ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRIDL) ಶೇ.7ರಷ್ಟು ಕಮಿಷನ್ ದಂದೆ ನಡೆಯುತ್ತಿದ್ದು, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಇಬ್ಬರು ಸಚಿವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಶಾಸಕ ಅಶೋಕ್‌ಕುಮಾರ್‌ರೈ ಅವರೇ ಇಲಾಖೆಯಲ್ಲಿ ನಡೆಯುತ್ತಿರುವ ಶೇ.7ರಷ್ಟು ಲಂಚದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಸಕರ ಪತ್ರವೇ ಕಾಂಗ್ರೆಸ್ ಶೇಕಡಾ 70ರಷ್ಟು ಕಮಿಷನ್ ಆಡಳಿತಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದರು.
ಸುದ್ದಿಗೋಷ್ಠಿಯ ಪ್ರಮುಖ ಮುಖ್ಯಾಂಶಗಳು: ಕಮಿಷನ್ ಸರಕಾರ ಮತ್ತು ಎಟಿಎಂ ಆಪಾದನೆ: ಕಾಂಗ್ರೆಸ್ ಶಾಸಕರು ಮತ್ತು ನಾಯಕರೇ ಸ್ವತಃ ವಸತಿ ಇಲಾಖೆ ಹಾಗೂ ಕೆಕೆಆರ್‌ಡಿಬಿ ಅಕ್ರಮಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಈ ಶೇ.7ರಷ್ಟು ಕಮಿಷನ್ ಹಣದಿಂದ ಸುಮಾರು 800 ಕೋಟಿ ರೂ. ಸಂಗ್ರಹವಾಗಿದ್ದು, ಕರ್ನಾಟಕವು ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಆಗಿದೆ ಎಂದು ಆರೋಪಿಸಿದರು.
ಆಡಳಿತಾರೂಢ ಕಾರ್ಯಕರ್ತರಿಗೆ ಗಂಜಿ ಕೇಂದ್ರ: ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿರುವ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಸಾರ್ವಜನಿಕ ಸೇವೆಗಲ್ಲ, ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಷಿಸುವ 'ಗಂಜಿ ಕೇಂದ್ರ'ಗಳಾಗಿವೆ ಎಂದು ಟೀಕಿಸಿದರು.
ಉದ್ಯಾನವನಗಳ ರಕ್ಷಣೆಗೆ ಶನಿವಾರ-ಭಾನುವಾರ ಪ್ರತಿಭಟನೆ: ರಿಯಲ್ ಎಸ್ಟೇಟ್ ಮಾಫಿಯಾ ಹಿತಾಸಕ್ತಿಗೆ ತಕ್ಕಂತೆ ಉದ್ಯಾನಗಳನ್ನು ಕಬಳಿಸಲು ಬಿಲ್ ತರಲಾಗುತ್ತಿದೆ. ಇದನ್ನು ವಿರೋಧಿಸಿ 'ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ' ಅಭಿಯಾನದಡಿ ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ನಗರದ ಉದ್ಯಾನಗಳಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು.
ಅದಾನಿ ವಿಷಯದಲ್ಲಿ ಕಾಂಗ್ರೆಸ್ ಇತ್ಯಾತ್ಮಕ ನಿಲುವು: ದೆಹಲಿಯಲ್ಲಿ ರಾಹುಲ್ ಗಾಂಧಿ ಅದಾನಿ ವಿರುದ್ಧ ಮಾತನಾಡಿದರೆ, ರಾಜ್ಯ ಸರ್ಕಾರವು ಸುರಂಗ ರಸ್ತೆ ಯೋಜನೆ ಹೆಸರಿನಲ್ಲಿ ಅದಾನಿ ಅವರನ್ನು ಮನೆಗೆ ಕರೆಸಿ ಆತಿಥ್ಯ ನೀಡಿ ಮಾಲ್ ನಿರ್ಮಾಣಕ್ಕೆ ಜಾಗ ನೀಡಲು ಮುಂದಾಗಿದೆ ಎಂದು ಆಕ್ಷೇಪಿಸಿದರು.
ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಯಾವುದೇ ವ್ಯಕ್ತಿಯ ಜಾಗ ಶುದ್ಧೀಕರಣ ಮಾಡುವುದು ಸಂವಿಧಾನ ಹಾಗೂ ಮಾನವೀಯತೆಗೆ ಎಸಗುವ ಅಪರಾಧ ಎಂದು ಹೇಳಿದ ಆರ್‌ಅಶೋಕ, ಬರ ಪರಿಹಾರ ಸೇರಿದಂತೆ ಜನರ ಸಮಸ್ಯೆಗಳಿಗಾಗಿ ಬಿಜೆಪಿ ತನ್ನ ಪಾದಯಾತ್ರೆ ಮತ್ತು ಹೋರಾಟವನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು.




