Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಎಸ್ಎಸ್ಎನ್ ಚುನಾವಣೆಯಲ್ಲಿ ಕಾಂಗ್ರೆಸ್ ಮಾತು ತಪ್ಪಿದೆ:ಹರೀಶ್ ಗೌಡ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೆಸ್ತೂರು ವಿ ಎಸ್ ಎಸ್ ಎನ್ ಅಧ್ಯಕ್ಷ ಸ್ಥಾನ ಕೋಡುತ್ತೇವೆಂದು ಹೇಳಿ ನಮ್ಮ ಪಕ್ಷದವರಿಗೆ ಕಾಂಗ್ರೆಸ್ ಮೋಸ ಮಾಡಿದೆ ಚುನಾವಣೆಗೂ ಮುನ್ನ ನಮ್ಮ ಪಕ್ಷದ ಅಭ್ಯರ್ಥಿಗಳನ್ನು  ಬಳಸಿಕೊಂಡು  ಅಧಿಕಾರದ ಚುಕ್ಕಾಣಿ ಹಿಡಿದಿದ್ದ  ಕಾಂಗ್ರೆಸ್ ಈಗ ಅಧಿಕಾರ ಹಸ್ತಾಂತರಿಸದೆ ತನ್ನ ಬುದ್ದಿ ತೋರಿದೆ. ಇನ್ನು ಮುಂದೆ ಸ್ಥಳೀಯ ಚುನಾವಣೆಗಳಲ್ಲಿ  ಕಾಂಗ್ರೆಸ್ ಪಕ್ಷವನ್ನು ನಮ್ಮ ಜೆಡಿಎಸ್ ಪಕ್ಷವು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ತಾಲ್ಲೂಕು ಅಧ್ಯಕ್ಷ ಎಸ್ ಎಂ ಹರೀಶ್ ಗೌಡ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿರುವ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ ಎಸ್ ಎಸ್ ಎನ್ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟಿಗೆ ಜೆಡಿಎಸ್ ಮೈತ್ರಿ ಆಗಿದ್ದು ಜೆಡಿಎಸ್ ಪಕ್ಷದಿಂದ ನಾಲ್ಕು ನಿರ್ದೇಶಕರು ಜಯಗಳಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು.ಚುನಾವಣೆ ಸಂದರ್ಭದಲ್ಲಿ ನೀಡಿದ ಮಾತಿನಂತೆ ಪ್ರಸ್ತುತ ಜೆಡಿಎಸ್ ಸದಸ್ಯರಿಗೆ ಅಧಿಕಾರ ಪಟ್ಟ ಕೊಡಬೇಕಿತ್ತು. ಆದರೆ ಕಾಂಗ್ರೆಸ್ ಸ್ಥಾನ ಗಟ್ಟಿಮಾಡಿಕೊಳ್ಳಲು ನಮ್ಮ ಪಕ್ಷದ ಸದಸ್ಯರನ್ನು ಮೂಲಗುಂಪು ಮಾಡಿ  ತಾನೇ ಅಧಿಕಾರ ಪಡೆದಿದ್ದು ವಿ. ಎಸ್. ಎಸ್. ಎನ್. ನಿರ್ದೇಶಕರಾದ ಅಶ್ವಥ್ ನಾರಾಯಣ್ ಹಾಗೂ  ರಾಮಮೂರ್ತಿಯವರಿಗೆ ಕೊಟ್ಟ ಮಾತನ್ನು ಕಾಂಗ್ರೆಸ್ ತಪ್ಪಿದೆ. ಒಟ್ಟಾರೆ ಜೆಡಿಎಸ್ ಪಕ್ಷಕ್ಕೆ ಸಲ್ಲಬೇಕಿದ್ದ ಅಧಿಕಾರವನ್ನು ಕಾಂಗ್ರೆಸ್ ಕುತಂತ್ರದಿಂದ ಪಡೆದುಕೊಂಡಿದೆ ಎಂದರು.

 ಕೊಟ್ಟ ಮಾತು ತಪ್ಪಿದೆ ಕಾಂಗ್ರೆಸ್ :
 ಕೆಸ್ತೂರು ವಿ ಎಸ್ ಎಸ್ ಎನ್ ವೇಳೆ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಮಾಡಿಕೊಂಡಿತ್ತು. ಅಲ್ಲದೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬೆಂಬಲ ಸೂಚಿಸಿದ್ದ ಜೆಡಿಎಸ್ ನಿರ್ದೇಶಕರಿಗೆ ಅಧಿಕಾರ ಹಂಚಿಕೆಯ ಭರವಸೆ ನೀಡಿತ್ತು.ಆದರೆ ಅಧಿಕಾರ ಹಸ್ತಾಂತರ ಸಮಯ ಬಂದಾಗ ಜೆಡಿಎಸ್ ಪಕ್ಷದ ನಿರ್ದೇಶಕರನ್ನು ಕಡೆಗಣಿಸಿ ಅಧಿಕಾರವನ್ನು ಕಸಿದುಕೊಂಡಿದೆ. ಈ ಮೂಲಕ ಕಾಂಗ್ರೆಸ್ ತಾನು ಕೊಟ್ಟ ಮಾತನ್ನು ತಪ್ಪಿದೆ ಈ ನಿಲುವನ್ನು ದೊಡ್ಡಬಳ್ಳಾಪುರ ಜೆಡಿಎಸ್ ತೀವ್ರವಾಗಿ ಖಂಡಿಸುವುದಲ್ಲದೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಸ್ಪರ್ಧಿಸಿ ಜೆಡಿಎಸ್ ತನ್ನ ಶಕ್ತಿಪ್ರದರ್ಶನ ಮಾಡಲಿದೆ ಎಂದು ತಾಲ್ಲೂಕು ಅಧ್ಯಕ್ಷ  ಹರೀಶ್ ಗೌಡ ತಿಳಿಸಿದರು.

