ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ಹಾಗು ಸರ್ಕಾರಿ ಪ್ರೌಡಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
2005-06 ಹಾಗು 2007-08ರ ಸಾಲಿನ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ತಮಗೆ ಪಾಠ ಪ್ರವಚನ ನೀಡಿದ ಗುರುಗಳಿಗೆ ಅದ್ಧೂರಿ ಮೆರವಣೆಗೆ ಮೂಲಕ ಸ್ವಾಗತಿಸಿ ಗುರುವಂದನಾ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದರು.
ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮುಖ್ಯಶಿಕ್ಷಕ ಮುನಿಕೃಷ್ಣ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ಮರಣೀಯ ದಿನಗಳನ್ನು ನೆನಪಿಸಿ ಕೊಳ್ಳುತ್ತ ತೂಬಗೆರೆ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ಹಾಗು ಸರ್ಕಾರಿ ಪ್ರೌಡಶಾಲೆಯ 2005-06 ಹಾಗು 2007-08 ರ ಸಾಲಿನ ವಿದ್ಯಾರ್ಥಿಗಳು ಸುಮಾರು ವರ್ಷಗಳ ನಂತರ ಒಂದೆಡೆ ಸೇರಿದ ವಿದ್ಯಾರ್ಥಿಗಳಿಗೆ ಜೀವನಕ್ಕೆ ಆದರ್ಶ ಮಾರ್ಗ ತೋರಿಸಿದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಅರ್ಪಿಸುತ್ತಿರುವುದು ಶ್ಲಾಘನೀಯವಾಗಿದ್ದು ಎಂದರು.
ನಂತರ ಹಳೆಯ ವಿದ್ಯಾರ್ಥಿ ವಿಕಾಸ್ ಮಾತನಾಡಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಇದೆ. ಗುರು ಬ್ರಹ್ಮ, ಗುರು ವಿಷ್ಣು ಮಹೇಶ್ವರ ಎಂದು ಗುರುಗಳನ್ನು ಗೌರವಿಸಲಾಗುತ್ತದೆ. ಮನೆಯಲ್ಲಿ ತಂದೆ ತಾಯಿ ನಂತರ ಗುರುಗಳ ಸ್ಥಾನ ಮಹತ್ವಪೂರ್ಣವಾಗಿದೆ. ಯಾವುದೇ ರೀತಿಯ ಶರತ್ತು ಬದ್ಧತೆ ಇಲ್ಲದೇ ಪ್ರೀತಿ ತೋರುವ ತಂದೆ ತಾಯಿ ನಂತರ ಎರಡನೇ ಸ್ಥಾನವೇ ಗುರುವಿನದು. ನಿಷ್ಕಲ್ಮಶ ನಿಸ್ವಾರ್ಥ ಭಾವನೆಯಿಂದ ವಿದ್ಯಾರ್ಥಿಗಳನ್ನು ಸರಿ ಮಾರ್ಗದತ್ತ ಗುರುವು ಕೊಂಡೊಯ್ಯುತ್ತಾನೆ. ಆ ಕಾರಣದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶ ಗುರುವಿನ ಮಾರ್ಗ ಅನುಸರಿಸಿ ಸಾಧನೆ ತೋರಲು ಸಾಧ್ಯವಾಗಿದೆ. ನಾವು 2006-07 ನೇ ಸಾಲಿನ ಸುಮಾರು 230 ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಮತ್ತು 25 ಶಿಕ್ಷರು ಈ ಒಂದು ಸಂಗಮದಲ್ಲಿ ಭಾಗವಹಿಸಿದ್ದು ಖುಷಿತಂದಿದೆ. ಇಂತಹ ಗೌರವ ಪೂರ್ವಕ ಸಮ್ಮಿಲನ ನೋಡಲು ಬೇರೆ ಬೇರೆ ಶಾಲೆಯ ಶಿಕ್ಷಕರುಗಳು ಸಹ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತಷ್ಟು ಮೆರಗುತಂದಿದೆ.
ಮುಂದಿನ ದಿನಗಳಲ್ಲೂ ನಮ್ಮ ಮತ್ತು ಶಿಕ್ಷಕರ ಸಂಬಂಧ ಹೀಗೆಯೇ ಇರಲಿ ಕಾರ್ಯಕ್ರಮವನ್ನು ಯಶಸ್ಸು ಗಳಿಸಿದ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಹಾಗೂ ಊರಿನ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.
ಸ್ನೇಹ ಸಮ್ಮಿಲನ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ನಾರಾಯಣಪ್ಪ, ನಿವೃತ್ತ ಸರ್ಕಾರಿ ಹಿರಿಯ ಶಾಲೆ ಮುಖ್ಯ ಉಪಾಧ್ಯಾಯರು ಪಿಳ್ಳಪ್ಪ , ಬಸವರಾಜು, ಹನುಮಂತ ರಾಯಪ್ಪ, ರಂಗೇಗೌಡ, ಉಷಾ , ನಿರ್ಮಲ , ಈಶ್ವರಯ್ಯ, ಡಾಕ್ಟರ್ ಮುನಿರಾಜು, ರಾಜೇಶ್, ಚಂದ್ರಶೇಖರ್ ಯು ಜಿ , ಚಿದಾನಂದ ಶಾಸ್ತ್ರಿ, ಲೈಬ್ರರಿ ಮಂಜಣ್ಣ, ದೈಹಿಕ ಶಿಕ್ಷಕರು ವಿಶ್ವನಾಥ ಗೌಡರು, ಪ್ರಕಾಶ್ ಮುಂತಾದ ಶಿಕ್ಷಕರು ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 2005-06 ಹಾಗು2007-08 ಸಾಲಿನ ತೂಬಗೆರೆ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ಹಾಗು ಸರ್ಕಾರಿ ಪ್ರೌಡಶಾಲೆಯ ಎಲ್ಲಾ ಹಳೇಯ ವಿದ್ಯಾರ್ಥಿಗಳು ಹಾಗು ಊರಿನ ಗ್ರಾಮಸ್ಥರು ತಂದೆ ತಾಯಿಗಳು ಸಾರ್ವಜನಿಕರು ಹಾಜರಿದ್ದರು.



