Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಹೊಂಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ...!

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರಾಪುರ ಗ್ರಾಮದ ಹೊರವಲಯದಲ್ಲಿ ಹೊಂಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳ ಮೂಲದ ಬರ್ಲಾ ಮುಂಡಾ (41) ಮೃತ ವ್ಯಕ್ತಿ. ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡಲು ಬಂದಿದ್ದ ಈತ, ಕೆಲಸಕ್ಕೆ ಸೇರಿದ ದಿನವೇ ನಾಪತ್ತೆಯಾಗಿದ್ದ ಎನ್ನಲಾಗಿದೆ. ಆತ ವಾಪಸ್ ತನ್ನ ಊರಿಗೆ ತೆರಳಿರಬಹುದು ಎಂದು ಭಾವಿಸಿದ್ದ ಹೋಟೆಲ್ ಸಿಬ್ಬಂದಿ, ಈ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ.

ಇದೀಗ ಗ್ರಾಮದ ಹೊರವಲಯದ ಹೊಂಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ನಾಲ್ಕೈದು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೇಮದ ಊರಲಿ’ — ಪ್ರೀತಿಯ ಹಸಿರಿಗೆ ನಂಬಿಕೆಯೇ ಬೇರು!: ವಿಮರ್ಶೆ: ಈ. ರವೀಶ ಅಕ್ಕರಕನ್ನಡ ರಾಜ್ಯೋತ್ಸವ: ಕನ್ನಡಿಗರ ಸ್ವಾಭಿಮಾನ ಮತ್ತು ಏಕತೆಯ ಪ್ರತೀಕಅರ್ನಾಬ್ ಚಂಡಮಾರುತದ ಭೀತಿ: ಭಾರಿ ಮಳೆಯ ಮುನ್ನೆಚ್ಚರಿಕೆಚುನಾವಣಾ ಅಕ್ರಮ ವಿರೋಧಿಸಿ ನ.1ಕ್ಕೆ ಇಂಡಿಯಾ ಬೃಹತ್ ರ‍್ಯಾಲಿ: ಪೊಲೀಸರ ತಡೆಗೆ ಕಾಂಗ್ರೆಸ್ ಆಕ್ರೋಶ ಕಿಟಕಿ ಸರಳು ಕತ್ತರಿಸಿ ನೈಜೀರಿಯಾ ಮಹಿಳೆ ಪರಾರಿ; ಭದ್ರತಾ ಲೋಪ ಬಯಲಿಗೆಇಸಿಐ-ವಿರೋಧ ಪಕ್ಷಗಳ ನಡುವೆ ಹೆಚ್ಚಿದ ಸಂಘರ್ಷ: 'ಸತ್ಯಂ ಶಿವಂ ಸುಂದರಂ' ಎಂದ ರಾಹುಲ್ ಗಾಂಧಿಗರ್ಭಿಣಿ ಪತ್ರಕರ್ತೆಯ ಮೇಲೆ ದೌರ್ಜನ್ಯ ಆರೋಪ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್  ವೀಟೋ ಅಧಿಕಾರವಿಲ್ಲದ ಖಾಯಂ ಸ್ಥಾನವು ‘ಎರಡನೇ ದರ್ಜೆ’ಯ ಸದಸ್ಯತ್ವಕ್ಕೆ ಸಮ– ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ ಮೇಳ: ಅಕ್ಟೋಬರ್ 30ರಿಂದ ಶಿವಮೊಗ್ಗದಲ್ಲಿ ನಾಲ್ಕು ದಿನಗಳ ಮಹಾಮೇಳಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ: ಜಿಲ್ಲಾ ಅಧ್ಯಕ್ಷರಾಗಿ ಸಿದ್ದರಾಜು ಆಯ್ಕೆ