Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bangalore Rural

ದೊಡ್ಡ ತಿಮ್ಮನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

​ ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ದೊಡ್ಡತಿಮ್ಮನಹಳ್ಳಿಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

  ಕಾರ್ಯಕ್ರಮದಲ್ಲಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ ಕುಮಾರ್  ಮಹರ್ಷಿ ವಾಲ್ಮೀಕಿ ರವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ  ಮಾತನಾಡಿ

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಕಾಮಗಾರಿಯನ್ನು ನವೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡಲಾಗುವುದು.

ಭವನ ನೆನೆಗುದಿಗೆ ಬಿದ್ದಿದ್ದ ಸಮಯದಲ್ಲಿ ಶಾಸಕ ಧೀರಜ್ ಮುನಿರಾಜು 25 ಲಕ್ಷ ಅನುದಾನ ನೀಡಿವ ಮೂಲಕ ಸಹಾಯ ಮಾಡಿದ್ದಾರೆ. ಮುಂದೆ ಸಣ್ಣಪುಟ್ಟ ಕೆಲಸಗಳಿದ್ದು ಅದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.

 ದೊಡ್ಡಬಳ್ಳಾಪುರ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ ಉದ್ಯೋಗಂ ಪುರಷ ಲಕ್ಷಣಂ ಎಂಬಂತೆ ನಮ್ಮ ಜನಾಂಗದ ಯುವ ಜನತೆ ಸಮಯ ವ್ಯರ್ಥ ಮಾಡದೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಬಾಕಿ ಉಳಿದಿರುವ ವಾಲ್ಮೀಕಿ ಭವನದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ, ಸಚಿವರು, ಶಾಸಕರುಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.

ವಾಲ್ಮೀಕಿ ಸಂಘದ ನಿರ್ದೇಶಕರಾದ ಅಶ್ವತಪ್ಪ ಮಾತನಾಡಿ.ಮಹರ್ಷಿ ವಾಲ್ಮೀಕಿಯ ಮೂಲ ಹೆಸರು ರತ್ನಾಕರ.  ಅವರ ತಂದೆ ಭಗವಾನ್‌ ಬ್ರಹ್ಮನ ಮಾನಸ ಪುತ್ರ ಪ್ರಚೇತ.ಅವರು ಕ್ರಿ.ಪೂ 500ರಲ್ಲಿ ಜನಿಸಿದ್ದರು ಎಂದು ಭಾವಿಸಲಾಗಿದೆ. ವಾಲ್ಮೀಕಿ ಜಯಂತಿ ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳಲ್ಲಿ, ಅಶ್ವಿನಿ ತಿಂಗಳ ಹುಣ್ಣಿಮೆಯಂದು ಅದ್ದೂರಿಯಾಗಿ ಅಚರಣೆ ಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆ ದೊಡ್ಡ ತಿಮ್ಮನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಪುಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

 ಕಾರ್ಯಕ್ರಮದಲ್ಲಿ ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಬಾಬು, ವಾಲ್ಮೀಕಿ ಸಂಘದ ಉಪಾಧ್ಯಕ್ಷ ಕುಮಾರ್, ವಿ ಎಸ್ ಎಸ್ ಏನ್ ಸಂಘದ ಅಧ್ಯಕ್ಷ ವಾಸುದೇವ್,ತೂಬಗೆರೆ ಹೋಬಳಿ ಅಧ್ಯಕ್ಷ ಕೃಷ್ಣ, ಮುಖಂಡರಾದ  ಅಪ್ಪಣ್ಣಪ್ಪ, ನಾರಾಯಣಸ್ವಾಮಿ, ವೆಂಕಟೇಶ್, ನಟರಾಜು, ತಿಮ್ಮಣ್ಣ, ಕಾರ್ಯಕ್ರಮದ ಆಯೋಜಕ ಮಾದೇಶ್ ಮತ್ತಿತರರು ಉಪಸ್ಥಿತರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡ್ಡ ತಿಮ್ಮನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಸಾಮಾಜಿಕ ಅನಿಷ್ಟ ತಡೆಗಟ್ಟಲು ಕಾನೂನಿನ ಅರಿವು ಅತ್ಯಗತ್ಯ:ದಾಸರಿ ಕ್ರಾಂತಿ ಕಿರಣ್ಹಿರಿಯ ರಂಗಭೂಮಿ ಕಲಾವಿದ ಜಿ.ಡಿ. ತಿಮ್ಮಯ್ಯ ಅವರ ಸಾಧನೆ ಮತ್ತು ಪರಿಚಯಹಿರಿಯ ಪತ್ರಕರ್ತ ಚಿತ್ರದುರ್ಗದ  ಉಮಾಪತಿ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಗೌರವಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗ: ಬೆಂಬಲವಿದ್ದರೂ ಎಡವಿದ್ದೆಲ್ಲಿ?ರಾಹುಲ್ ಗಾಂಧಿ ನೇತೃತ್ವದ ಒಕ್ಕೂಟದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ: ಶೋಭಾ ಕರಂದ್ಲಾಜೆಬದರಿನಾಥದಿಂದ ಹೊರಟ ಹೆಲಿಕಾಪ್ಟರ್ ಜೋಶಿಮಠ ಬಳಿ ಪತನ: ಆರು ಮಂದಿ ಪ್ರಯಾಣಿಕರ ಸಾವುನ್ಯಾಯಾಂಗದ ವಿರುದ್ಧ ಹೇಳಿಕೆ: CJP ನಾಯಕ ಸೌರವ್ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ಯುವಕನಿಗೆ ಚಾಕು ತೋರಿಸಿ 20 ಲಕ್ಷ ಮೌಲ್ಯದ ಚಿನ್ನ ದೋಚಿದ ಡೇಟಿಂಗ್ ಬಂದಿದ್ದ ಯುವತಿಮುಖ್ಯ ಚುನಾವಣಾ ಆಯುಕ್ತರ ವಿರುದ್ಧ 'ಸಾರ್ವಜನಿಕ ದೋಷಾರೋಪಣೆ' ಮುಂದೂಡಿದ 'ಇಂಡಿಯಾ' ಒಕ್ಕೂಟ