E-PAPER
16 Nov 2026, 05:32:59 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿರುದ್ಯೋಗಿಗಳಿಗೆ ಫುಡ್‌ಕಿಯೋಸ್ಕ್ ಸ್ವಯಂ-ಉದ್ಯೋಗದ ಅವಕಾಶ-ಸಚಿವ ಟಿ. ರಘುಮೂರ್ತಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಪಂಗಡಗಳ ಯುವಕ/ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಬೇಕು ಎಂಬ ಮುಖ್ಯ ಧ್ಯೇಯದೊಂದಿಗೆ ಕಾಂಗ್ರೆಸ್‌ಸರ್ಕಾರ ಈಗ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ.

ಇದರಿಂದ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಆಶಯವನ್ನು ಹೊಂದಿರುವ *ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ* ಅವರ ಕಾಳಜಿಯಿಂದ ಈ ವಿಶೇಷ ಸೌಲಭ್ಯ ಜಾರಿಗೆ ಬರುತ್ತಿದೆ.

ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ಫಾಸ್ಟ್‌ಫುಡ್‌ಟ್ರಕ್‌ಟ್ರೈಲರ್‌/ ಮೊಬೈಲ್‌ಕಿಚನ್‌ಫುಡ್‌ಕಿಯೋಸ್ಕ್‌ಆರಂಭಿಸಲು ಪರಿಶಿಷ್ಟ ಪಂಗಡಗಳ ಇಲಾಖೆಯ ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಅವಕಾಶ ಕಲ್ಪಿಸಲಾಗುತ್ತಿದೆ.

ಇದಕ್ಕಾಗಿ ಘಟಕ ವೆಚ್ಚದ ಶೇ. 75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲಾಗುತ್ತದೆ. ಈ ವಿಶೇಷ ಯೋಜನೆಗೆ ಕಳೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.

ಕಳೆದ ಬಜೆಟ್‌ನಲ್ಲಿ ಈ ಯೋಜನೆ ಆರಂಭಿಸುವ ಬಗ್ಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ಸಚಿವರಾಗಿ ಟಿ. ರಘುಮೂರ್ತಿ ಜವಾಬ್ದಾರಿ ವಹಿಸಿಕೊಂಡ ನಂತರ ಇದನ್ನು ಕಾರ್ಯರೂಪಕ್ಕೆ ತರುವ ಕುರಿತು ಗಮನ ಹರಿಸಿದರು.

 ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವಂತೆ ಮುತುವರ್ಜಿ ವಹಿಸಿದರಲ್ಲದೇ ಅದಕ್ಕೆ ಅನುಮೋದನೆ ದೊರೆಯುವಂತೆ ಕ್ರಮ ವಹಿಸಿದ್ದಾರೆ.

ಉದ್ದೇಶಿಸಿರುವ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಬ್ಯಾಂಕ್‌/ಹಣಕಾಸು ಸಂಸ್ಥೆಗಳಿಂದ ಸೌಲಭ್ಯ ಒದಗಿಸಲು ಹಾಗೂ ಸಹಾಯಧನ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಎಂ. ಕನಗವಲ್ಲಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಅಶೋಕ್‌ಡಿ.ಆರ್‌. ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಆದಿವಾಸಿಗಳೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಮುದಾಯಗಳು ಬರುತ್ತವೆ. ಈ ಆಹಾರ ಮಳಿಗೆ/ಟ್ರಕ್/ಕಿಯೋಸ್ಕ್‌ಯೋಜನೆಗಳು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಎಲ್ಲಾ ಸಮುದಾಯಗಳಿಗೆ ಅನ್ವಯಿಸುತದೆ.

“ಪರಿಶಿಷ್ಟ ಪಂಗಡ ಸಮುದಾಯದವರ ಆರ್ಥಿಕ ಸಬಲೀಕರಣವಾಗಲಿದೆ ಮತ್ತು ಮುಖ್ಯವಾಗಿ ಅನಿಯಂತ್ರಿತ ಬೀದಿ ಮಾರಾಟಕ್ಕೆ ಹೋಲಿಸಿದರೆ ಪ್ರಮಾಣೀಕೃತ ಮೊಬೈಲ್‌ಘಟಕಗಳು ಉತ್ತಮ ಮತ್ತು ಗುಣಮಟ್ಟದ ಆಹಾರ ಒದಗಿಸಬಹುದಾಗಿದೆ.

ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂದೆಯೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಯೋಜನೆ ಸಾವಿರಾರು ಮಂದಿಗೆ ನೆರವಾಗಲಿ, ಅವರು ಇನ್ನಷ್ಟು ಸಾವಿರಾರು ಮಂದಿಗೆ ಉದ್ಯೋಗ ಕೊಡಿಸಲಿ ಎನ್ನುವುದೇ ನಮ್ಮ ಉದ್ದೇಶ”.
ಟಿ. ರಘುಮೂರ್ತಿ
, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ವಿಕಸಿತ ಭಾರತ' ಗುರಿಗೆ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಕೊಡುಗೆ ಮಹತ್ವದ್ದು: ಕುಮಾರಸ್ವಾಮಿಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ; 16ನೇ ಪ್ರತಿಭೋತ್ಸವ ಸಂಪನ್ನ​ ಹಿರಿಯೂರು ಉಪಸಮರ: ಟಿಕೆಟ್‌ಗಾಗಿ ದೋಸ್ತಿಗಳಲ್ಲಿ ಗೊಂದಲ; ಅಶೋಕ್‌ಗೆ ಹೆಚ್‌ಡಿಕೆ ಖಡಕ್ ಸಲಹೆ!ಹಿರಿಯೂರು ಉಪಚುನಾವಣೆ: ಹೈಕಮಾಂಡ್ ಅಂಗಳಕ್ಕೆ ಚೆಂಡು ಬಿರ್ಸಾ ಮುಂಡಾ ಜಯಂತಿ: ಸಂಸತ್ ಆವರಣದಲ್ಲಿ ಪ್ರಧಾನಿ ಮೋದಿ ಪುಷ್ಪನಮನಪ್ರಗತಿಪರ ರೈತನ ಮುಖವಾಡದ ಮರೆಯಲ್ಲಿ ಡ್ರಗ್ಸ್ ದಂಧೆ: ಪೆಡ್ಲರ್ ಅರೆಸ್ಟ್!ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ವಿರೋಧ: ಬಿಜೆಪಿ-ಕಾಂಗ್ರೆಸ್ ನಾಯಕರ ವಾಕ್ಸಮರಶ್ರೀಕೃಷ್ಣದೇವರಾಯ ವಿವಿಯ 14ನೇ ವಾರ್ಷಿಕ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್, 42 ಸಾಧಕರಿಗೆ ಚಿನ್ನದ ಪದಕಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐಪಿಎಸ್, ಕೆಎಎಸ್ ಅಧಿಕಾರಿಗಳ ವರ್ಗಾವಣೆಸಂಸತ್ ಗ್ರಂಥಾಲಯದ ಪುಸ್ತಕಗಳನ್ನು ಓದಿ ಇತಿಹಾಸ ತಿಳಿಯಿರಿ: ಕಂಗನಾ ರಣಾವತ್‌ಗೆ ರಮ್ಯಾ ವ್ಯಂಗ್ಯದ ಸಲಹೆ