂದ ಬಂಡವಾಳ ಸಹಾಯಧನ ದೊರೆಯಲಿದೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್’:
ಶಕ್ತಿಯೋಜನೆಯಡಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಇನ್ಮುಂದೆ ಆಧಾರ್ ಕಾರ್ಡ್ ಬದಲಿಗೆ ವಿಶೇಷ ಸ್ಮಾರ್ಟ್ ಕಾರ್ಡ್ತೋರಿಸಿ ಪ್ರಯಾಣಿಸಲು ಸಂಪುಟ ಸಭೆಯು ಅನುಮೋದನೆ ನೀಡಿದೆ.

ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ: ಯುವಜನರಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತೆ ವಿದ್ಯಾರ್ಥಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಇತರ ಪರಿಸರ ಮತ್ತು ಸೈನಿಕ ನಲವಿನ ಉಪಕ್ರಮಗಳು:
ಡೀಸೆಲ್ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ತಡೆಯಲು
'ರಿಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್' ಪರಿಚಯಿಸಲಾಗಿದ್ದು, ಯೋಧರು ಮತ್ತು ಅವರ ಕುಟುಂಬದ ಗೌರವಾರ್ಥವಾಗಿ ಸೈನಿಕ ಸಮ್ಮಾನ್ಯೋಜನೆಯನ್ನೂ ಪ್ರಕಟಿಸಲಾಗಿದೆ.

ಸಮಾನ ಅವಕಾಶ ಹಾಗೂ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಯಲು ಸೀಮೆಗೆ ಭದ್ರೆ ಹೋರಾಟಗಾರರ ಕಿತ್ತಾಟ ಏಕೆ: ಎಂ.ಜಿ ರಂಗಸ್ವಾಮಿ ಪ್ರಶ್ನೆಸ್ವಾಭಿಮಾನಿ ಸಶಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ: ಶಾಂತಾ ಸುರೇಂದ್ರಜೀವಸಂಕುಲ ಉಳಿವಿಗೆ ಪ್ರಕೃತಿದೊಡ್ಡ ಶಕ್ತಿ-ಎಸ್.ಬಸವರಾಜುಜನಸಾಮಾನ್ಯರ ಪ್ರಗತಿಗಾಗಿ ಸರ್ಕಾರದ ಮಹತ್ವದ ಯೋಜನೆಗಳುಕೋಟೆನಾಡಿಗೆ ಹರಿದ ಭದ್ರಾ ನೀರು: ಗೊನೂರು ಕೆರೆಗೆ 'ಮೇಲ್ಭದ್ರಾ' ಸ್ಪರ್ಶ—ರೈತರ ಹರ್ಷ!ಕೆಪಿಎಸ್ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ—ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮ!ಸರ್ಕಾರ ‘ಸರಿಯಾದ ದಿಕ್ಕಿನಲ್ಲಿ’ ಸಾಗುತ್ತಿದೆ; ಸಿದ್ದರಾಮಯ್ಯ! ಸಿಎಂ ಡಿ.ಕೆ ಶಿವಕುಮಾರ್‌ಸರ್ಕಾರಕ್ಕೆ 100 ದಿನದ ಸಂಭ್ರಮ: ಹೊಸ ಯೋಜನೆಗಳ ಮಹಾಪೂರ!ಸಚಿವ ಸತೀಶ್ ಜಾರಕಿಹೊಳಿ ಮತ್ತು ಆಪ್ತರ ನಿವಾಸಗಳ ಮೇಲೆ 2ನೇ ದಿನವೂ ಇ.ಡಿ ದಾಳಿ: ಸುದೀರ್ಘ ಪರಿಶೀಲನೆರಾಜ್ಯ ಕಾಂಗ್ರೆಸ್‌ಗೆ ನೂತನ 35 ಜಿಲ್ಲಾಧ್ಯಕ್ಷರ ನೇಮಕ: ಎಐಸಿಸಿ ಅಧಿಕೃತ ಪಟ್ಟಿ ಬಿಡುಗಡೆ