Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಮೋದಿ, ಅಮಿತ್ ಶಾ, ಚುನಾವಣಾ ಆಯುಕ್ತರಿಗೆ ನೇರ ಸವಾಲು ಹಾಕಿದ ನಟ ಪ್ರಕಾಶ್ ರಾಜ್

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬಹಿರಂಗ ಸವಾಲು ಎಸೆದಿರುವ ಬಹುಭಾಷಾ ನಟ ಪ್ರಕಾಶ್ ರಾಜ್, "ಧೈರ್ಯವಿದ್ದರೆ ಮಾಧ್ಯಮಗಳ ಎದುರು ನನ್ನೊಂದಿಗೆ ನೇರ ಸಂವಾದಕ್ಕೆ ಕುಳಿತುಕೊಳ್ಳಲಿ, ಮತಗಳ್ಳತನದ ಬಗ್ಗೆ ದಾಖಲೆ ಸಹಿತ ಸಾಬೀತು ಮಾಡುತ್ತೇನೆ" ಎಂದು ಮಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸವಾಲು ಮತ್ತು ಜೈಲು ಶಿಕ್ಷೆ: "ಮಾಧ್ಯಮಗಳ ಸಮ್ಮುಖದಲ್ಲಿ ಎಡಿಟ್ ಮಾಡದ ನೇರ ಪ್ರಸಾರದಲ್ಲಿ ಸಂವಾದ ನಡೆಯಲಿ. ನಾನು ನೀಡುವ ಮತಗಳ್ಳತನದ ದಾಖಲೆಗಳು ಸುಳ್ಳಾದರೆ ನಾನು ಜೈಲಿಗೆ ಹೋಗುತ್ತೇನೆ, ಇಲ್ಲದಿದ್ದರೆ ಅವರು ಜೈಲಿಗೆ ಹೋಗಲು ಸಿದ್ಧರಿದ್ದಾರೆಯೇ?" ಎಂದು ಪ್ರಶ್ನಿಸಿದರು.

ಎಸ್‌ಐಆರ್ ಮತ್ತು ನುಸುಳುಕೋರರ ಹೆಸರಿನಲ್ಲಿ ಕೋಟಿ ಹಣ ಪೋಲು: ಕರ್ನಾಟಕದಲ್ಲಿ ಲಕ್ಷಾಂತರ ನುಸುಳುಕೋರರಿದ್ದಾರೆ ಎಂದು ಬಿಂಬಿಸಿ ಇಡೀ ರಾಜ್ಯದ 5.5 ಕೋಟಿ ಜನರ ಮತಪಟ್ಟಿ ಪರಿಷ್ಕರಣೆ ನಡೆಸಲಾಯಿತು. ಆದರೆ ಸಿಕ್ಕಿದ್ದು ಕೇವಲ ಇಬ್ಬರು ಮಹಿಳೆಯರು (ಒಬ್ಬರು ಪಾಕಿಸ್ತಾನ ಹಾಗೂ ಒಬ್ಬರು ಬಾಂಗ್ಲಾದೇಶ ಮೂಲದವರು). ಇದಕ್ಕಾಗಿ ಜನಸಾಮಾನ್ಯರ ಕೋಟ್ಯಂತರ ರೂ. ತೆರಿಗೆ ಹಣ ಪೋಲು ಮಾಡಲಾಗಿದೆ ಎಂದು ಆಪಾದಿಸಿದರು.

