Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿಜೆಪಿ ನಾಯಕರ ಬೃಹತ್ ಧರಣಿ; ಖರ್ಗೆ ಕ್ಷಮೆಯಾಚನೆಗೆ ಒತ್ತಾಯ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲೂ ಪ್ರತಿಭಟನೆಯ ಬಿಸಿ ತಟ್ಟಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಬೃಹತ್ ಧರಣಿ ನಡೆಸಿ ಖರ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ರಾಜನಾಥ್ ಸಿಂಗ್ ತೀವ್ರ ಆಘಾತ, ಖಂಡನೆ:
ಖರ್ಗೆ ಅವರ ಹೇಳಿಕೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಪ್ರಧಾನಿ ಮೋದಿ ಅವರ ದಿವಂಗತ ತಂದೆಯ ಕುರಿತು ಇಂತಹ ಕೆಳಮಟ್ಟದ ಟೀಕೆ ಮಾಡಿರುವುದು ನನಗೆ ತೀವ್ರ ಆಘಾತ ಮತ್ತು ನೋವು ತಂದಿದೆ" ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಈ ಪ್ರಕರಣದಲ್ಲಿ ಅತ್ಯಂತ ಬೇಸರದ ಸಂಗತಿಯೆಂದರೆ, ಈ ರೀತಿಯ ಹೇಳಿಕೆಯನ್ನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನೋ ಅಥವಾ ಯುವ ನಾಯಕನೋ ನೀಡಿಲ್ಲ; ಬದಲಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇಂತಹ ಮಾತುಗಳನ್ನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತುಗಳು ಕೇವಲ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಮಾಡಿದ ಅವಮಾನವಲ್ಲ, ಬದಲಿಗೆ ಇಡೀ ಭಾರತ ದೇಶಕ್ಕೆ ಎಐಸಿಸಿ ಅಧ್ಯಕ್ಷರು ಮಾಡಿದ ಅವಮಾನ" ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಲ್ಟಾ ಪಟಾಕಿ: ಹಳೆ ಘಟನೆಗಳ ನೆನಪು:
ಬಿಜೆಪಿಯ ಪ್ರತಿಭಟನೆ ಮತ್ತು ಟೀಕೆಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ದ್ವಿಪಾಪತ ನೀತಿಯನ್ನು ಪ್ರಶ್ನಿಸಿದೆ. "ಈ ಹಿಂದೆ ಸೋನಿಯಾ ಗಾಂಧಿ ಹಾಗೂ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿದಾಗ ಈ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಎಲ್ಲಿ ಬಚ್ಚಿಟ್ಟಿದ್ದರು?" ಎಂದು ಕಾಂಗ್ರೆಸ್ ಪ್ರಶಿಸಿದೆಯಲ್ಲದೆ, ಬಿಜೆಪಿಯದ್ದು ರಾಜಕೀಯ ಪ್ರೇರಿತ ನಾಟಕ ಎಂದು ಕರೆದಿದೆ.

ಒಟ್ಟಿನಲ್ಲಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ನಾಯಕರ ನಡುವಿನ ಈ ವಾಗ್ದಾಳಿ ಹಾಗೂ ಪ್ರತಿಭಟನೆಗಳು ದೇಶದ ರಾಜಕೀಯ ಕಾដಕಿಚ್ಚನ್ನು ಮತ್ತಷ್ಟು ಹೆಚ್ಚಿಸಿವೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೂಢಿಯ ಗೋಡೆಯಾಚೆ ಚಿಂತನೆಯ ಹೊಸ ಕಿಟಕಿ ತೆರೆಯಲಿಮಹರ್ಷಿ ವಾಲ್ಮೀಕಿ — ವ್ಯಕ್ತಿತ್ವದ ಉನ್ನತಿಗೆ ಜ್ಞಾನದ ದಾರಿದೀಪನವೆಂಬರ್ 2ಕ್ಕೆ ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿದ್ದರಾಮಯ್ಯ: 'ಸ್ಟಿಂಗ್' ಷಡ್ಯಂತ್ರದ ಕುರಿತು ಚರ್ಚೆಎಸ್‌ಸಿ-ಎಸ್‌ಟಿ ಕಾಯ್ದೆ ಅನ್ವಯಕ್ಕೆ 'ಜಾತಿ ಆಧಾರಿತ ಅವಮಾನ'ದ ಸ್ಪಷ್ಟ ಆರೋಪ ಕಡ್ಡಾಯ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪುಪ್ರಧಾನಿ ಮೋದಿಗೆ ಹೇಳಿ ಜ್ಞಾನೇಶ್ ಕುಮಾರ್ ವಜಾ ಮಾಡಿಸಿ, 30 ಸೆಕೆಂಡುಗಳಲ್ಲಿ ಪ್ರತಿಭಟನೆ ವಾಪಸ್: ರಾಹುಲ್ದೆಹಲಿಯ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಬೆಂಕಿ ಅವಘಡ: ಆರು ಅಗ್ನಿಶಾಮಕ ವಾಹನಗಳಿಂದ ಕಾರ್ಯಚರಣೆಖರ್ಗೆ ಹೇಳಿಕೆ ಕ್ಷಮಾರ್ಹವಲ್ಲ: ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶಕನ್ನಡಿಗರಿಗೆ ಉದ್ಯೋಗ: ಕೌಶಲ ಅಭಿವೃದ್ಧಿಗೆ ಮೋಹನ್ ದಾಸ್ ಪೈ ಆಗ್ರಹಬಿಜೆಪಿ ನಾಯಕರ ಬೃಹತ್ ಧರಣಿ; ಖರ್ಗೆ ಕ್ಷಮೆಯಾಚನೆಗೆ ಒತ್ತಾಯಪ್ರಧಾನಿ ಮೋದಿ ವಿರುದ್ಧ ಖರ್ಗೆ 'ವಿವಾದಾತ್ಮಕ' ಹೇಳಿಕೆ: ದೇಶಾದ್ಯಂತ ಬಿಜೆಪಿ ಉಗ್ರ ಪ್ರತಿಭಟನೆ, ರಾಜೀನಾಮೆಗೆ ಆಗ್ರಹ!