Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರುದ್ರಾಕ್ಷಿಮಠಕ್ಕೆ ಡಿ.ಕೆ.ಶಿವಕುಮಾರ್ ಭೇಟಿ: ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳ ಆಶೀರ್ವಾದ

​ ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಬೆಳಗಾವಿಯ ಪ್ರಸಿದ್ಧ ನಾಗನೂರು ಶ್ರೀ ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ
, ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರ ದಿವ್ಯ ಆಶೀರ್ವಾದ ಪಡೆದುಕೊಂಡರು.

​ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಸಾಂಪ್ರದಾಯಿಕವಾಗಿ ಹಾಗೂ ಭಕ್ತಿಯಿಂದ ಸ್ವಾಗತಿಸಲಾಯಿತು. ನಂತರ ಶ್ರೀಗಳ ಚರಣಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್ ಅವರು ಮಠದ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕುರಿತು ಶ್ರೀಗಳೊಂದಿಗೆ ಚರ್ಚಿಸಿದರು.

​​ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಹಲವು ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

​ಸಚಿವರಾದ ಸತೀಶ್ ಜಾರಕಿಹೊಳಿ, ಎಸ್.ಎಸ್. ಮಲ್ಲಿಕಾರ್ಜುನ, ​ ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಶಾಸಕರಾದ ಆಸೀಫ್ ಸೇಠ್, ಸಿ.ಎಸ್. ನಾಡಗೌಡ, ಮಹಾಂತೇಶ್ ಕೌಜಲಗಿ, ಬಾಬಾಸಾಹೇಬ್ ಪಾಟೀಲ್, ​ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ​ಇವರೊಂದಿಗೆ ಸಾಲು ಸಾಲು ಸ್ಥಳೀಯ ನಾಯಕರು ಹಾಗೂ ಪ್ರಮುಖ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಗಳ ಆಶೀರ್ವಾದ ಪಡೆದ ನಂತರ ಮುಖ್ಯಮಂತ್ರಿಗಳು ಬೆಳಗಾವಿಯ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೂಢಿಯ ಗೋಡೆಯಾಚೆ ಚಿಂತನೆಯ ಹೊಸ ಕಿಟಕಿ ತೆರೆಯಲಿಮಹರ್ಷಿ ವಾಲ್ಮೀಕಿ — ವ್ಯಕ್ತಿತ್ವದ ಉನ್ನತಿಗೆ ಜ್ಞಾನದ ದಾರಿದೀಪನವೆಂಬರ್ 2ಕ್ಕೆ ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿದ್ದರಾಮಯ್ಯ: 'ಸ್ಟಿಂಗ್' ಷಡ್ಯಂತ್ರದ ಕುರಿತು ಚರ್ಚೆಎಸ್‌ಸಿ-ಎಸ್‌ಟಿ ಕಾಯ್ದೆ ಅನ್ವಯಕ್ಕೆ 'ಜಾತಿ ಆಧಾರಿತ ಅವಮಾನ'ದ ಸ್ಪಷ್ಟ ಆರೋಪ ಕಡ್ಡಾಯ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪುಪ್ರಧಾನಿ ಮೋದಿಗೆ ಹೇಳಿ ಜ್ಞಾನೇಶ್ ಕುಮಾರ್ ವಜಾ ಮಾಡಿಸಿ, 30 ಸೆಕೆಂಡುಗಳಲ್ಲಿ ಪ್ರತಿಭಟನೆ ವಾಪಸ್: ರಾಹುಲ್ದೆಹಲಿಯ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಬೆಂಕಿ ಅವಘಡ: ಆರು ಅಗ್ನಿಶಾಮಕ ವಾಹನಗಳಿಂದ ಕಾರ್ಯಚರಣೆಖರ್ಗೆ ಹೇಳಿಕೆ ಕ್ಷಮಾರ್ಹವಲ್ಲ: ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶಕನ್ನಡಿಗರಿಗೆ ಉದ್ಯೋಗ: ಕೌಶಲ ಅಭಿವೃದ್ಧಿಗೆ ಮೋಹನ್ ದಾಸ್ ಪೈ ಆಗ್ರಹಬಿಜೆಪಿ ನಾಯಕರ ಬೃಹತ್ ಧರಣಿ; ಖರ್ಗೆ ಕ್ಷಮೆಯಾಚನೆಗೆ ಒತ್ತಾಯಪ್ರಧಾನಿ ಮೋದಿ ವಿರುದ್ಧ ಖರ್ಗೆ 'ವಿವಾದಾತ್ಮಕ' ಹೇಳಿಕೆ: ದೇಶಾದ್ಯಂತ ಬಿಜೆಪಿ ಉಗ್ರ ಪ್ರತಿಭಟನೆ, ರಾಜೀನಾಮೆಗೆ ಆಗ್ರಹ!