LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಚಿವ ಟಿ.ರಘುಮೂರ್ತಿಗೆ ಮನವಿ 

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕ್ರೀಡೆಯ ಮೂಲಕ ವಿಶ್ವಕರ್ಮ ಜನಾಂಗದವರು ಸಂಘಟನೆಯಾಗಲು ವಿನೂತನ ಹೆಜ್ಜೆಯಿಟ್ಟಿರುವುದು ಅರ್ಥಪೂರ್ಣವಾಗಿದೆ ಎಂದು ಗ್ಯಾರೆಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ ಪ್ರಶಂಶಿಸಿದರು.

ವಿಶ್ವಕರ್ಮ ಸೇವಾ ಸಮಿತಿಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶ್ವಕರ್ಮ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕಾರ್ಪೆಂಟರ್, ಆಭರಣ ತಯಾರಿಕೆ, ಕುಲುಮೆ ಕೆಲಸ, ಶಿಲ್ಪಕಲೆ, ಲೋಹಶಿಲ್ಪ ದೇವರ ವಿಗ್ರಹಗಳ ತಯಾರಿಕೆ, ರಾಜ ಮಹಾರಾಜರು ಯುದ್ದದ ಸಂದರ್ಭಗಳಲ್ಲಿ ಬಳಸುತ್ತಿದ್ದ ಕತ್ತಿ ಗುರಾಣಿಗಳು ಹಾಗೂ ಡ್ಯಾಂಗಳ ಇಂಟರ್ ಲಾಕ್ ವ್ಯವಸ್ಥೆಯಲ್ಲಿ ವಿಶ್ವಕರ್ಮರ ಕೊಡುಗೆಯಿದೆ. ಜಯಂತಿ ಪೂಜೆಗಳಲ್ಲಿ ಒಂದಾಗಿ ಶಕ್ತಿ ಪ್ರದರ್ಶಿಸುವುದಕ್ಕಿಂತ ಕ್ರೀಡೆ ಮೂಲಕ ಸಂಘಟನೆಯತ್ತ ಗಮನ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಕಾಯಕ ವರ್ಗದ ಜೊತೆ ನಾನು ಸದಾ ಇರುತ್ತೇನೆಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಮಾತನಾಡಿ ರಾಜ್ಯದಲ್ಲಿಯೇ ಹಿಂದುಳಿದವರಲ್ಲಿ ಎರಡನೆ ಸ್ಥಾನದಲ್ಲಿದ್ದೇವೆಂದು ಹೇಳಿಕೊಳ್ಳುವ ನೀವುಗಳು ಅಲ್ಪಸಂಖ್ಯಾತೆಂದುಕೊಳ್ಳಬೇಡಿ. ನಿಮ್ಮ ಸಂಘಟನೆ ಬಲವಾಗಿದೆ. ರಾಜ್ಯ ಮಟ್ಟದ ವಿಶ್ವಕರ್ಮ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಮೂಲಕ ವಿಶ್ವಕರ್ಮ ಜನಾಂಗದವರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳಿಗಾಗಿ ಎರಡು ಎಕರೆ ಮತ್ತು ಧಾರ್ಮಿಕ ಆಧ್ಯಾತ್ಮಿಕ ಸಮಾರಂಭಗಳಿಗೆ ಕಟ್ಟವಿಲ್ಲದ ಕಾರಣ ನಾಲ್ಕು ಎಕರೆ ಭೂಮಿ ನೀಡುವಂತೆ ವಿಶ್ವ ಕರ್ಮ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಸಚಿವ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವರು ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಜೊತೆ ಚರ್ಚಿಸಿ ಭೂಮಿ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ವಿಶ್ವಕರ್ಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಶಂಕರ್‌ಮೂರ್ತಿ ಪ್ರಧಾನ ಕಾರ್ಯದರ್ಶಿ ಶ್ಯಾಮಪ್ರಸಾದ್, ಉಪಾಧ್ಯಕ್ಷರುಗಳಾದ ಶ್ರೀನಿವಾಸ್, ಸಂತೋಷ್, ಶ್ರೀನಿವಾಸಚಾರ್, ನಾರಾಯಣಚಾರ್, ವಿಶ್ವಕರ್ಮ ಸಮಾಜದ ಸಿ.ಕುಮಾರ್ ಉಮೇಶ್‌ಕುಮಾರ್ ಬಿ.ಎಂ. ಹೈಕೋರ್ಟ್ ನ್ಯಾಯವಾದಿ ರುದ್ರಾಚಾರ್, ಡಿ.ವೆಂಕಟೇಶಾಚಾರ್, ಪ್ರವೀಣ್‌ಕುಮಾರ್, ಆರ್.ಡಿ.ಸಂಜಯ್, ಸ್ವಾಮಿನಾಥನ್ ಇವರುಗಳು ವೇದಿಕೆಯಲ್ಲಿದ್ದರು. ಮಧುಗಿರಿಯ ನೀಲಕಂಠಸ್ವಾಮಿ, ಗಂಗಾವತಿಯ ಗಣೇಶ್ವರಸ್ವಾಮಿ ಇವರುಗಳು ಸಾನಿಧ್ಯ ವಹಿಸಿದ್ದರು.

