Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗಮಕ ಕಲೆಯು ಸಂಗೀತಕ್ಕೆ ವಿಶೇಷ ಮೆರಗು ನೀಡಬಲ್ಲದು: ಡಾ. ಎಂ. ದ್ವಾರಕೀಶ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
"ಭಾರತೀಯ ಪರಂಪರೆಯ ಕಲಾ ಪ್ರಕಾರಗಳಲ್ಲಿ ಗಮಕ ಕಲೆಗೆ ಅತ್ಯುನ್ನತ ಸ್ಥಾನವಿದೆ. ಕಾವ್ಯದ ರಸಭಾವಗಳನ್ನು ಉದ್ದೀಪಿಸಿ
, ಕವಿಯ ಆಶಯವನ್ನು ರಸಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಗಮಕದ ಮುಖ್ಯ ಉದ್ದೇಶ. 

ಈ ಕಲೆಯು ಸಂಗೀತದೊಂದಿಗೆ ಹಿತಮಿತವಾಗಿ ಬೆರೆತರೆ ಶ್ರೋತೃಗಳ ರಸಾನುಭೂತಿ ಉತ್ತುಂಗಕ್ಕೇರುತ್ತದೆ," ಎಂದು ಸಂಸ್ಕೃತ ಹಾಗೂ ಕನ್ನಡ ವಿದ್ವಾಂಸರು, ವೀಣಾವಾದನ ಪರಿಣತರಾದ ಡಾ. ಎಂ. ದ್ವಾರಕೀಶ್ ಅಭಿಪ್ರಾಯಪಟ್ಟರು.

ನಗರದ ಜೆ.ಸಿ.ಆರ್ ಗಣಪತಿ ದೇವಾಲಯದಲ್ಲಿ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ 40ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 35ನೇ ಮಾಸಿಕ ಗಮಕ ಸರಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

"ಸಂಗೀತಾಭ್ಯಾಸಿಗಳು ಸಂಗೀತದ ಜೊತೆಜೊತೆಗೆ ಗಮಕ ಕಲೆಯನ್ನೂ ಮೈಗೂಡಿಸಿಕೊಂಡರೆ ಅವರ ಕಲಾ ಸಾಧನೆ ಮತ್ತಷ್ಟು ಪರಿಣಾಮಕಾರಿಯಾಗಬಲ್ಲದು."
ಡಾ. ಎಂ. ದ್ವಾರಕೀಶ್

ಭಕ್ತಿಭಾವ ಮೂಡಿಸಿದ ಭಕ್ತಿ ಸಂಗೀತ ಸುಧೆ
'ಭಜನೆಗಳಲ್ಲಿ ಗಮಕ' ಎಂಬ ವಿಷಯದ ಹಿನ್ನೆಲೆಯಲ್ಲಿ ನಡೆದ ಈ ಸಮಾವೇಶದಲ್ಲಿ, ಚಿತ್ರದುರ್ಗದ ಹೆಸರಾಂತ ಸಂಗೀತ ಕಲಾವಿದೆ ವಿದುಷಿ ಶೈಲಾ ಸುದರ್ಶನ್ ಹಾಗೂ ಅವರ 'ಸೌಂದರ್ಯ ಲಹರಿ ಬಳಗ'ದ ಶಿಷ್ಯರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳಲ್ಲಿ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಶೃಂಗೇರಿ ಶಾರದಾ ದೇವಿಯ ಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಗೀತ, ರಾಗ, ತಾಳ ಹಾಗೂ ಭಾವಗಳ ಹಿತಕರ ಸಮ್ಮಿಲನವಿದ್ದ 15 ವೈವಿಧ್ಯಮಯ ಗೀತೆಗಳು ಶ್ರೋತೃಗಳನ್ನು ಭಕ್ತಿ ಸಾಗರದಲ್ಲಿ ತೇಲಿಸಿದವು.

ಇದೇ ಸಂದರ್ಭದಲ್ಲಿ ಡಾ. ಎಂ. ದ್ವಾರಕೀಶ್ ಅವರ ಉನ್ನತ ಸಾಧನೆ ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಭಾಗವಹಿಸಿದ್ದ ಸಂಗೀತ ಕಲಾವಿದರನ್ನು ಸತ್ಕರಿಸಲಾಯಿತು.

