Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bangalore Rural

ವಿಜ್ಞಾನದ ಭಾಷೆಯಾಗಿ ಕನ್ನಡದ ಸಬಲೀಕರಣ ಅಗತ್ಯ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಮತ್ತು ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಸಹಯೋಗದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಹಾವಿದ್ಯಾಲಯದ ಆವರಣದಲ್ಲಿ ಸಂಸ್ಥೆಯ ಆಡಳಿತ ಉಸ್ತುವಾರಿ ಮಂಡಲಿಯ ಸದಸ್ಯ ಮತ್ತು ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಜೆ.ಆರ್.ರಾಕೇಶ್‌ ಧ್ವಜಾರೋಹಣ ನೆರವೇರಿಸಿದರು. ಅವರು ಮಾತನಾಡಿ, ಕನ್ನಡವನ್ನು ಎಲ್ಲ ಹಂತಗಳಲ್ಲಿ ಬಳಸುವ ಮೂಲಕ ಭಾಷೆಯ ಅನನ್ಯತೆಯನ್ನು ಕಾಪಾಡುವುದು ಎಲ್ಲ ಕನ್ನಡಿಗರ ಕರ್ತವ್ಯವಾಗಿದೆ. ನಾವು ನಿರಭಿಮಾನವನ್ನು ಬಿಟ್ಟು, ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಮತ್ತು ಲಯನ್ಸ್‌ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್‌ ಮಾತನಾಡಿ, ಕನ್ನಡವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿ ಬೆಳೆಸುವ ಮೂಲಕ ಭಾಷೆಯ ಭವಿಷ್ಯವನ್ನು ಸದೃಢಗೊಳಿಸುವ ಅಗತ್ಯವಿದೆ. ಜ್ಞಾನಶಾಖೆಗಳ ಸಮಕಾಲೀನ ಅಗತ್ಯತೆಗಳಿಗೆ ಪೂರಕವಾಗಿ ಕನ್ನಡದ ಸಬಲೀಕರಣ ಅಗತ್ಯ. ಸೃಜನಶೀಲ ಆಲೋಚನೆಗಳು ಭಾಷೆಯನ್ನು ಬಲಗೊಳಿಸುತ್ತವೆ. ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ಹಂತದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಪಾರಿಭಾಷಿಕ ಪದಕೋಶಗಳ ಅಗತ್ಯ ಇದೆ. ಕಾನೂನು, ವಿಜ್ಞಾನ, ವೈದ್ಯಕೀಯ ಸೇರಿದಂತೆ ಮಹತ್ವದ ವಲಯಗಳಲ್ಲಿ ಕನ್ನಡ ಬಳಕೆಗೆ ಇರುವ ಸಮಸ್ಯೆಗಳನ್ನು ನಿವಾರಿಸುವುದು ಮುಖ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಮುರಳಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ಜೀವನಾಮೃತ. ಕನ್ನಡದ ಅನನ್ಯತೆಯ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು. ಸಾಂಸ್ಕೃತಿಕ ಭಿನ್ನತೆಯ ನಡುವೆಯೂ ಐಕ್ಯತೆಯನ್ನು ಪ್ರತಿಪಾದಿಸುವ ನಾಡು ಕರ್ನಾಟಕ ಎಂದರು.ಕಾಲೇಜಿನ ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಎನ್.ಬಿ.ಶಂಕರ್, ಎಇಇ ಐ.ಎಂ.ರಮೇಶ್‌ಕುಮಾರ್,

ಉಪಪ್ರಾಂಶುಪಾಲ ಡಾ.ಸುನಿಲ್‌ಕುಮಾರ್, ಲಯನ್ಸ್‌ ಕ್ಲಬ್ ಅಧ್ಯಕ್ಷ ಕೆ.ಸಿ.ನಾಗರಾಜ್, ಲಯನ್ಸ್‌ ಕನ್ನಡ ಮತ್ತು ಸಂಸ್ಕೃತಿ ಸಂಯೋಜಕಿ ಎಸ್.ಶೃತಿ, ವಿಭಾಗ ಮುಖ್ಯಸ್ಥರಾದ ಡಾ.ಲೋಕೇಶ್‌ ಯಾದವ್, ಡಾ.ಪ್ರಚಲಿತ್, ವಸತಿ ನಿಲಯ ಮೇಲ್ವಿಚಾರಕ ಪ್ರವೀಣ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವ್ಯವಸ್ಥಾಪಕ ಯತಿನ್‌ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೇಜಸ್ವಿನಿ ಕಾರ್ಯಕ್ರಮ ನಿರ್ವಹಣೆ ಗಮನ ಸೆಳೆಯಿತು

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜ್ಞಾನದ ಭಾಷೆಯಾಗಿ ಕನ್ನಡದ ಸಬಲೀಕರಣ ಅಗತ್ಯಶಾಲಾ ಕೊಠಡಿಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ದಾಳಿ: ಆಘಾತಕಾರಿ ಘಟನೆಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್: ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದ ಪೊಲೀಸರು!ಕನ್ನಡ ಧ್ವಜ ವಿನ್ಯಾಸ ಬದಲಾವಣೆ ಹಾಗೂ ಕಡ್ಡಾಯ ಹಾರಾಟಕ್ಕೆ ರಾಜ್ಯ ಚಿಂತನೆ: ಡಿ.ಕೆ. ಶಿವಕುಮಾರ್ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕುಮಾರಸ್ವಾಮಿ ಮಾಡಿಸಿದ್ದು: ಸಚಿವ ಪುಟ್ಟರಂಗಶೆಟ್ಟಿ ಗಂಭೀರ ಆರೋಪಗೂಗಲ್ ಲೆನ್ಸ್ ಬಳಸಿ ವಿಎಓ ಟಾಪರ್ ಆಗಿದ್ದ ಶಂಕರ ಬನ್ನೂರ ಬಂಧನ; ಸಿಸಿಟಿವಿಯಲ್ಲಿ ಅಕ್ರಮ ಬಟಾಬಯಲು'ಇಂಡಿಯಾ' ಮೈತ್ರಿಕೂಟದ ಬೃಹತ್ ರ‍್ಯಾಲಿ: ಸ್ಥಳೀಯ ವ್ಯಾಪಾರಿಗಳ ಬೆಂಬಲಕ್ಕೆ ನಿಲ್ಲುವಂತೆ ರಾಹುಲ್‌ಗಾಂಧಿ ಕರೆಕಾನೂನು ಉಲ್ಲಂಘಿಸಬೇಡಿ, ನೈತಿಕ ಪೊಲೀಸ್‌ಗಿರಿ ಸಹಿಸಲ್ಲ: ಡಿ.ಕೆ ಶಿವಕುಮಾರ್ ಎಚ್ಚರಿಕೆವಿದ್ಯುತ್ ವಲಯದಲ್ಲಿ ಡಿಜಿಟಲ್ ಕ್ರಾಂತಿ: ಪಾರದರ್ಶಕತೆಗಾಗಿ KPTCL-GTD ಸಮಗ್ರ ವೇದಿಕೆ ಜಾರಿಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್: ಕುಮಾರಸ್ವಾಮಿ ದೆಹಲಿ ನಿವಾಸದಲ್ಲಿ ಮೊಬೈಲ್ ಹಸ್ತಾಂತರ!