ಕುಂದಾಪುರದ ಗುರುಗಣೇಶ್ ನೇಜಾರು ತಂಡ ಪ್ರಥಮ ಬಹುಮಾನ. ಬೆಂಗಳೂರಿನ ಕಾಗಟಿಸ್ ತಂಡ ದ್ವಿತೀಯ, ಕುಂದಾಪುರದ ರತನ್ ರಾಕರ್ಸ್ ತೃತೀಯ ಬಹುಮಾನ ಪಡೆದುಕೊಂಡಿತು. ವಿಶ್ವಕರ್ಮ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ತಂಡಕ್ಕೆ ಬೈಕ್ ವಿತರಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಕೋಗಿಲೆ ಎಸ್.ಜಾನಕಿಗೆ ನುಡಿ-ನಮನ, ಗಾಯನ ಕಾರ್ಯಕ್ರಮ ಉದ್ಘಾಟಿಸಿದ ಬಿ.ಕಾಂತರಾಜ್ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಚಿವ ಟಿ.ರಘುಮೂರ್ತಿಗೆ ಮನವಿ  ಚಿತ್ರದುರ್ಗ ಮೆಡಿಕಲ್ ಕಾಲೇಜ್ ಡೀನ್ ಡಾ.ಯುವರಾಜ್‌ ಭ್ರಷ್ಟಾಚಾರದ ವಿರುದ್ದ ತನಿಖೆ ನಡೆಸಲು ಧರಣಿ  ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ  ಸಾರ್ವಜನಿಕ ಶೌಚಾಲಯ ತೆರವುಗೊಳಿಸುವಂತೆ ಸ್ಥಳೀಯರ ಆಗ್ರಹ  STP ಘಟಕ ಸ್ಥಾಪಿಸುವಂತೆ ಆಗ್ರಹಿಸಿ ಆಗಸ್ಟ್ 15 ರಂದು ಉಪವಾಸ ಸತ್ಯಾಗ್ರಹಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಮೇಲೆ ಮಾಡಿರುವ ಆರೋಪ ಸುಳ್ಳು-ಮಂಜುನಾಥ್ನೂತನ ಕಾರ್ಮಿಕ ಸಂಹಿತೆ ವಿರೋಧಿಸಿ ಜೈಲ್ ಭರೋ ಚಳುವಳಿಕರ್ತವ್ಯ ಲೋಪವೆಸಗಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ-ಸಚಿವ ಟಿ. ರಘುಮೂರ್ತಿಅಂಬೇಡ್ಕರ್ ಸಂವಿಧಾನ ಎಲ್ಲಾ ವರ್ಗದ ಜನರ ಬಾಳಿಗೆ ದಾರಿ ದೀಪ- ಉಪನ್ಯಾಸಕ ಡಾ.ಎಸ್.ಮಾರುತಿ