E-PAPER
28 Nov 2026, 08:28:03 AM|
Gold₹12654/gGold24K ₹12,654/g - 22K ₹11,589/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ನ.29ರಂದು ಭರಮಸಾಗರದಲ್ಲಿ ಹರಿದಾಸ ಸಂಕೀರ್ತನೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪವಮಾನ ಪ್ರತಿಷ್ಠಾನ ವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ಇದೇ ನವೆಂಬರ್ 29ರಂದು ಸಂಜೆ 5ಕ್ಕೆ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಸರ್ಕಾರಿ ಆಸ್ಪತ್ರೆ ರಸ್ತೆಯ ವಾಣಿ ವಿಲಾಸದಲ್ಲಿರುವ ಎಸ್‍ಬಿಜೆ ಮಿನಿ ಹಾಲ್‍ನಲ್ಲಿ ‘ಹರಿದಾಸ ಸಂಕೀರ್ತನೆ' ಕಾರ್ಯಕ್ರಮ ಏರ್ಪಡಿಸಲಾಗಿದೆ.

ವಿದ್ವಾನ್ ಡಾ. ರಾಯಚೂರು ಶೇಷಗಿರಿ ದಾಸ್ ಅವರು ಸಂಕೀರ್ತನೆ ಪ್ರಸ್ತುತ ಪಡಿಸಲಿದ್ದಾರೆ.

ದಾಸ ಪರಂಪರೆಯ ಅಸ್ಕಿಹಾಳ ಗೋವಿಂದ ದಾಸರ ಮೊಮ್ಮಗನಾದ ಶೇಷಗಿರಿ ದಾಸ್ ಅವರು ತಾಯಿ ಜಯಶ್ರೀಬಾಯಿ ಮತ್ತು ತಂದೆ ಗೋವಿಂದದಾಸ್ ಅವರ ಪುತ್ರರಾಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಇವರು, ಸಂಗೀತ ಗುರುಗಳಾದ ಎ.ಎಂ. ಜೋಶಿ ಮತ್ತು ಮುಕುಂದ ಗೋರೆ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾಗಿರುವ ಇವರು, ‘ಕಾವೇರಿ ರಂಗ’ ಮತ್ತು ‘ಹನುಮಂತ ಹನುಮಂತ’ ಸೇರಿದಂತೆ 100ಕ್ಕೂ ಹೆಚ್ಚು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಇದುವರೆಗೆ 3,000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ಆಹ್ವಾನದ ಮೇರೆಗೆ ಇಂಗ್ಲೆಂಡ್, ಅಮೆರಿಕ, ನ್ಯೂಜಿಲೆಂಡ್, ಆಸ್ಟೇಲಿಯಾ, ಮಲೇಷ್ಯಾ, ಕತಾರ್, ಓಮಾನ್ ಹಾಗೂ ನೇಪಾಳ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಿದ್ದಾರೆ.

ಹರಿದಾಸ ಗಾಯನ ಭಾಸ್ಕರ, ಭಕ್ತಿ ಸಂಗೀತ ವಿದ್ವಾನ್, ದಾಸ ಶಿರೋಮಣಿ, ಹರಿದಾಸಶ್ರೀ, ನಾಡಪ್ರಭು ಕೆಂಪೇಗೌಡ, ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್‍ನ ಪುರಂದರ ಅನುಗ್ರಹ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಇವರು, ‘ಹನುಮಂತ ಹನುಮಂತ’ ಮತ್ತು ‘ಗೋವಿಂದಗಾನ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಹರಿದಾಸ ಸಂಕೀರ್ತನೆ ಕಾರ್ಯಕ್ರಮದ ನಂತರ ಡಾ. ರಾಯಚೂರು ಶೇಷಗಿರಿ ದಾಸ್ ಅವರಿಗೆ ಪವಮಾನ ಪ್ರತಿಷ್ಠಾನದಿಂದ ‘ದಾಸಗಾನ ಸಾರ್ವಭೌಮ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನುಷ್ಯನ ಶ್ರೇಷ್ಠತೆ ಆತನ ಗುಣ ಜ್ಞಾನ ನಡತೆ ಮತ್ತು ಸಾಧನೆಯಿಂದ ನಿರ್ಧಾರವಾಗುತ್ತದೆಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ, ಶಿಕ್ಷಣದ ಮೂಲಕ ಉನ್ನತ ಭವಿಷ್ಯ ರೂಪಿಸಿಕೊಳ್ಳಿ – ಶಾಸಕ ಗೋಪಾಲಕೃಷ್ಣಜಿಲ್ಲಾ ಆಸ್ಪತ್ರೆ ಉದ್ಘಾಟನೆಗೆ ಸಂಘ-ಸಂಸ್ಥೆಗಳ ಮುಖಂಡರಿಗೆ ಆಹ್ವಾನವಿಲ್ಲ!- ತೀವ್ರ ಆಕ್ರೋಶಮಠಗಳ ಆಸ್ತಿ ಸಂರಕ್ಷಣೆ ಅತ್ಯಂತ ಜವಾಬ್ದಾರಿಯುತ ಕಾರ್ಯ: ಡಾ. ಬಸವಕುಮಾರ ಸ್ವಾಮೀಜಿ500 ಕೋಟಿ ಹೂಡಿಕೆಗೆ ಜಪಾನ್‌ನ ‘ಲಿಯೋ ಎಲೆಕ್ಟ್ರಾನಿಕ್ಸ್’ ಒಪ್ಪಂದ ದೇವೇಗೌಡರ ಸಮ್ಮುಖದಲ್ಲಿ ಸಂವಿಧಾನ ಪಾಲನೆಯ ಶಪಥ ಮಾಡಿದ ಹೆಚ್.ಡಿ. ಕುಮಾರಸ್ವಾಮಿಎನ್‌ಡಿಎ ಮೈತ್ರಿಕೂಟದ ಸಭೆ: ಹಿರಿಯೂರು ಉಪಚುನಾವಣೆ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಕುರಿತು ವಿಸ್ತೃತ ಚರ್ಚೆ ಹಿರಿಯೂರು ಉಪ ಚುನಾವಣೆಗಳಿಗೆ ಜೆಡಿಎಸ್ ರಣತಂತ್ರ: ಹೆಚ್.ಡಿ. ಕುಮಾರಸ್ವಾಮಿ ಬೊಮ್ಮಾಯಿ ನಿವಾಸಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ​ ಸಮಾನತೆಯ ಸಂದೇಶ ಸಾರಿದ ಕನಕದಾಸರ ಆದರ್ಶಗಳು ಮಾನವ ಕುಲಕ್ಕೆ ಬೆಳಕು: ವಿಜಯೇಂದ್ರ