ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ದಿಂದ ತಮಿಳುನಾಡು ರಾಜ್ಯದ ತಿರುಕೋಯಿಲೂರು ಜಿಲ್ಲೆಯ ತಿರುವಣ್ಣಾಮಲೈ ಗ್ರಾಮಕ್ಕೆ ಬೆಳಗ್ಗೆ 8:15ರ ರಾತ್ರಿ 8.30 ಪ್ರತಿದಿನದ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯನ್ನು ಮುಂದುವರಿಸುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.
ಈ ಕುರಿತು ಕನ್ನಡ ಕನ್ನಡ ಜಾಗೃತಿ ವೇದಿಕೆ
ಜಿಲ್ಲಾ ಕಾರ್ಯದರ್ಶಿ ಸುಧಾಕರ್ ಎಚ್ ಎಸ್ ಮಾತನಾಡಿ ದೊಡ್ಡಬಳ್ಳಾಪುರದ ಸುತ್ತಮುತ್ತಲಿನ ಗ್ರಾಮಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನೌಕರರು ಸರಿಯಾದ ಸಮಯಕ್ಕೆ ಬೆಂಗಳೂರಿನ ತಮ್ಮ ಕಾಲೇಜು ಮತ್ತು ಕೆಲಸದ ಸ್ಥಳಗಳಿಗೆ ತಲುಪಲು ಈ ಬೆಳಗಿನ ಬಸ್ ಅತ್ಯಂತ ಅವಶ್ಯಕವಾಗಿದೆ.
ಹಾಗೂ ಮುಖ್ಯವಾಗಿ ದೊಡ್ಡಬಳ್ಳಾಪುರದಿಂದ ಹೊರಟು ತಮಿಳುನಾಡಿನ ರಾಜ್ಯದ ತಿರುಕೋಯಿಲೂರು ಜಿಲ್ಲೆಯ ತಿರುವಣ್ಣಾಮಲೈ ಗ್ರಾಮದ ಅರುಣಾಚಲ ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ಶಿವನ ದೇವಸ್ಥಾನವಾದ ಶ್ರೀ. ಆರುಣಾಚಲೇಶ್ವರ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಯಾತ್ರಾರ್ಥಿಗಳು ಭಕ್ತರು ಬೇಟಿ ನೀಡುತ್ತಾರೆ. ವಿಶೇಷವಾಗಿ ಪೂರ್ಣಿಮೆ (ಹುಣ್ಣಿಮೆ) ಮತ್ತು ವಾರಾಂತ್ಯದ ದಿನಗಳಲ್ಲಿ ದೊಡ್ಡಬಳ್ಳಾಪುರ ದಿಂದ ನೂರಾರು ಭಕ್ತರು ದೇವರ ದರ್ಶನಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯು ಈ ಭಾಗದ ನೂರಾರು ಜನರಿಗೆ ಮುಖ್ಯ ಸಾರಿಗೆ ಆಸರೆಯಾಗಿದೆ ಎಂದರು.
ಕನ್ನಡ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಈ ಸಮಯದ ಬಸ್ ಸೇವೆ ನಿಲ್ಲಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಒಂದೊಮ್ಮೆ ಈ ಬೆಳಗ್ಗೆ 8:15ರ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಸ್ಥಗಿತಗೊಂಡರೆ ದೊಡ್ಡಬಳ್ಳಾಪುರದ ಸಾರ್ವಜನಿಕರು, ಭಕ್ತಾದಿಗಳು, ವಿದ್ಯಾರ್ಥಿಗಳು, ಮತ್ತು ನೌಕರರಿಗೆ ತೀವ್ರ ತೊಂದರೆಯಾಗಲಿದೆ. ಪ್ರಸ್ತುತ ಇರುವ ಕೆ ಎಸ್ಆರ್ ಟಿ ಸಿ ಬಸ್ ಸೇವೆ ವ್ಯತ್ಯಯ ವಿಲ್ಲದೆ ನಿರಂತರ ಸೇವೆ ಮುಂದುವರಿಸಲು ಸಂಬಂದ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.



