ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡತುಮಕೂರು ಹಾಗೂ ಕೊಡಿಗೇಹಳ್ಳಿ, ಕಾಡನೂರು ಗ್ರಾಮ ಪಂಚಾಯತಿಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಾ. ವಾಸಂತಿ ಅಮರ್ ರವರು ಇಂದು ಭೇಟಿ ನೀಡಿ
ಚಿಕ್ಕತುಮಕೂರು ಗ್ರಾಮದ ಕೆರೆಯಲ್ಲಿ ಕೈಗಾರಿಕೆಯ ತ್ಯಾಜ್ಯ ನೀರಿನ STP ಪ್ಲಾಂಟ್ ಪರಿಶೀಲಿಸಿ ಜನರಿಗೆ ಕುಡಿಯುವ ನೀರು ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು,
ನಂತರ ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರುಬರಹಳ್ಳಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಯ ಹೊಸ ಬೋರ್ವೆಲ್ ವೀಕ್ಷಣೆ ಮಾಡಿದರು ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರ ಜೊತೆ ಸಮಾಲೋಚಿಸಿದರು.
ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಾ. ಬಿ ಆರ್ ಅಂಬೇಡ್ಕರ್ ಮೆರಿಟ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ನಿಲಯದ ವಿದ್ಯಾರ್ಥಿಗಳ ಜೊತೆ ಸ್ವಚ್ಛತೆ ಮತ್ತು ಊಟದ ಬಗ್ಗೆ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ಆರ್ ಡಬ್ಲ್ಯೂ ಎಸ್ ಎ ಇ ಇ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು/ ಸಿಬ್ಬಂದಿಗಳು ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.



