ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಕಂದವಾರ ಗ್ರಾಮದಲ್ಲಿ ನೆಲೆಯಾಗಿರುವ ತಾಯಿ ಶ್ರೀ ಬೆಂಕಿ ಮಾರಮ್ಮ ದೇವಿಯ 7ನೇ ವಾರ್ಷಿಕೋತ್ಸವ ಸಮಾರಂಭ ಬಹಳ ಅದ್ದೂರಿಯಾಗಿ ನೇರವೇರಿತು.
ಬೆಂಕಿ ಮಾರಮ್ಮ ದೇವಾಲಯದಲ್ಲಿ ಜು. 9 ರಂದು ಗುರುವಾರ ಸಂಜೆ 06.30ಗಂಟೆಯಿಂದ ಅಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ ಹಾಗೂ ವಾಸ್ತುಹೋಮ ಹಾಗು ಜು.10 ಶುಕ್ರವಾರ ಮುಂಜಾನೆಯಿಂದ ಫಲ ಪಂಚಾಮೃತ ಅಭಿಷೇಕ ಅಷ್ಟ ದ್ರವ್ಯ ಮಂಗಳ ಅಭಿಷೇಕ ರುದ್ರಾಭಿಷೇಕ ಹಾಗೂ ವಿಶೇಷವಾಗಿ ಚಂಡಿ ಹೋಮ, ಮಹಾ ಪೂರ್ಣಾಹುತಿ ಹಾಗೂ ಕುಂಭಾಭಿಷೇಕ ಹಾಗು ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ದೂರದ ಊರುಗಳಿಂದ ಬಂದ ಭಕ್ತರು ಫಲಪುಷ್ಪ ಅರ್ಪಿಸಿ ಧನ್ಯತೆ ಮೆರೆದರು. ನಂತರ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಗಿತ್ತು.
ಪ್ರತಿವರ್ಷವೂ ದೇವಿಯ ಆರಾಧನೆ ಬಹಳ ವಿಜೃಂಭಣೆಯಿಂದ ನೆಡೆಸಲಾಗುತ್ತೆ ಇಲ್ಲಿಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಿ ಮರೆಹೋಗುತ್ತಾರೆ ಅವರ ಇಷ್ಟಾರ್ಥಗಳು ಸಿಧ್ಧಿಸಿದ ನಂತರ ಅವರೆ ದೇವಿಯ ಆರಾಧನೆಯಲ್ಲಿ ಭಾಗಿಯಾಗುತ್ತಾರೆ.
ಹೋಮ ಹವನ ಮಾಡುವ ಮೂಲಕ ದೇವಿಗೆ 51 ಕಲಶಗಳನ್ನು ಇಟ್ಟು ಅ ನೀರನ್ನು ದೇವಿಗೆ ಅಭಿಷೇಕ ಮಾಡಲಾಯಿತು ಅತ್ಯಂತ ಪವಿತ್ರ ಮತ್ತು ಶಕ್ತಿಯುತವಾದ ಪೂಜಾ ಕೈಂಕರ್ಯಗಳು ನಡೆದವು.ಇದು ಲೋಕಕಲ್ಯಾಣಾರ್ಥವಾಗಿ ಸು:ಖ ಶಾಂತಿಯ ನೆಮ್ಮದಿಗಾಗಿ ಈ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಲಾಗುತ್ತದೆ.
ಲಾವಣ್ಯ ರವಿಚಂದ್ರ, ದೇವಿಯ ಭಕ್ತೆ, ಚಿಕ್ಕಬಳ್ಳಾಪುರ.



