E-PAPER
18 Nov 2026, 12:29:55 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನಿದ್ರೆ ಮರೆಸುವಂತಹ ದೊಡ್ಡ ಕನಸು ಕಾಣಿ: ಪದವೀಧರರಿಗೆ ರಾಜ್ಯಪಾಲರ ಕಿವಿಮಾತು

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ 14ನೇ ಘಟಿಕೋತ್ಸವ ಸಂಪನ್ನ; ಮೂವರಿಗೆ ಗೌರವ ಡಾಕ್ಟರೇಟ್
ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
"ಪದವಿ ಪ್ರಮಾಣಪತ್ರವು ಕೇವಲ ಕಾಗದದ ತುಂಡಲ್ಲ, ಅದು ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಸಾಧನೆಯ ಪ್ರತಿಫಲ. ವಿದ್ಯಾರ್ಥಿಗಳು ನಿದ್ರೆಯಲ್ಲಿ ಕಾಣುವ ಕನಸುಗಳಿಗಿಂತ, ನಿದ್ರೆಯನ್ನೇ ಮರೆಸುವಷ್ಟು ದೊಡ್ಡ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಲು ಶ್ರಮಿಸಬೇಕು" ಎಂದು ರಾಜ್ಯಪಾಲ ಡಾ. ಸುಧಾ ಯಾದವ್ ಕರೆ ನೀಡಿದರು.

ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯನಗರ ಸಾಮ್ರಾಜ್ಯದ ಹೆಸರಿನ ಈ ವಿವಿಗೆ ತನ್ನದೇ ಆದ ಮಹತ್ವವಿದೆ. ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ನವೀನ ಸಂಶೋಧನೆಗಳ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು. ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹೊಣೆ ಯುವಕರ ಮೇಲಿದೆ ಎಂದರು.

ಮೂವರಿಗೆ ಗೌರವ ಡಾಕ್ಟರೇಟ್: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಹೆನ್ರಿ ಡಿಸೋಜಾ (ಶಿಕ್ಷಣ, ಸಮಾಜಸೇವೆ), ಲೋಹಿಯಾ ಚನ್ನಬಸವಣ್ಣ ಸಿ. (ಸಾಹಿತ್ಯ, ಪರಿಸರ, ಸಮಾಜಸೇವೆ) ಮತ್ತು ಗೀತಾ ನಾಗಪಾಲ್ (ಶಿಕ್ಷಣ, ಕಲೆ, ಸಮಾಜಸೇವೆ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಚಿನ್ನದ ಪದಕ ಮತ್ತು ಪಿಹೆಚ್‌ಡಿ: ಒಟ್ಟು 42 ವಿದ್ಯಾರ್ಥಿಗಳು 50 ಚಿನ್ನದ ಪದಕಗಳನ್ನು ಹಂಚಿಕೊಂಡರು. 52 ಸಂಶೋಧನಾರ್ಥಿಗಳಿಗೆ ಪಿಹೆಚ್‌ಡಿ ಹಾಗೂ 137 ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣಪತ್ರ ನೀಡಲಾಯಿತು.

ಸಾಧಕರು: ಸ್ನಾತಕೋತ್ತರ ವಿಭಾಗದಲ್ಲಿ ವಾಣಿಜ್ಯಶಾಸ್ತ್ರದ ಸವಿತಾ (4 ಚಿನ್ನ) ಹಾಗೂ ಔದ್ಯೋಗಿಕ ರಸಾಯನಶಾಸ್ತ್ರದ ತಸ್ಮಿಯಾಬಾನು ಆರ್. (3 ಚಿನ್ನ) ಅಗ್ರಸ್ಥಾನ ಪಡೆದರು. ಉಜ್ಜನಿ ಈಶ್ವರ, ಸಮ್ರೀನ್, ಪದ್ಮಾವತಿ ಕೆ. ಹಾಗೂ ಮಹಾಲಿಂಗಪ್ಪ ತಂಬ್ರಹಳ್ಳಿ ತಲಾ ಎರಡು ಚಿನ್ನದ ಪದಕ ಪಡೆದರು. ಸ್ನಾತಕ ವಿಭಾಗದಲ್ಲಿ ಪೂಜಾ (ಬಿ.ಕಾಂ), ಅಜಯ್ (ಬಿ.ಎಸ್ಸಿ), ಬಸಮ್ಮ (ಬಿ.ಎ) ಹಾಗೂ ಬಿ. ಕಾವ್ಯ (ಬಿ.ಎಸ್‌ಡಬ್ಲ್ಯೂ) ಚಿನ್ನದ ಪದಕಕ್ಕೆ ಭಾಜನರಾದರು.