ಬಡವರು ಹಾಗೂ ಆದಿವಾಸಿಗಳ ಮತಗಳ್ಳತನ: 'ಆಬ್ಸೆಂಟ್/ಶಿಫ್ಟೆಡ್' ನೆಪದಲ್ಲಿ ತೆಗೆದುಹಾಕಲಾಗಿರುವ 70 ರಿಂದ 80 ಲಕ್ಷ ಮತದಾರರಲ್ಲಿ ಹೆಚ್ಚಿನವರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಡ ಆದಿವಾಸಿಗಳು. ಪ್ರಶ್ನಿಸುವ ಶಕ್ತಿ ಇಲ್ಲದ ಇವರ ಸಂವಿಧಾನಬದ್ಧ ಮತದಾನದ ಹಕ್ಕನ್ನೇ ಕಸಿಯಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರಿಗೆ ವಿನಾಯಿತಿ ಏಕೆ?: ಜ್ಞಾನೇಶ್ ಕುಮಾರ್ ಅವರು ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಕೋರ್ಟ್‌ನಲ್ಲಿ ಕೇಸ್ ದಾಖಲಾಗದಂತೆ ಡಿಸೆಂಬರ್ 2023ರಲ್ಲಿ ವಿಪಕ್ಷ ಸಂಸದರನ್ನು ಅಮಾನತುಗೊಳಿಸಿ 'ನ್ಯಾಯಾಂಗ ವಿನಾಯಿತಿ' ತರಲಾಗಿದೆ. ದೇಶದ ರಾಷ್ಟ್ರಪತಿ ಅಥವಾ ಪ್ರಧಾನಿಗೇ ಇಲ್ಲದ ರಕ್ಷಣೆ ಇವರಿಗೆ ಏಕಿದೆ ಎಂದು ಆಕ್ಷೇಪಿಸಿದರು.

ಮಹಾರಾಷ್ಟ್ರ ಮತ್ತು ಬೆಂಗಳೂರಿನಲ್ಲಿ ಅಕ್ರಮ: ಮಹಾರಾಷ್ಟ್ರದಲ್ಲಿ ಸಂಸತ್ ಚುನಾವಣೆ ಮುಗಿದ ಕೇವಲ 5.5 ತಿಂಗಳಲ್ಲಿ 42 ಲಕ್ಷ ಹೊಸ ಮತದಾರರನ್ನು ಸೇರಿಸಿ, ಬಳಿಕ 2 ಕೋಟಿ ಮತಗಳನ್ನು ತೆಗೆದುಹಾಕಿ ಅಕ್ರಮ ಎಸಗಲಾಗಿದೆ. ಬೆಂಗಳೂರಿನಲ್ಲೂ ಶೇ.50ರಷ್ಟು ಮತದಾರರನ್ನು ಆಬ್ಸೆಂಟ್/ಶಿಫ್ಟೆಡ್ ಎಂದು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಮೃತರ ಲೆಕ್ಕಾಚಾರದಲ್ಲಿ ವಂಚನೆ: ಕರ್ನಾಟಕದಲ್ಲಿ ವರ್ಷಕ್ಕೆ ಸರಾಸರಿ 4 ಲಕ್ಷ ಜನ ಮೃತಪಟ್ಟರೆ, ಚುನಾವಣಾ ಆಯೋಗ 20 ರಿಂದ 25 ಲಕ್ಷ ಜನ ಸತ್ತಿದ್ದಾರೆ ಎಂದು ತೋರಿಸಿ ಬದುಕಿರುವವರ ಮತ ಹಕ್ಕನ್ನು ಕಸಿದುಕೊಂಡಿದೆ.

ಸಿ.ಟಿ.ರವಿಗೆ ಚಾಲೆಂಜ್ & ಕೋರ್ಟ್ ಹೋರಾಟ: "ನನ್ನ ವೋಟರ್ ಐಡಿ ತೆಗೆಯಲು ನೋಡಿ ಫಾರ್ಮ್ 6 ಭರ್ತಿ ಮಾಡಲು ಹೇಳಿದರು, ನಾನು ಅದಕ್ಕೆ ಒಪ್ಪಿಲ್ಲ. ಈ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್‌ವರೆಗೆ ಹೋರಾಡುತ್ತೇನೆ. ಬಿಜೆಪಿ ಮುಖಂಡ ಸಿ.ಟಿ.ರವಿ ಅವರಿಗೆ ಧೈರ್ಯವಿದ್ದರೆ ನನ್ನೊಂದಿಗೆ 23 ಜಿಲ್ಲೆಗಳಿಗೆ ಬರಲಿ, ನೂರಾರು ಯುವಕರು ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಅವರ ಮುಂದಿಡುತ್ತೇನೆ" ಎಂದು ಚಾಲೆಂಜ್ ಮಾಡಿದರು.