ಕೆ. ಆರ್. ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಗಮಕಿ ಅನಂತ ಕೃಷ್ಣ ಸ್ವಾಗತಿಸಿದರು. ಶಶಿಧರ್ ಶ್ಯಾನುಭೋಗ್ ಪ್ರಾರ್ಥಿಸಿದರು. ಬಿ.ಎಲ್ ಉಮಾ ನಿರೂಪಿಸಿದರು.
ಗಣ್ಯರಾದ ಪ್ರೊ. ಹರೀಶ್
, ಚಿದಾನಂದಪ್ಪ, ರಾಜಶೇಖರಪ್ಪ, ಕೃಷ್ಣಮೂರ್ತಿ ಸೇರಿದಂತೆ ಹಲವು ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಮುಂದಿನ ತಿಂಗಳ ಕಾರ್ಯಕ್ರಮದ ವಿವರ-
ಸಂಘದ 36ನೇ ಮಾಸಿಕ ಗಮಕ ಕಾರ್ಯಕ್ರಮವು 2026ರ ಜುಲೈ 26ರ ಭಾನುವಾರ ಸಂಜೆ 6 ಗಂಟೆಗೆ ಜೆ.ಸಿ.ಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ.

ವಿಷಯ: ಮಹಾಭಾರತದಲ್ಲಿ ಭೀಷ್ಮರ ವೈಶಿಷ್ಟ್ಯ (ಉಪನ್ಯಾಸ)
ಉಪನ್ಯಾಸಕರು: ತಾರಿಣಿ ಶುಭದಾಯಿನಿ (ಕನ್ನಡ ವಿದ್ವಾಂಸರು
, ಕವಯತ್ರಿ ಹಾಗೂ ವಿಮರ್ಶಕರು)
ಕಾವ್ಯ ವಾಚನ: ವಿದುಷಿ ಮೀನಾಕ್ಷಿ ಭಟ್ (ಭೀಷ್ಮ ಪರ್ವದ ಸುರಸ ಪದ್ಯಗಳ ವಾಚನ) ಎಂದು ಗಮಕ ಕಲಾಭಿಮಾನಿಗಳ ಸಂಘದ ಪ್ರಕಟಣೆ ತಿಳಿಸಿದೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳುನಾಡಿಗೆ ಮತ್ತೆ ನೀರು ಹರಿಸಲು CWMA ಆದೇಶ, ಕರ್ನಾಟಕಕ್ಕೆ ತೀವ್ರ ಹಿನ್ನಡೆಮನೆ ಮುಂದೆ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ? ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ವಿರೋಧ: ಸಿಎಂಗೆ ಪತ್ರಅಧಿವೇಶನ ಮುಕ್ತಾಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಚರ್ಚೆ ಚುರುಕು: ಸಿಎಂ ಡಿಕೆ ಶಿವಕುಮಾರ್‌ಗೆ ದೆಹಲಿ ಬುಲಾವ್?ಕಾಂಗ್ರೆಸ್ ವೈಫಲ್ಯ ಖಂಡಿಸಿ ಸೆ.1ರಿಂದ ಬಿಜೆಪಿ ಬೃಹತ್ ಪಾದಯಾತ್ರೆ: ವಿಜಯೇಂದ್ರ ಘೋಷಣೆ102 ತಾಲೂಕುಗಳಲ್ಲಿ ಬರ: ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಕೆ - ಡಿಸಿಎಂ ಜಿ. ಪರಮೇಶ್ವರ್ ಸುಳಿವುKPSC ಕಚೇರಿ ಮೇಲೆ ಸಿಐಡಿ ದಾಳಿ, 329 ಅಭ್ಯರ್ಥಿಗಳಿಗೆ ನೋಟಿಸ್!ಸಮಾಜ ಕಲ್ಯಾಣ ಇಲಾಖೆಯ 140 ಶಿಕ್ಷಕರ ಹುದ್ದೆ ಹಾಗೂ KSET ಪರೀಕ್ಷೆಗೆ ಅರ್ಜಿ ಆಹ್ವಾನ!ಸಚಿವ ನಾಗೇಂದ್ರ ವಜಾಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ 'ಬಳ್ಳಾರಿ ಚಲೋ' ಪಾದಯಾತ್ರೆ!ಮಳೆ ಕೊರತೆ ನೀಗಿಸಲು 27 ಕೋಟಿ ವೆಚ್ಚದಲ್ಲಿ ಶೀಘ್ರವೇ ಮೋಡ ಬಿತ್ತನೆ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್‌ಗೆ ಕೋರ್ಟ್ ಗ್ರೀನ್ ಸಿಗ್ನಲ್!