LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಾ. ರಾಜ್ ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ-ಕನ್ನಡ ಪರ ಸಂಘಟನೆಗಳ ಆಕ್ರೋಶ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್ ಮತ್ತು ಹಿರಿಯ ನಟಿ ಲೀಲಾವತಿ ಅವರ ಹೆಸರನ್ನು ಬಳಸಿ ಕೆಲವರು ಅಪಪ್ರಚಾರ ಮಾಡಿ ಅವರ ಹೆಸರಿಗೆ ಕಳಂಕ ತರುವ ಹಾಗು ಚಾರಿತ್ರ್ಯ ತೇಜೋವಧೆ ಮಾಡಲು  ಯತ್ನಿಸಿದ್ದಾರೆ ಎಂದು ದೊಡ್ಡಬಳ್ಳಾಪುರ ಕನ್ನಡ ಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ನಗರದ ಜಯಚಾಮರಾಜೇಂದ್ರ ವೃತ್ತ ದಲ್ಲಿರುವ ಡಾ.ರಾಜ್‌ಕುಮಾರ್ ಪುತ್ಥಳಿಯ ಮುಂದೆ ವಿವಿಧ ಕನ್ನಡ ಸಂಘಟನೆ ಗಳ ನೇತೃತ್ವದಲ್ಲಿ ಎನ್.ಆರ್.ರಮೇಶ್ ಬರೆದಿರುವ 'ಲೀಲಮ್ಮ ನಿನ್ನ ಗಂಡ ಯಾರಮ್ಮ' ಪುಸ್ತಕ ಬಿಡುಗಡೆ ಮಾಡಿ ನಂತರ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು. ನರಸಿಂಹಮೂರ್ತಿ  ಮಾತನಾಡಿ ಕೆಲ ಗಾಳಿ ಸುದ್ದಿ ಗಳು ಆಗಾಗ್ಗೆ ಡಾ. ರಾಜ್ ಹಾಗೂ ಲೀಲಾವತಿ ರವರ ಕುರಿತಾಗಿ ತಪ್ಪು ಮಾಹಿತಿಗಳನ್ನು ಹರಡುವ ಪ್ರಯತ್ನ ಗಳಾಗಿ ನಡೆದಿದ್ದವು. ಅವುಗಳಿಗೆ ಈ ಪುಸ್ತಕದಲ್ಲಿ ಕೆಲ ಉತ್ತರಗಳು ದೊರೆತಿವೆ. ಅದು ಈ ಸಮಾಜಕ್ಕೆ ಸಂದೇಶ ಕೊಡುತ್ತದೆ ಎಂದು ತಿಳಿಸಿದರು.

ಡಾ.ರಾಜಕುಮಾರ್ ಅವರ ಮೇರು ಬದುಕಿಗೆ ಕಳಂಕ ಹಚ್ಚಲು ಕೆಲವರು ಲೀಲಾವತಿಯವರ ಹೆಸರನ್ನು ರಾಜಕಾರಣ ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಬಳಸಿ ಒಳಸಂಚು ನಡೆಸಿದ್ದುತೀರಾ ಕಂಡನೀಯ.ಕನ್ನಡ ಚಿತ್ರರಂಗದಲ್ಲಿ ಮೇರುನಟ ಡಾ. ರಾಜಕುಮಾರ್ ಮತ್ತು ಹಿರಿಯ ನಟಿ ಲೀಲಾವತಿ ಅವರು ಅನೇಕ ಚಲನಚಿತ್ರಗಳು ಯಶಸ್ಸು ಕಂಡ ಜನಪ್ರಿಯ ಜೋಡಿಯಾಗಿದ್ದರು

ಡಾ.ರಾಜ್‌ಕುಮಾ‌ರ್ ಅವರ ರೀತಿಯಲ್ಲೇ ಲೀಲಾವತಿ ಅವರೂ ಕೂಡ ಅಪ್ರತಿಮ ಕಲಾವಿದರು. ಅಭಿಜಾತ ಕಲಾವಿದರ ಮಾದರಿಯಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದವರು. ತಮ್ಮ ಇಡೀ ಬದುಕಿನಲ್ಲಿ ಡಾ.ರಾಜ್‌ಕುಮಾರ್ ಅವರಾಗಲೀ, ಲೀಲಾವತಿ ಅವರಾಗಲೀ ಎಂದಿಗೂ ಪರಸ್ಪರ ಅಗೌರವದಿಂದ ನಡೆದುಕೊಂಡವರಲ್ಲ. ಅದೇ ರೀತಿ ಯಾವುದೇ ಆರೋಪ - ಪ್ರತ್ಯಾರೋಪಗಳನ್ನೂ ಮಾಡಿದವರೂ ಅಲ್ಲ. ಆದರೆ, ಒಬ್ಬ ಮೇರುನಟನ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿ, ಅನಗತ್ಯವಾಗಿ ಕೆಟ್ಟ ಹೆಸರು ತರಲು ನಡೆದ ಪ್ರಯತ್ನಗಳು ವಿಷಾದನೀಯ ಎಂದರು. 