ಇದು ರಾಜಕೀಯ ಪಕ್ಷದ ಹೋರಾಟವಲ್ಲ, ಭಾರತದ ಪ್ರಜೆಗಳ ಸ್ವಾಭಿಮಾನದ ಆಂದೋಲನ. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಹೋರಾಟದಲ್ಲೂ ಭಾಗವಹಿಸುವುದಾಗಿ ಮತ್ತು ಕರಾವಳಿ ಭಾಗದಲ್ಲಿ ಮನೆಮನೆಗೆ ತೆರಳಿ ಜನ ಜಾಗೃತಿ ಮೂಡಿಸುವುದಾಗಿ ಪ್ರಕಾಶ್ ರಾಜ್ ತಿಳಿಸಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಾನಂದ ತಗಡೂರು ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯಕ್ಕೆ ಆಗ್ರಹ: ಜಿಲ್ಲಾಧಿಕಾರಿಗಳಿಗೆ ಮನವಿಹಿರಿಯೂರಿನಲ್ಲಿ ಅತ್ಯಾಧುನಿಕ ‘ನಾರಾಯಣ ಸ್ಕ್ಯಾನ್ಸ್ & ಡಯಾಗ್ನೋಸ್ಟಿಕ್ಸ್’: ಹೈಟೆಕ್ ವೈದ್ಯಕೀಯ ಸೌಲಭ್ಯ ಈಗ ನಿಮ್ಮ ಮನೆಯಂಗಳದಲ್ಲೇ!ಹೆತ್ತ ಕರುಳಿನ ಮಮತೆಯೊಂದಿಗೆ ಪುಟ್ಟ ಕಂದಮ್ಮಗಳ ಆರೋಗ್ಯ ರಕ್ಷಣೆಗೆ ಡಾ. ಸುಪ್ರಿಯಾ ಸಜ್ಜು ಹಿರಿಯೂರಿನಲ್ಲಿ ಇಂದು 'ನಾರಾಯಣ ಚಿಲ್ಡ್ರನ್ಸ್ ಕ್ಲಿನಿಕ್' ಶುಭಾರಂಭ:‘ಮತಗಳ್ಳತನ’ ಚರ್ಚೆಗೆ ಸಂಸತ್ ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ: ಅಮಿತ್ ಶಾಕರ್ವಾ ಚೌತ್ ದಿನವೇ ಪತಿಯಿಂದ ಪತ್ನಿಯ ಕೃತ್ಯ ರಟ್ಟು; ರಸ್ತೆಯಲ್ಲೇ ಕುಟುಂಬಗಳ ನಡುರಸ್ತೆ ಜಟಾಪಟಿ!ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಭೀತಿ: ಅನುಮಾನಾಸ್ಪದ ವಸ್ತು ಪತ್ತೆ! ಹಾಲಿನ ದರ ಏರಿಕೆ ಬೆನ್ನಲ್ಲೇ 14 ರೂ.ಮೊಸರು ದರ ಏರಿಕೆ: ನ.1ರಿಂದ ಹೊಸ ಬೆಲೆ ಜಾರಿಇಸ್ರೋ ಸಾಧನೆ: NVS-03 ಉಪಗ್ರಹ ಯಶಸ್ವಿ ಉಡಾವಣೆ – ಬಲಗೊಂಡ ‘ನ್ಯಾವಿಕ್’ ವ್ಯವಸ್ಥೆಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ, ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು: ಬಿಎಸ್ ವೈ ಬಾಂಬ್!