LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೈ ಸಂಪುಟ ಪುನಾರಚನೆ ಬಿರುಗಾಳಿ: 14 ಹಿರಿಯ ಘಟಾನುಘಟಿಗಳಿಗೆ ಕೊಕ್

Advertisement
Advertisement

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಎರಡು ತಿಂಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಚಿವ ಸಂಪುಟ ಪುನಾರಚನೆ ಕಸರತ್ತಿಗೆ ಸೋಮವಾರ ಇತಿಶ್ರೀ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು
, ಹಳೆಯ ಸಂಪುಟದಲ್ಲಿದ್ದ ಬರೋಬ್ಬರಿ 14 ಹಿರಿಯ ಘಟಾನುಘಟಿ ನಾಯಕರಿಗೆ ಕೋಕ್ ನೀಡಿದೆ.

ಹೈಕಮಾಂಡ್ ಸಂಪೂರ್ಣವಾಗಿ ಹೊಸಬರ ತಂಡಕ್ಕೆ ಆದ್ಯತೆ ನೀಡುವ ಮೂಲಕ ಹಿರಿಯ ನಾಯಕರಿಗೆ ಭಾರೀ ಶಾಕ್ ನೀಡಿದೆ.

ಸಚಿವ ಸ್ಥಾನ ಕಳೆದುಕೊಂಡ 14 ಹಿರಿಯ ಶಾಸಕರು:
ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಎಚ್.ಸಿ. ಮಹಾದೇವಪ್ಪ, ಶಿವಾನಂದ ಪಾಟೀಲ್, ಬಸಪ್ಪ ದರ್ಶನಾಪುರ, ಮಂಕಾಳು ವೈದ್ಯ, ರಹೀಮ್ ಖಾನ್, ಶರಣ ಪ್ರಕಾಶ್ ಪಾಟೀಲ್, ಆರ್.ಬಿ. ತಿಮ್ಮಾಪುರ, ಕೆ. ವೆಂಕಟೇಶ್, ಕೆ.ಎನ್. ರಾಜಣ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಎಂ.ಸಿ. ಸುಧಾಕರ್,  ಭೋಸರಾಜು.

ಸಿದ್ದರಾಮಯ್ಯ ಆಪ್ತರಿಗಿಲ್ಲ ಸಚಿವಗಿರಿ:ಸಚಿವ ಸ್ಥಾನ ಕೈತಪ್ಪಿದವರ ಪೈಕಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತೀವ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಲವು ಪ್ರಭಾವಿ ನಾಯಕರಿದ್ದಾರೆ. ಡಾ. ಎಚ್.ಸಿ. ಮಹಾದೇವಪ್ಪ, ಎಚ್.ಕೆ. ಪಾಟೀಲ್, ಕೆ. ವೆಂಕಟೇಶ್, ಕೆ.ಎನ್. ರಾಜಣ್ಣ, ರಹೀಮ್ ಖಾನ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶಿವಾನಂದ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪಿದೆ.

ಮೈಸೂರಿಗೆ ಏಕೈಕ ಸಚಿವ ಸ್ಥಾನ ಜಿಲ್ಲಾವಾರು ಲೆಕ್ಕಾಚಾರ:
ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಈ ಬಾರಿ ಒಂದೇ ಸಚಿವ ಸ್ಥಾನ ಸಿಕ್ಕಿದ್ದು
, ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತ್ರ ಜಿಲ್ಲೆಯ ಏಕೈಕ ಪ್ರತಿನಿಧಿಯಾಗಿದ್ದಾರೆ.  ಕೊಪ್ಪಳ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳು ತಲಾ ಎರಡು ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ನೂತನ 20 ಸಚಿವರು
, ಪ್ರತಿನಿಧಿಸುವ ಕ್ಷೇತ್ರ
1 ಪಿ.ಎಂ. ನರೇಂದ್ರಸ್ವಾಮಿ ಮಳವಳ್ಳಿ ಪರಿಶಿಷ್ಟ ಜಾತಿ (ಬಲಗೈ
)
2 ಶಿವರಾಜ ತಂಗಡಗಿ ಕನಕಗಿರಿ ಪರಿಶಿಷ್ಟ ಜಾತಿ (ಭೋವಿ).
3 ಕೆ.ಎಸ್. ಬಸವಂತಪ್ಪ ಮಾಯಕೊಂಡ ಪರಿಶಿಷ್ಟ ಜಾತಿ (ಎಡಗೈ)
4 ಟಿ. ರಘುಮೂರ್ತಿ ಚಳ್ಳಕೆರೆ ಪರಿಶಿಷ್ಟ ಪಂಗಡ (ಮ್ಯಾಸ ನಾಯಕ)
5 ರುದ್ರಪ್ಪ ಲಮಾಣಿ ಹಾವೇರಿ ಬಂಜಾರ (ಲಂಬಾಣಿ)
6 ಬಿ. ನಾಗೇಂದ್ರ ಬಳ್ಳಾರಿ ಪರಿಶಿಷ್ಟ ಪಂಗಡ (ನಾಯಕ)
7 ಎನ್. ಚಲುವರಾಯಸ್ವಾಮಿ ನಾಗಮಂಗಲ ಒಕ್ಕಲಿಗ