ಈ ಸಂದರ್ಭದಲ್ಲಿ. ನಗರಸಭೆ ಅಧ್ಯಕ್ಷೆ ಪ್ರಭಾ ನಾಗರಾಜ್, ಮಾಜಿ ಅಧ್ಯಕ್ಷತ.ನ. ಪ್ರಭುದೇವ್, ಕನ್ನಡಪಕ್ಷದ ರಾಜ್ಯಉಪಾಧ್ಯಕ್ಷ ಸಂಜೀವ ನಾಯಕ್, ಡಾ.ರಾಜ್ ಕುಮಾರ್‌ಅಭಿಮಾನಿಗಳ ಸಂಘದ ಉಪಾಧ್ಯಕ್ಷ ವಿ.ಪರಮೇಶ್, ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ. ಆಂಜನೇಯ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜೆ.ಆರ್.ರಮೇಶ್, ಗೌರವಾಧ್ಯಕ್ಷ ನಾರಾಯಣಸ್ವಾಮಿ, ಸಂಜೀವ, ಕರವೇ ಅಧ್ಯಕ್ಷ ಮರುಳಾರಾಧ್ಯ, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಭುವನೇಶ್ವರಿ ಕನ್ನಡ ಸಂಘದ ನವೀನ್‌ಪ್ರಭುದೇವ್, ಕಲಾವಿದರಾದ ವೆಂಕಟರಾಜು, ರಾಮಕೃಷ್ಣ ಸೇರಿದಂತೆ ಅನೇಕ ಮುಖಂಡರು ಬಾಗವಹಿಸಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಟಿ.ರಘುಮೂರ್ತಿ ಅವರಿಗೆ ಇಂದು ಅದ್ದೂರಿ ಸ್ವಾಗತ ಕೋಟೆ ನಾಡು ಸಜ್ಜು | ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಕೆಯುಡಬ್ಲ್ಯೂಜೆ ಒತ್ತಾಯಕ್ಕೆ ಸರ್ಕಾರದ ಸ್ಪಂದನೆ; ಜುಲೈ 30ರ ಮನವಿಯ ಬೆನ್ನಲ್ಲೇ ಆ.6ಕ್ಕೆ ಸಭೆಡಾ. ರಾಜ್ ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ-ಕನ್ನಡ ಪರ ಸಂಘಟನೆಗಳ ಆಕ್ರೋಶಪಟ್ಟಣ ಪಂಚಾಯ್ತಿ ಹಗರಣಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಮಾನವನಾಗಿ ಬಾಳುವುದಕ್ಕಿಂತ ಮಹಾ ಮಾನವನಾಗಿ ಬದುಕುವುದು ಲೇಸು- ದಿವ್ಯ ಜ್ಞಾನಾನಂದಗಿರಿಶ್ರೀಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯಾದ ಪರೀಕ್ಷಾ ಅಕ್ರಮಗಳ ತಡೆ ಕಾಯ್ದೆಯಲ್ಲದಕೆರೆ ಗ್ರಾ.ಪಂ.ಗೆ ಮುತ್ತಿಗೆ; ಕುಡಿಯುವ ನೀರಿಗೆ ಆಗ್ರಹಿಸಿ ಪಂಚಾಯಿತಿ ಆವರಣದಲ್ಲೇ ಅಡುಗೆ ಮಾಡಿ ಗ್ರಾಮಸ್ಥರ ಆಕ್ರೋಶ!ಕರಿಯಾಲ ಗ್ರಾಪಂನಲ್ಲಿ ವಿ.ಬಿ. ಗ್ರಾಮ್ ಜಿ ಯೋಜನೆ ಜಾಗೃತಿ: ಕಾರ್ಮಿಕರಿಗೆ ಸಮಾನ ಕೂಲಿ ಹಾಗೂ ಹಕ್ಕುಗಳ ಕುರಿತು ಅಧಿಕಾರಿಗಳಿಂದ ಮಾಹಿತಿನೂತನ ಸಚಿವರ ಆಯ್ಕೆಗೆ ಬಿಜೆಪಿ-ಜೆಡಿಎಸ್ ತೀವ್ರ ಆಕ್ಷೇಪ: ಜಂಟಿ ವಾಗ್ದಾಳಿಜಾಗತಿಕ ತಂತ್ರಜ್ಞಾನದ ಮುಂದಿನ ಕ್ರಾಂತಿ ಕರ್ನಾಟಕದಿಂದಲೇ ರೂಪಗೊಳ್ಳಲಿ – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್