LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಟಿ.ರಘುಮೂರ್ತಿ ಅವರಿಗೆ ಇಂದು ಅದ್ದೂರಿ ಸ್ವಾಗತ ಕೋಟೆ ನಾಡು ಸಜ್ಜು | 

Advertisement
Advertisement

ನಾಯಕ ಸಮುದಾಯದಿಂದ ಭರ್ಜರಿ ಸಿದ್ದತೆ: ಬಿ.ಕಾಂತರಾಜ್ 
ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ನೂತನ‌ ಸಚಿವರಾಗಿ ಪದಗ್ರಹಣ ಮಾಡಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಅದ್ದೂರಿ ಸ್ವಾಗತ ಕೋರಲು ಚಿತ್ರದುರ್ಗ ನಾಯಕ ಸಮಾಜದಿಂದ ತೀರ್ಮಾನಿಸಲಾಗಿದೆ ಎಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.
 
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 
ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ‌ ನೀಡಿರುವುದನ್ನು ಸಮಾಜದಿಂದ ಸ್ವಾಗತಿಸುತ್ತೇವೆ. ಮೂರು ದಶಕಗಳ ನಂತರ ಸಮುದಾಯಕ್ಕೆ ಅವಕಾಶ ಸಿಕ್ಕಿದೆ ಎಂದರು.

ಸಚಿವರಾದ ನಂತರ ಟಿ.ರಘುಮೂರ್ತಿ ಅವರು ಇಂದು ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಿದ್ದಾರೆ.‌ ಅವರನ್ನು ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ತಿಪ್ಪೇಸ್ವಾಮಿ ಅವರ ನಂತರ ರಘುಮೂರ್ತಿ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮದಕರಿ ನಾಯಕ ವೃತ್ತದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮದಕರಿ ವೃತ್ತದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಇರಲಿದೆ. ಯುವಕರ ಒತ್ತಾಯದ ಮೇರೆಗೆ ಸ್ಟಾ‌ಡಿಂಗ್ ಡಿಜೆ ಕೂಡಾ ಇರಲಿದೆ ಎಂದರು.

ಬುಧವಾರ ಸಂಜೆ 4 ಗಂಟೆಗೆ ಸಾರ್ವಜನಿಕರು ಹಾಗೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು‌ ಮನವಿ ಮಾಡಿದರು.

ನಿವೃತ್ತ ಪ್ರಾಚಾರ್ಯ ಪ್ರೊ.ಗುಡದೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ಟಿ.ರಘುಮೂರ್ತಿ ಮಾಡಿದ್ದಾರೆ. ಅವರನ್ನು ಜಾತ್ಯಾತೀತವಾಗಿ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಚಳ್ಳಕೆರೆ ಮಾದರಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಆಗಬೇಕು ಎನ್ನುವ ಅಭಿಲಾಷೆ ಇದೆ ಎಂದರು.
ಪಕ್ಷಾತೀತವಾಗಿ ಅವರ ಪುರಪ್ರವೇಶ ಕಾರ್ಯಕ್ರಮ ಮಾಡಬೇಕು ಎಂದು ಸಮಾಜ ತೀರ್ಮಾನಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಖಂಡ ಲಿಂಗಾವರಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ, ಶಾಸಕರಾದ ಟಿ.ರಘುಮೂರ್ತಿ ಅವರಿಗೆ ನಾಯಕ ಸಮುದಾಯದವರು ಎಂದು ಸಚಿವ ಸ್ಥಾನ ಕೊಟ್ಟಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಆ ಸ್ಥಾನ ಒಲಿದು ಬಂದಿದೆ.‌ ಅದೇ ರೀತಿಯಲ್ಲಿ ಚಿತ್ರದುರ್ಗದ ಅಭಿವೃದ್ಧಿ ಆಗಬೇಕು.

ಡಿಸಿಸಿ ಬ್ಯಾಂಕಿಗೆ ರಘುಮೂರ್ತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಅವರ ಬೆಳವಣಿಗೆ ಹಾಗೂ ವ್ಯಕ್ತಿತ್ವ ತೋರಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ದೀಪಕ್, ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್, ಮುಖಂಡ ಸೋಮೇಂದ್ರ ಇದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಟಿ.ರಘುಮೂರ್ತಿ ಅವರಿಗೆ ಇಂದು ಅದ್ದೂರಿ ಸ್ವಾಗತ ಕೋಟೆ ನಾಡು ಸಜ್ಜು | ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಕೆಯುಡಬ್ಲ್ಯೂಜೆ ಒತ್ತಾಯಕ್ಕೆ ಸರ್ಕಾರದ ಸ್ಪಂದನೆ; ಜುಲೈ 30ರ ಮನವಿಯ ಬೆನ್ನಲ್ಲೇ ಆ.6ಕ್ಕೆ ಸಭೆಡಾ. ರಾಜ್ ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ-ಕನ್ನಡ ಪರ ಸಂಘಟನೆಗಳ ಆಕ್ರೋಶಪಟ್ಟಣ ಪಂಚಾಯ್ತಿ ಹಗರಣಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಮಾನವನಾಗಿ ಬಾಳುವುದಕ್ಕಿಂತ ಮಹಾ ಮಾನವನಾಗಿ ಬದುಕುವುದು ಲೇಸು- ದಿವ್ಯ ಜ್ಞಾನಾನಂದಗಿರಿಶ್ರೀಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯಾದ ಪರೀಕ್ಷಾ ಅಕ್ರಮಗಳ ತಡೆ ಕಾಯ್ದೆಯಲ್ಲದಕೆರೆ ಗ್ರಾ.ಪಂ.ಗೆ ಮುತ್ತಿಗೆ; ಕುಡಿಯುವ ನೀರಿಗೆ ಆಗ್ರಹಿಸಿ ಪಂಚಾಯಿತಿ ಆವರಣದಲ್ಲೇ ಅಡುಗೆ ಮಾಡಿ ಗ್ರಾಮಸ್ಥರ ಆಕ್ರೋಶ!ಕರಿಯಾಲ ಗ್ರಾಪಂನಲ್ಲಿ ವಿ.ಬಿ. ಗ್ರಾಮ್ ಜಿ ಯೋಜನೆ ಜಾಗೃತಿ: ಕಾರ್ಮಿಕರಿಗೆ ಸಮಾನ ಕೂಲಿ ಹಾಗೂ ಹಕ್ಕುಗಳ ಕುರಿತು ಅಧಿಕಾರಿಗಳಿಂದ ಮಾಹಿತಿನೂತನ ಸಚಿವರ ಆಯ್ಕೆಗೆ ಬಿಜೆಪಿ-ಜೆಡಿಎಸ್ ತೀವ್ರ ಆಕ್ಷೇಪ: ಜಂಟಿ ವಾಗ್ದಾಳಿಜಾಗತಿಕ ತಂತ್ರಜ್ಞಾನದ ಮುಂದಿನ ಕ್ರಾಂತಿ ಕರ್ನಾಟಕದಿಂದಲೇ ರೂಪಗೊಳ್ಳಲಿ – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್