ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆ ಸಮಿತಿಗೆ ನಿಯಮ ಗಾಳಿಗೆ ತೂರಿ ತಜ್ಞನ ಆಯ್ಕೆ ಹೆಸರನ್ನು ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಬೆಂಗಳೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.
ವಿಶ್ವವಿದ್ಯಾಲಯದ ಮುಂದಿನ ಕುಲಪತಿಗಳ ಆಯ್ಕೆ ಸಮಿತಿಗೆ ಸಿಂಡಿಕೇಟ್ ನಿಂದ ತಜ್ಞ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಇತ್ತೀಚಿಗೆ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ವಿಶ್ವವಿದ್ಯಾಲಯದ 5.9 ಮತದಾನ ಪ್ರಕ್ರಿಯೆಯಲ್ಲಿ ಕುಲಪತಿಗಳ ಆಯ್ಕೆಯ ತಜ್ಞ ಸಮಿತಿಗೆ ವಿಶ್ರಾಂತ ಕುಲಪತಿಗಳು, ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರೊ. ದಯಾನಂದ ಅಗಸರ್‌ಅವರ ಹೆಸರನ್ನು ಸೂಚಿಸಲು ಕೈಗೊಂಡ ನಿರ್ಧಾರವು ಕಾನೂನು ರೀತಿಯಾಗಿ ತಪ್ಪಾಗಿದ್ದೂ, ದುರುದ್ದೇಶದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವವಿದ್ಯಾಲಯದ 5.9 ಮತದಾನ ಪ್ರಕ್ರಿಯೆ ಅನ್ವಯ ಕುಲಪತಿ ಆಯ್ಕೆ ಸಮಿತಿಗೆ ಪ್ರೊ. ಪದ್ಮಾ ಶೇಖರ್ ಅವರನ್ನು ಶೀಘ್ರವೇ ಸಂಬಂಧಪಟ್ಟವರು ಆಯ್ಕೆ ಮಾಡಬೇಕು ಎಂದು ಬೆಂಗಳೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘವು ಒತ್ತಾಯಿಸಿದೆ.
ಈಗಾಗಲೇ ಶಿಕ್ಷಕರ ಸಂಘದಿಂದ ಬೆಂಗಳೂರು ವಿಶ್ವವಿದ್ಯಾಲಯವು ದಿನಾಂಕ 04-05-2026 ರಂದು ನಡೆದ ವಿಶೇಷ ಸಿಂಡಿಕೇಟ್ ಸಭೆಯ ನಡಾವಳಿಗರ ಆಕ್ಷೇಪ ಮತ್ತು ನಡಾವಳಿ ಬದಲಾಯಿಸಲು ಕೋರಿಕೆಯನ್ನು ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರವನ್ನು ಕುಲಪತಿ, ರಾಜ್ಯಪಾಲರಿಗೆ, ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ, ಕುಲಸಚಿವರಿಗೆ ಹಾಗೂ ಎಲ್ಲಾ ಸಿಂಡಿಕೇಟ್ ಸದಸ್ಯರಿಗೆ ಖುದ್ದು ಮನವಿ ಮಾಡಿ, ತಾವು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಇದರ ಪ್ರತಿಗಳನ್ನು ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಿಕ್ಷಕರ ಸಂಘದ ಈ ಮೂಲಕ ಮನವಿಗಳನ್ನು ಸಲ್ಲಿಸಲು ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
“ವಿವಿಯ 5.9 ಮತದಾನ ಪ್ರಕ್ರಿಯೆ ಎಂಬುದು ಪ್ರತಿಯೊಂದು ಪ್ರಶ್ನೆಯನ್ನು ಹಾಜರಿರುವ ಸದಸ್ಯರ ಬಹುಮತದ ಮತಗಳಿಂದ ನಿರ್ಧರಿಸಲಾಗುತ್ತದೆ. ಸಮಾನ ಮತಗಳ ಸಂದರ್ಭದಲ್ಲಿ, ಅಧ್ಯಕ್ಷರು ಸದಸ್ಯರಾಗಿ ತಮ್ಮ ಮತದ ಜೊತೆಗೆ ನಿರ್ಣಾಯಕ ಮತವನ್ನು ಹೊಂದಿರುತ್ತಾರೆ”.
“ಕುಲಪತಿ ಅಯ್ಕೆ ಸಮಿತಿಗೆ 5.9 ಮತದಾನದಲ್ಲಿ ಸದಸ್ಯರು ಕಡ್ಡಾಯವಾಗಿ ಉಲ್ಲೇಖವಾಗಿರುವುದರಿಂದ ಸಭೆಗೆ ಹಾಜರಿರದ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ಇವರ ಫೋನ್ ಮುಖೇನ ಬಂದ ಅಭಿಪ್ರಾಯವು ಅಮಾನ್ಯವಾಗುತ್ತದೆ. ಆದುದರಿಂದ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ರವರ ಅಭಿಪ್ರಾಯವನ್ನು ಅಮಾನ್ಯವೆಂದು ಪರಿಗಣಿಸಿದಾಗ, ಪ್ರೊ. ಪದ್ಮಾಶೇಖರ್ ರವರ ಹೆಸರನ್ನು 7 ಸಿಂಡಿಕೇಟ್ ಸದಸ್ಯರು ಸೂಚಿಸಿದ್ರೂ ಕೂಡ, ವಿವಿಯ ಮಾನ್ಯ ಕುಲಪತಿಗಳು, ಗುಲ್ಬರ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ದಯಾನಂದ ಅಗಸರ್‌ರವರ ಹೆಸರನ್ನು 6 ಸಿಂಡಿಕೆಟ್ ಸದಸ್ಯರು ಸೂಚಿಸಿದಂತೆ ಉಲ್ಲೇಖಿಸಿದ್ದು ಗಂಭೀರ ಪ್ರಮಾದಕ್ಕೆ ಕಾರಣವಾಗಿದೆ”.