8 ಕೆ.ಎಂ. ಶಿವಲಿಂಗೇಗೌಡ ಅರಸೀಕೆರೆ ಒಕ್ಕಲಿಗ
9 ಎಚ್.ಸಿ. ಬಾಲಕೃಷ್ಣ ಮಾಗಡಿ ಒಕ್ಕಲಿಗ
10 ಗಾಯತ್ರಿ ಶಾಂತೇಗೌಡ ವಿಪ ಸದಸ್ಯೆ
 (ಚಿಕ್ಕಮಗಳೂರು) ಕುರುಬ.
11 ಬಸವರಾಜ ರಾಯರೆಡ್ಡಿ ಯಲಬುರ್ಗಾ ಲಿಂಗಾಯತ
12 ವಿಜಯಾನಂದ ಕಾಶಪ್ಪನವರ್  ಹುನಗುಂದ  ಲಿಂಗಾಯತ
13  ಲಕ್ಷ್ಮಣ ಸವದಿ      ಅಥಣಿ    ಲಿಂಗಾಯತ
14  ಎಸ್‌.ಎಸ್. ಮಲ್ಲಿಕಾರ್ಜುನ    ದಾವಣಗೆರೆ ಲಿಂಗಾಯತ
15  ಜಮೀರ್ ಅಹಮದ್ ಖಾನ್  ಚಾಮರಾಜಪೇಟೆ   ಮುಸ್ಲಿಂ
16   ರಿಜ್ವಾನ್ ಅರ್ಷದ್  ಶಿವಾಜಿನಗರ  ಮುಸ್ಲಿಂ
17  ಸಂತೋಷ್ ಲಾಡ್  ಕಲಘಟಗಿ    ಮರಾಠ
18  ಮಧು ಬಂಗಾರಪ್ಪ      ಸೊರಬ      ಈಡಿಗ
19  ಸಿ. ಪುಟ್ಟರಂಗಶೆಟ್ಟಿ      ಚಾಮರಾಜನಗರ  ಉಪ್ಪಾರ
20  ಡಾ. ಅಜಯ್ ಸಿಂಗ್   ಜೆವರ್ಗಿ   ರಜಪೂತ್ 
ಒಟ್ಟಾರೆಯಾಗಿ
, ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಹೈಕಮಾಂಡ್ 'ಹೊಸ ರಕ್ತ' ಹರಿಸುವ ತಂತ್ರಕ್ಕೆ ಮುಂದಾಗಿದ್ದು, ಪ್ರಾದೇಶಿಕ ಹಾಗೂ ಸಮುದಾಯವಾರು ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜವಳಿ ಉತ್ಪನ್ನ ರಫ್ತುಗೆ ಸರ್ಕಾರ ಉತ್ತೇಜನ:ಆಯುಕ್ತ ಎ.ಬಿ. ಬಸವರಾಜು ಎಂಪಿಆರ್ ಎಸಿಎಸ್ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಸ್ಪಷ್ಟ ಬಹುಮತಕಾಮನ್‌ವೆಲ್ತ್‌ಕ್ರೀಡಾಕೂಟದಲ್ಲಿ ಭಾರತಕ್ಕೆ 39 ಪದಕ: ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಕಾವೇರಿ ವಿಚಾರದಲ್ಲಿ ಸರ್ಕಾರದ ವಿಫಲತೆ: ಮಳೆಯಿಂದಷ್ಟೇ ರೈತರಿಗೆ ಆಸರೆ—ವಿಪಕ್ಷ ನಾಯಕ ಆರ್‌‌. ಅಶೋಕ್ ವಾಗ್ದಾಳಿನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ವೈಫಲ್ಯ: ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಸಂಪುಟ ವಿಸ್ತರಣೆ ಹೈ ಡ್ರಾಮಾ: ಕೊನೆ ಕ್ಷಣದಲ್ಲಿ ಮಂಕಾಳಗೆ ಕೊಕ್, ಎಸ್.ಎಸ್.ಎಂಗೆ ಒಲಿದ ಸಚಿವ ಸ್ಥಾನ!ಕೈ ಸಂಪುಟ ಪುನಾರಚನೆ ಬಿರುಗಾಳಿ: ಸಿದ್ದರಾಮಯ್ಯ ಆಪ್ತರಾಗಿದ್ದ 12 ಹಿರಿಯ ನಾಯಕರಿಗೆ ಕೊಕ್!ಕಾಂಗ್ರೆಸ್‌ಗೆ ಸಂಪುಟ ವಿಸ್ತರಣೆ ಬಿಸಿ: ಜಯಚಂದ್ರ ಬೆಂಬಲಿಗರು, ಕುಂಚಿಟಿಗ ಸಮಾಜ ಆಕ್ರೋಶ – ರಾಜೀನಾಮೆಗೆ ಜಯಚಂದ್ರ ಸಿದ್ಧ?ಕೈ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಾಟೀಲ್ ವೇದಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿದ ಸನಾತನ ಧರ್ಮದ ಪ್ರಸಾರಕ ವೇದವ್ಯಾಸರು: ಎಚ್ ಲಕ್ಷ್ಮೀದೇವಮ್ಮ