E-PAPER
22 Nov 2026, 02:30:31 AM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಕರ್ನಾಟಕದಲ್ಲಿ ಕೊರಿಯನ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಸ್ಥಾಪನೆಗೆ ಒತ್ತು: ಸಚಿವ ಎಂ.ಬಿ. ಪಾಟೀಲ್

​ ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ
'ಕೊರಿಯನ್ ಇಂಡಸ್ಟ್ರಿಯಲ್ ಟೌನ್‌ಶಿಪ್' ಸ್ಥಾಪನೆ ಹಾಗೂ ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹೆಚ್ಚಿನ ಕೊರಿಯನ್ ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ದಕ್ಷಿಣ ಕೊರಿಯಾ ಗಣರಾಜ್ಯದ ಕಾನ್ಸುಲ್ ಜನರಲ್ (ಚೆನ್ನೈ) ಶ್ರೀಮತಿ ಹ್ಯೆ ರಾನ್ ಚುನ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.

​ಶುಕ್ರವಾರ ತಮ್ಮನ್ನು ಭೇಟಿಯಾದ ಕಾನ್ಸುಲ್ ಜನರಲ್ ಅವರೊಂದಿಗೆ, ಕರ್ನಾಟಕ ಮತ್ತು ದಕ್ಷಿಣ ಕೊರಿಯಾ ನಡುವಿನ ಕೈಗಾರಿಕಾ, ತಂತ್ರಜ್ಞಾನ ಹಾಗೂ ಹೂಡಿಕೆ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಚಿವರು ಸುದೀರ್ಘ ಚರ್ಚೆ ನಡೆಸಿದರು.

​ಹೂಡಿಕೆಗೆ ವಿಪುಲ ಅವಕಾಶ: ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ತಂತ್ರಜ್ಞಾನ, ಏರೋಸ್ಪೇಸ್, ರಕ್ಷಣಾ ಉತ್ಪಾದನೆ ಹಾಗೂ ನಿಖರ ಯಂತ್ರೋಪಕರಣಗಳ ತಯಾರಿಕೆಯಲ್ಲಿ ದಕ್ಷಿಣ ಕೊರಿಯಾ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರಗಳಲ್ಲಿ ಕರ್ನಾಟಕ ಹೊಂದಿರುವ ಬಲಿಷ್ಠ ಕೈಗಾರಿಕಾ ನೆಲೆ, ಪ್ರತಿಭಾನ್ವಿತ ಮಾನವ ಸಂಪನ್ಮೂಲ ಹಾಗೂ ಅತ್ಯುತ್ತಮ ಸಂಶೋಧನಾ ಪರಿಸರವನ್ನು ಕಾನ್ಸುಲ್ ಜನರಲ್ ಅವರಿಗೆ ವಿವರಿಸಿದ ಸಚಿವರು, ಉಭಯ ದೇಶಗಳ ನಡುವಿನ ಕೈಗಾರಿಕಾ ಸಹಕಾರಕ್ಕೆ ರಾಜ್ಯದಲ್ಲಿ ವಿಪುಲ ಅವಕಾಶಗಳಿವೆ ಎಂದು ಮನವರಿಕೆ ಮಾಡಿಕೊಟ್ಟರು.

​ಜಾಗತಿಕ ವಿಶ್ವಾಸಕ್ಕೆ ಸಾಕ್ಷಿ: "ಈಗಾಗಲೇ ಸ್ಯಾಮ್ಸಂಗ್, ಎಲ್‌ಜಿ, ಹ್ಯುಂಡೈ ಮೊಬಿಸ್ ಹಾಗೂ ಡಿಎನ್ ಸೊಲ್ಯೂಷನ್ಸ್‌ನಂತಹ ಪ್ರಮುಖ ಕೊರಿಯನ್ ಸಂಸ್ಥೆಗಳು ಕರ್ನಾಟಕದಲ್ಲಿ ತಮ್ಮ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸುತ್ತಿವೆ. ಇದು ನಮ್ಮ ರಾಜ್ಯದ ಕೈಗಾರಿಕಾ ನೀತಿ ಹಾಗೂ ಮೂಲಸೌಕರ್ಯದ ಮೇಲಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ" ಎಂದು ಎಂ.ಬಿ. ಪಾಟೀಲ್ ತಿಳಿಸಿದರು.

​ಪ್ರಮುಖ ಕೊರಿಯನ್ ಕಂಪನಿಗಳೊಂದಿಗೆ ನೇರ ಸಂಪರ್ಕ ಬೆಳೆಸುವುದು ಹಾಗೂ ಜಿಮ್ 2027 ಸಮಾವೇಶದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಸಹಕಾರ ನೀಡುವಂತೆ ಕೋರಲಾಗಿದ್ದು, ಈ ಭೇಟಿಯು ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಭದ್ರ ಬುನಾದಿಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪುಸ್ತಕ ಪ್ರೀತಿ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ ಆಗಲಿದೆ : ಟಿ.ಸಿ.ಸುದೀಪಹಾಡೋನಹಳ್ಳಿ ಕೆ ವಿ ಕೆ ವತಿಯಿಂದ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವಹಣಕಾಸು ಸಾಕ್ಷರತ ಜಾಗೃತಿ ಕಾರ್ಯಕ್ರಮಕಾಲೇಜು ಆವರಣದಿಂದಲೇ ವೈದ್ಯಕೀಯ ವಿದ್ಯಾರ್ಥಿನಿಯ ಅಪಹರಣ; ವಿಡಿಯೋ ವೈರಲ್ಅರ್ಹ ರೈತರಿಗೆ ತಕ್ಷಣ 5,000 ರೂ. ತಲುಪಿಸಲು ಡಿಸಿಎಂ ಪರಮೇಶ್ವರ್ ಖಡಕ್ ಸೂಚನೆಕಾವೇರಿ ವಿವಾದ: ತಮಿಳುನಾಡಿಗೆ ಸುಪ್ರೀಂನಲ್ಲಿ ಭಾರಿ ಹಿನ್ನಡೆ, ಕರ್ನಾಟಕಕ್ಕೆ ಕಾನೂನು ಜಯಸುಪ್ರೀಂನಲ್ಲಿ ತಮಿಳುನಾಡಿಗೆ ಮುಖಭಂಗ: ಆದರೂ ಕರ್ನಾಟಕಕ್ಕೆ ಕಾವೇರಿ ನೀರು ಹರಿಸಲು CWRC ಸೂಚನೆ!ಅಮಿತ್ ಶಾ ಭೇಟಿಯಾದ ಕುಮಾರಸ್ವಾಮಿ, ವಿಜಯೇಂದ್ರ: ಹಿರಿಯೂರು ಉಪಚುನಾವಣೆ ಚರ್ಚೆ?ದಾಂಪತ್ಯದ ಸಣ್ಣಪುಟ್ಟ ಜಗಳಗಳು ‘ಕ್ರೌರ್ಯ’ವಲ್ಲ: 18 ದಿನಕ್ಕೇ ವಿಚ್ಛೇದನ ಕೇಳಿದ್ದ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ಪತ್ನಿಯನ್ನೇ ಕೊಂದು ಚೀಲದಲ್ಲಿ ತುಂಬಿಟ್ಟಿದ್ದ ಎರಡನೇ ಪತಿ ಅರೆಸ್ಟ್!