ಚಂದ್ರವಳ್ಳಿ ನ್ಯೂಸ್, ದೊದ್ದಬಳ್ಳಾಪುರ:
ರಾಜಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದನಾಯಕನ ಪಾಳ್ಯ ಗ್ರಾಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ವಾಸಂತಿ ಅಮರ್ ರವರು ಇಂದು ಭೇಟಿ ನೀಡಿ ಸಾರ್ವಜನಿಕರ ಕುಡಿಯುವ ನೀರು, ಜಲ ಜೀವನ ಮಿಷನ್ O H T ಕಾಮಗಾರಿ, R O ಘಟಕ ಕುಡಿಯುವ ನೀರು ಪರಿಶೀಲಿಸಿದರು.
Also read
ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ನಂತರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಬಿಸಿ ಊಟ ಸವಿದರು.
ಈ ಸಂದರ್ಭದಲ್ಲಿ ಆರ್ ಡಬ್ಲ್ಯೂ ಎಸ್.ಎ ಇ ಇ , ತಾಲ್ಲೂಕು ಮಟ್ಟದ ಅಧಿಕಾರಿಗಳು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು/ ಸಿಬ್ಬಂದಿಗಳು ಉಪಸ್ಥಿತರಿದ್ದರು.