ಶೇ.95.33 ಫಲಿತಾಂಶ: ಈ ಬಾರಿ ಒಟ್ಟು ಶೇ.95.33ರಷ್ಟು ಫಲಿತಾಂಶ ದಾಖಲಾಗಿದ್ದು, ಸ್ನಾತಕ ಪದವಿಯಲ್ಲಿ 13,346 ಹಾಗೂ ಸ್ನಾತಕೋತ್ತರ ಮತ್ತು ಡಿಪ್ಲೊಮಾದಲ್ಲಿ 1,448 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್ ಮುಖ್ಯ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಕುಲಪತಿ ಪ್ರೊ. ಎಂ. ಮುನಿರಾಜು, ಕುಲಸಚಿವರಾದ ಪ್ರೊ. ವಿ. ಲೋಕೇಶ್, ಪ್ರೊ. ಪಿ. ಕಣ್ಣನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದವಲ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಹೂ ಕೋಸು ನಾರು ಪೂರೈಕೆ:ಬೆಳೆ ನಾಶವಾಗಿ ಕಂಗಾಲಾದ ರೈತಬಸವಣ್ಣನವರ ಮೇಲೆ ಕಳಂಕದ ಮಾತು ಸಲ್ಲದು; ಅವರ ವಚನಗಳೇ ಆರೋಪಗಳಿಗೆ ಕನ್ನಡಿ!ಬಿಲ್ಕಿಸ್ ಬಾನೋ ಪ್ರಕರಣ: 17 ವರ್ಷ ಜೈಲುವಾಸ ಪೂರೈಸಿದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು'ಪ್ರೆಸ್' ಸ್ಟಿಕ್ಕರ್ ಬಳಸಿ ಶವ ಸಾಗಾಟ: ರಾಜಾಜಿನಗರ ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿ ಕರಾಳ ಮುಖ ಬಯಲು!ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಬೇಡ: ಯುರೋಪ್ ರಾಜಕಾರಣಿ ಹೇಳಿಕೆಗೆ ಇಟಲಿ ಸಂಸದೆ ಡೆಬೊರಾ ಬೆರ್ಗಾಮಿನಿ ತಿರುಗೇಟುಯುಪಿ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: 181 ಸೀಟುಗಳ ಪಟ್ಟಿ ಸಲ್ಲಿಕೆ, ಎಸ್‌ಪಿ ಜೊತೆ ಮಹತ್ವದ ಸಭೆವಿಧಾನ ಪರಿಷತ್‌ನ ನಾಲ್ವರು ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರನಿಗಮ-ಮಂಡಳಿ ನೇಮಕಾತಿ: ಕಾಂಗ್ರೆಸ್‌ನಲ್ಲಿ ಭಿನ್ನಮತ, ಆರ್‌ಎಸ್‌ಎಸ್ ಕಾರ್ಯಕರ್ತರ ಸೇರ್ಪಡೆಗೆ ತೀವ್ರ ಆಕ್ಷೇಪಹಿರಿಯೂರು ಉಪಚುನಾವಣೆ-ಎನ್‌ಡಿಎ ಮೈತ್ರಿಯಲ್ಲಿ ಟಿಕೆಟ್ ಕಗ್ಗಂಟು!ಹಿರಿಯೂರು ಉಪಚುನಾವಣೆ: ಬಿಜೆಪಿಯ ದೆಹಲಿ ಅಂಗಳಕ್ಕೆ ಮೂವರ ಹೆಸರು ರವಾನೆ?