Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಪ್ರೌಢ ಶಾಲೆ ಹಳೆಯ ವಿದ್ಯಾರ್ಥಿಗಳಿಂದ ಸ್ನೇಹ ಮಿಲನ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ದ್ಯೇಯ ವಾಕ್ಯದೊಂದಿಗೆ ತಾನು ಓದಿದ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಹಿಂದಿರುಗಿ ನೋಡಿದ ವಿದ್ಯಾರ್ಥಿಗಳೆಂದರೆ 2001-02ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮಾತ್ರ ಎಂದು ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ್ ಗೌಡ ತಿಳಿಸಿದರು. 

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯ 2001-02ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುಗಳಿಗೆ ಪಾದಪೂಜೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಾನು ಓದಿದ ಶಾಲೆಗೆ ಸುಮಾರು 50,000 ಮೌಲ್ಯದ ಶಾಲಾ ಪರಿಕರಗಳನ್ನು ನೀಡಿ ತಮ್ಮ ನೆಚ್ಚಿನ ಗುರುಗಳನ್ನು 25 ವರ್ಷದ ನಂತರ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಮಂಗಳವಾದ್ಯಗಳೊಂದಿಗೆ ಕರೆತಂದು ಪಾದಪೂಜೆ ನೆರವೇರಿಸಿದ ಸಂಸ್ಕೃತಿ ಉಳಿದಿರುವುದು ಅಂದಿನ ವಿದ್ಯಾರ್ಥಿಗಳಿಗೆ ಮಾತ್ರ ಎಂದರು.

ಮತ್ತೊಬ್ಬ ಶಿಕ್ಷಕಿ ಶೋಭರವರು ಮಾತನಾಡಿ ನಾನೊಬ್ಬ ವಿಜ್ಞಾನ ಶಿಕ್ಷಕಿಯಾಗಿ ವಿಜ್ಞಾನವನ್ನು ಬರಿ ಪ್ರಗತಿಗಷ್ಟೇ ಬಳಸಬೇಕು. ನಾವು ನಮ್ಮ ನಿತ್ಯ ಜೀವನವನ್ನು ಉತ್ತಮ ಪರಿಸರದೊಂದಿಗೆ ಜೀವನ ಕಳೆಯಬೇಕು.ಆದ್ದರಿಂದ ನಿಮ್ಮ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯವನ್ನು ಕಾಪಾಡಲು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಎಲ್ಲರೂ ನಾವು ಹಚ್ಚಿರುವ ದೀಪ ಸುಂದರವಾಗಿ ಬೆಳಗುತ್ತಿದೆ ಎಂದರೆ ಅದು ನಾವು ನೀಡಿದ ಸಂಸ್ಕಾರದಿಂದ ಮಾತ್ರ. ಇಂದಿನ ಮಕ್ಕಳ ಶಿಕ್ಷಕರ ಬಾಂಧವ್ಯ ಕ್ಷೀಣಿಸುತ್ತಿದೆ.

ಇಂದು ನೀಡಿದ ಗೌರವ ಯಾವುದೇ ಪ್ರಶಸ್ತಿಗೂ, ಊಹಿಸಲು ಸಾಧ್ಯವಿಲ್ಲದ ಗೌರವವಾಗಿದೆ.ನಮ್ಮ ಶಿಕ್ಷಕ ವೃತ್ತಿ ನಮಗೆ ಸಾರ್ಥಕ ಮನೋಭಾವನೆಯನ್ನು ಬೆಳೆಸಿದೆ ಎಂದರು ಮತ್ತೊಬ್ಬ ನಿವೃತ್ತ ಮುಖ್ಯ ಶಿಕ್ಷಕ ಜಿ.ಎಂ. ಮುನಿಕೃಷ್ಣಪ್ಪ ಮಾತನಾಡಿ ನನ್ನ 30 ವರ್ಷಗಳ ಸೇವಾ ಅವಧಿಯಲ್ಲಿ 20 ವರ್ಷಗಳು ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಇಂತಹ ತೃಪ್ತಿ ನನಗೆ ಬೇರೆ ಯಾವುದೇ ಶಾಲೆಗಳಲ್ಲೂ ದೊರೆತಿಲ್ಲ.ಈ ಬ್ಯಾಚಿನ ಹಳೆಯ ವಿದ್ಯಾರ್ಥಿಗಳೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.



       ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಶಿಕ್ಷಕಿ ರೇಣುಕಾ ಭಟ್,ಇಂದಿರಾ, ಶೈಲಜಾ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಅನಂತ ಪದ್ಮನಾಭ ಶರ್ಮಾ, ಎ.ಆರ್. ಸುಬ್ಬರಾವ್ .ಸಿ.ಕೆ.ಕೃಷ್ಣಪ್ಪ  ನಾರಾಯಣಪ್ಪ ಮಂಜುನಾಥ್ ಗುಮಾಸ್ತರಾದ ಭಾಗ್ಯಮ್ಮ ಹಳೆ ವಿದ್ಯಾರ್ಥಿಗಳಾದ ನವೀನ್, ಸುಬ್ರಹ್ಮಣ್ಯ,ಸಂಪತ್ ವೆಂಕಟೇಶ್,ಗಂಗರಾಜು. ಎನ್. ಶಿವಕುಮಾರ್, ಮಮತಾ, ಚೈತ್ರ, ಪಾರ್ವತಿ, ಸೇರಿದಂತೆ ನೂರ ಹತ್ತು ಹಳೆ ವಿದ್ಯಾರ್ಥಿಗಳು ಹಾಜರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST