Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯಕ್ಕೆ ಆಗ್ರಹ: ಜಿಲ್ಲಾಧಿಕಾರಿಗಳಿಗೆ ಮನವಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರಿಗೆ ಎಲೈಟ್ ಈಗಲ್ಸ್ ಕ್ರಿಕೆಟ್ ಕ್ಲಬ್ ಶನಿವಾರ  ಮನವಿ ಸಲ್ಲಿಸಿದೆ.

ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ವಾಕಿಂಗ್, ವ್ಯಾಯಾಮ, ಓಟ ಹಾಗೂ ಕ್ರಿಕೆಟ್, ಹ್ಯಾಂಡ್‍ಬಾಲ್, ಟೇಕ್ವಾಂಡೋ ಮುಂತಾದ ಕ್ರೀಡೆಗಳ ಅಭ್ಯಾಸಕ್ಕಾಗಿ ಆಗಮಿಸುತ್ತಾರೆ.

news_1793489706_4_379.webp

 

 ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಮೈದಾನದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದೆ. ಮೈದಾನದಲ್ಲಿ ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಇಲ್ಲದಿರುವುದರಿಂದ ವೃದ್ಧರು ಹಾಗೂ ವಾಯುವಿಹಾರಿಗಳು ದಣಿವಾರಿಸಿಕೊಳ್ಳಲು ನೆಲದ ಮೇಲೆ ಅಥವಾ ಬಂಡೆಗಳ ಮೇಲೆ ಕೂರಬೇಕಾದ ಸ್ಥಿತಿ ಇದೆ.

ಅಲ್ಲದೆ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವಿಲ್ಲದೆ ಸರ್ಕಾರಿ ವಿಜ್ಞಾನ ಹಾಗೂ ಕಲಾ ಕಾಲೇಜಿನ ವಿದ್ಯಾರ್ಥಿಗಳು ಬಯಲನ್ನೇ ಆಶ್ರಯಿಸಬೇಕಾಗಿರುವುದು ಮುಜುಗರ ತಂದಿದೆ. ಇನ್ನು ಮೈದಾನದ ಅಗ್ನೇಯ ಭಾಗದಲ್ಲಿ ರಾತ್ರಿ ವೇಳೆ ಕೆಲವರು ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಹಾಕುತ್ತಿದ್ದು, ಇದರಿಂದ ಬೆಳಗಿನ ವಾಯುವಿಹಾರಿಗಳ ಕಾಲಿಗೆ ಗಾಜು ಚುಚ್ಚಿ ಗಾಯಗೊಂಡಿರುವ ನಿದರ್ಶನಗಳಿವೆ.

 ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮೈದಾನದಲ್ಲಿ ಮರಗಳ ಕೆಳಗೆ ಆಸನ ವ್ಯವಸ್ಥೆ, ಶೌಚಾಲಯ ನಿರ್ಮಾಣ ಹಾಗೂ ಅಗ್ನೇಯ ಮೂಲೆಯಲ್ಲಿ ಹೈಮಾಸ್ಟ್ ಬೀದಿ ದೀಪವನ್ನು ಅಳವಡಿಸಿಕೊಡಬೇಕೆಂದು ಎಲೈಟ್ ಈಗಲ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಲೋಕೇಶ್ವರಸ್ವಾಮಿ, ಕಾರ್ಯದರ್ಶಿ ಸತೀಶ್ ಕುಮಾರ್, ಉಪಾಧ್ಯಕ್ಷ ರಾಘವೇಂದ್ರ, ಖಜಾಂಚಿ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಾನಂದ ತಗಡೂರು ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯಕ್ಕೆ ಆಗ್ರಹ: ಜಿಲ್ಲಾಧಿಕಾರಿಗಳಿಗೆ ಮನವಿಹಿರಿಯೂರಿನಲ್ಲಿ ಅತ್ಯಾಧುನಿಕ ‘ನಾರಾಯಣ ಸ್ಕ್ಯಾನ್ಸ್ & ಡಯಾಗ್ನೋಸ್ಟಿಕ್ಸ್’: ಹೈಟೆಕ್ ವೈದ್ಯಕೀಯ ಸೌಲಭ್ಯ ಈಗ ನಿಮ್ಮ ಮನೆಯಂಗಳದಲ್ಲೇ!ಹೆತ್ತ ಕರುಳಿನ ಮಮತೆಯೊಂದಿಗೆ ಪುಟ್ಟ ಕಂದಮ್ಮಗಳ ಆರೋಗ್ಯ ರಕ್ಷಣೆಗೆ ಡಾ. ಸುಪ್ರಿಯಾ ಸಜ್ಜು ಹಿರಿಯೂರಿನಲ್ಲಿ ಇಂದು 'ನಾರಾಯಣ ಚಿಲ್ಡ್ರನ್ಸ್ ಕ್ಲಿನಿಕ್' ಶುಭಾರಂಭ:‘ಮತಗಳ್ಳತನ’ ಚರ್ಚೆಗೆ ಸಂಸತ್ ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ: ಅಮಿತ್ ಶಾಕರ್ವಾ ಚೌತ್ ದಿನವೇ ಪತಿಯಿಂದ ಪತ್ನಿಯ ಕೃತ್ಯ ರಟ್ಟು; ರಸ್ತೆಯಲ್ಲೇ ಕುಟುಂಬಗಳ ನಡುರಸ್ತೆ ಜಟಾಪಟಿ!ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಭೀತಿ: ಅನುಮಾನಾಸ್ಪದ ವಸ್ತು ಪತ್ತೆ! ಹಾಲಿನ ದರ ಏರಿಕೆ ಬೆನ್ನಲ್ಲೇ 14 ರೂ.ಮೊಸರು ದರ ಏರಿಕೆ: ನ.1ರಿಂದ ಹೊಸ ಬೆಲೆ ಜಾರಿಇಸ್ರೋ ಸಾಧನೆ: NVS-03 ಉಪಗ್ರಹ ಯಶಸ್ವಿ ಉಡಾವಣೆ – ಬಲಗೊಂಡ ‘ನ್ಯಾವಿಕ್’ ವ್ಯವಸ್ಥೆಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ, ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು: ಬಿಎಸ್ ವೈ ಬಾಂಬ್!