ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ದಿನಾಂಕ 23-10-2026ರಂದು ನಡೆಯಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ಸರ್ಕಾರಿ ನೌಕರರು ಹಾಗೂ ಖಾಸಗಿ ಕಂಪನಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಅಂದಿನ ದಿನ ವಿಶೇಷ ಸಾಂದರ್ಭಿಕ ರಜೆ ಘೋಷಿಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಕರ್ತವ್ಯ ಆಪ್ ತೊಂದರೆ: ಸರ್ಕಾರಿ ನೌಕರರಿಗೆ ಕಡ್ಡಾಯಗೊಳಿಸಿರುವ 'ಕರ್ತವ್ಯ ಆಪ್' ಮೂಲಕ ಹಾಜರಾತಿ ಪಡೆಯಲಾಗುತ್ತಿದ್ದು, ಕೇವಲ 5 ನಿಮಿಷ ತಡವಾದರೂ ಅರ್ಧ ದಿನದ ರಜೆ ಕಡಿತಗೊಳ್ಳಲಿದೆ. ಇದರಿಂದ ಹೆಚ್ವಿನ ನೌಕರರಿಗೆ ನೋಟಿಸ್ ಅಥವಾ ಮೆಮೋ ಭೀತಿ ಎದುರಾಗಿ ಮತದಾನದಿಂದ ದೂರ ಉಳಿಯುವಂತಾಗಿದೆ.
ಖಾಸಗಿ ನೌಕರರ ಪರದಾಟ: ದೂರದೂರುಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ತಮ್ಮ ಸ್ವಂತೂರಿಗೆ ತೆರಳಿ ಮತ ಚಲಾಯಿಸಲು ಕಂಪನಿಗಳು ವೇತನ ಕಡಿತ ಮಾಡುತ್ತಿರುವುದರಿಂದ ಮತದಾನದ ಪ್ರಮಾಣ ಕುಸಿಯುವ ಸಾಧ್ಯತೆಯಿದೆ.
ಸಮಯದ ಅಭಾವ: ಸರ್ಕಾರಿ ನೌಕರರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮತದಾನ ಮಾಡಲು ಹೋಬಳಿ ಹಾಗೂ ಬೂತ್‌ಗಳಿಗೆ ತೆರಳಬೇಕಿದೆ. ರಜೆ ಸಿಗದಿದ್ದಲ್ಲಿ ಸಂವಿಧಾನ ಬದ್ಧವಾಗಿ ಪ್ರಜೆಗಳಿಗೆ ಸಿಕ್ಕಿರುವ ಮತದಾನದ ಹಕ್ಕು ಕಸಿದುಕೊಂಡಂತಾಗುತ್ತದೆ.
ಪ್ರಜಾಪ್ರತಿನಿಧಿ ಕಾಯ್ದೆ: 1951ರ ಸೆಕ್ಷನ್ 62ರ ಪ್ರಕಾರ ಮತದಾನದ ಹಕ್ಕು ಶಾಸನಬದ್ಧವಾಗಿದ್ದು, ಇದನ್ನು ನಿರಾಕರಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಂತೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಲು ಅನುವಾಗುವಂತೆ ದಿನಾಂಕ 23-10-2026ರಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾರ್ವತ್ರಿಕ/ಸಾಂದರ್ಭಿಕ ರಜೆ ಘೋಷಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಬೆಳಗಟ್ಟೆ, ರಾಧಾ.ಓ ಗೌಡ, ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಟಿ. ವಿಭಾಗದ ಜಿಲ್ಲಾಧ್ಯಕ್ಷ ಯಶೋಧಮ್ಮ, ಕಿರಣ್, ಈಶ್ವರ, ಶ್ರೀಧರನಾಯ್ಕ, ಹೊಸದುರ್ಗ ಪ್ರಕಾಶ್ ಅಧ್ಯಕ್ಷರು, ಎಸ್‌ಸಿ ಘಟಕದ ಉಪಾಧ್ಯಕ್ಷ ರಮೇಶ್, ಅರುಣ್‌ಕುಮಾರ್, ಧನಂಜಯ್, ಶೇಕ್, ಶಶಿ, ಕರಿಯಪ್ಪ, ರವಿಶಂಕರ್, ಮಹೇಶ್, ತಿಪ್ಪೇಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.