ಎನ್ ಡಿ ಎ ಮೈತ್ರಿ ಕುರಿತು ರಾಜ್ಯ ವರಿಷ್ಟರಿಂದ ಈವರೆಗೂ  ಕೇವಲ ಲೋಕಸಭೆ ಚುನಾವಣೆಯಲ್ಲಿ ಮೈತಿ ಪಾಲನೆ ಮಾಡಬೇಕೆಂದು ತಿಳಿಸಿದೆ ಹೊರತು ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಪಾಲನೆ ಮಾಡಬೇಕು ಎಂದು ಆದೇಶ ಇಲ್ಲ. ಸ್ಥಳೀಯವಾಗಿ ಪಕ್ಷದ ಅಗತ್ಯತೆಗೆ ತಕ್ಕಂತೆ ಮೈತ್ರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳನ್ನು  ರಾಜ್ಯದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.. ಕಳೆದ ನಾಲ್ಕು ತಿಂಗಳ ಹಿಂದೆ ತಾಲೂಕಿಗೆ ಆಗಮಿಸಿದ್ದ ಕೋರ್ ಕಮಿಟಿ ಅಧ್ಯಕ್ಷರಾದ ಕೃಷ್ಣಾರೆಡ್ಡಿ ಅವರು ಪಕ್ಷದ ಕಚೇರಿಗಳಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.ಅಲ್ಲದೆ ನೂತನ ಜಿಲ್ಲಾಧ್ಯಕ್ಷರಾದ ಮಂಜುನಾಥ್ ರವರು  ತಾಲ್ಲೂಕಿನಲ್ಲಿ ಮೂರ್ನಾಲ್ಕು ಬಾರಿ ಸಭೆ ನಡೆಸಿ  ತಾಲ್ಲೂಕು  ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.

ನೂತನ ಪದಾಧಿಕಾರಿಗಳ ಘೋಷಣೆ ಅದಾಗಿನಿಂದ  ತಾಲೂಕಿನಲ್ಲಿ ಕೆಲ ಪ್ರಮುಖರು ಕೋರ್ ಕಮಿಟಿ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರನ್ನು ಹಾಗೂ ತಾಲೂಕು ಕಮಿಟಿ ಸದಸ್ಯರನ್ನು ಏಕವಚನದಲ್ಲಿ, ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ರಾಜ್ಯ ಸಮಿತಿಗೆ ಸವಿಸ್ತಾರವಾಗಿ ತಿಳಿದಿದೆ. ಅಲ್ಲದೆ ರಾಜ್ಯ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ಬೆಳ್ಳಿಹಬ್ಬ ಕಾರ್ಯಕ್ರಮಕ್ಕೆ ಬರುವ ಸಂದರ್ಭದಲ್ಲಿ ಅವರು ಬಳಸಿದ ಭಾಷೆ ಹಾಗೂ ಕಾರ್ಯಕ್ರಮ ಕೆಡಿಸಲು ಮಾಡಿದ ಹುನ್ನಾರದ ಬಗ್ಗೆಯು  ರಾಜ್ಯದ ವರಿಷ್ಟರಿಗೆ ಮಾಹಿತಿ ಇದ್ದು  ಸೂಕ್ತ ಸಮಯ ಬಂದಾಗ ಉತ್ತಮ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು.

ಕೆಸ್ತೂರು ವಿ ಎಸ್ ಎಸ್ ಎನ್ ನಿರ್ದೇಶಕ ರಾಮಾಮೂರ್ತಿ ಮಾತನಾಡಿ ನಾನೊಬ್ಬ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ 3 ವರ್ಷ ಮತ್ತು ಜೆಡಿಎಸ್  2ವರ್ಷ ಅಧಿಕಾರ ಪಡೆಯುವುವಂತೆ ಒಪ್ಪಂದವಾಗಿತ್ತು.ಅದರಂತೆ ನಾನು ಕೇವಲ ಆರು ತಿಂಗಳು  ಅಧ್ಯಕ್ಷರ ಸ್ಥಾನ ಬಿಟ್ಟು ಕೊಡುವಂತೆ  ಜೆಡಿಎಸ್ ಮುಖಂಡರಾದ ಹುಸ್ಕೂರ್ ಆನಂದ್ ರವರನ್ನು ಕೇಳಿಕೊಂಡಿದ್ದೆ. ಅವರು ಸಹ ಕೊಡಲು ಒಪ್ಪಿದ್ದರು. 

 ಆದರೆ ಕಳೆದ ವಿ ಎಸ್ ಎಸ್ ಎನ್ ಅಧ್ಯಕ್ಷರ ಚುನಾವಣೆಯಲ್ಲಿ ನನಗೆ ಅವಕಾಶ ನೀಡದೆ  ಗಮನಕ್ಕೂ ತರದೆ  ಏಕಾ ಏಕಿ ತೀರ್ಮಾನಿಸಿ  ಕಾಂಗ್ರೆಸ್ ಅಭ್ಯರ್ಥಿಗೆ  ನಾಮಪತ್ರ ಸಲ್ಲಿಸುವಂತೆ ಮಾಡಿ ಬೆಂಬಲಿಸಿದ್ದಾರೆ . ಸ್ವಂತ ಪಕ್ಷದವರೇ ನಮಗೆ ಮೋಸ ಮಾಡಿದರೆ  ನಾವು ಯಾರನ್ನು ಕೇಳಬೇಕು  ರಾಜ್ಯದ ವರಿಷ್ಠರು ಈ ಕುರಿತು  ಗಮನ ಹರಿಸಿ ಜೆಡಿಎಸ್ ಕಾರ್ಯಕರ್ತರು ಉಳಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೆಸ್ತೂರು ವಿ ಎಸ್ ಎಸ್ ಎನ್ ನಿರ್ದೇಶಕ ಮಂಡಿಬ್ಯಾಡರಹಳ್ಳಿ ಅಶ್ವಥ್ ನಾರಾಯಣ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಒಟ್ಟಿಗೆ ಮೈತ್ರಿ ಮಾಡಿಕೊಂಡಿದ್ದು ಸತ್ಯ.ಆದರೆ ಚುನಾವಣೆ ಫಲಿತಾಂಶದ ನಂತರ ಮೂರು ಬಾರಿ ಅತ್ಯಂತ ಹೆಚ್ಚು ಮತಗಳನ್ನು ಪಡೆದು ಗೆದ್ದಿರುವ ರಾಮಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದೆವು.ಆ ಸಂದರ್ಭದಲ್ಲಿ ಹುಸ್ಕೂರ್ ಆನಂದ್ ರವರು ನನ್ನ ತಾಯಿಗೆ ವಯಸ್ಸಾಗಿದೆ ನಮಗೆ ಮೊದಲ ಅವಕಾಶ ಕೊಡಿ ನಂತರ ರಾಮಮೂರ್ತಿಯವರನ್ನು ಅಧ್ಯಕ್ಷರನ್ನಾಗಿ ಮಾಡೋಣ ಎಂದಿದ್ದರು.

ತದನಂತರ ಎರಡನೇ ಬಾರಿ  ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾದಾಗ ಈ ಬಾರಿಯಾದರೂ ರಾಮಮೂರ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಕೇಳಿದ್ದೆವು. ಆಗ ಹುಸ್ಕೂರ್ ಆನಂದ್ ರವರು ಇಲ್ಲ ನಾನು ಕಾಂಗ್ರೆಸ್ ಅವರಿಗೆ ಮಾತು ಕೊಟ್ಟಿದ್ದೇನೆ. ಅವರನ್ನೇ ಅಧ್ಯಕ್ಷನಾಗಿ ಆಯ್ಕೆ ಮಾಡುತ್ತೇನೆ ಎಂದು ನಮ್ಮ ನಾಲ್ಕು ಜೆಡಿಎಸ್ ಮತಳಲ್ಲಿ ಎರಡು ಮತಗಳನ್ನು ಕಾಂಗ್ರೆಸ್ ಪರ ನೀಡಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷರಾಗಿ ಪ್ರಕ್ರಿಯೆಯಲ್ಲಿ ರಾಮಮೂರ್ತಿ ಅವರಿಗೆ ಅವಕಾಶ ನೀಡದೆ ನೇರವಾಗಿ ಕಾಂಗ್ರೆಸ್ ಬೆಂಬಲಿಸಿ ಸ್ವಪಕ್ಷಯರಿಗೆ ಅವಕಾಶ ಕೊಡದೆ ವಂಚಿಸಿದ್ದಾರೆ. ನಮ್ಮ ಪಕ್ಷದವರೇ ನಮಗೆ ವಂಚಿಸಿದರೆ ನಾವು ಯಾರಬಳಿ ನ್ಯಾಯ ಕೇಳಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

 ಈ ವೇಳೆ ತಾಲೂಕು ಜೆಡಿಎಸ್ ನ ಮುಖಂಡರಾದ ತ. ನ. ಪ್ರಭುದೇವ್, ಕೆಂಪರಾಜ್, ಪ್ರಭಾಕರ್, ನಾಗರಾಜ್, ಪ್ರವೀಣ್, ಅಶ್ವಥ್ ನಾರಾಯಣ್ ಸೇರಿದಂತೆ ಜೆಡಿಎಸ್ ಪದಾಧಿಕಾರಿಗಳು ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!