Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಚ್‌ಡಿಕೆ ಟಾರ್ಗೆಟ್ ಕಾಂಗ್ರೆಸ್ ಅಲ್ಲ, ಬಿಜೆಪಿ; ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ನಿಜವಾದ ಹೋರಾಟ ಕಾಂಗ್ರೆಸ್ ಸರ್ಕಾರದ ವಿರುದ್ಧವಲ್ಲ, ಬದಲಾಗಿ ಬಿಜೆಪಿ ವಿರುದ್ಧ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮಿಷ್ಟದಂತೆ ಯಾವುದೇ ಆರೋಪ ಮಾಡಲು ಸ್ವತಂತ್ರರು. ಆದರೆ ಅವರ ಅಸಲಿ ಉದ್ದೇಶ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವವನ್ನು ಮುಗಿಸುವುದಾಗಿದೆ ಎಂದು ವ್ಯಂಗ್ಯವಾಡಿದರು.

Advertisement

ಬಿಜೆಪಿ ವಿರುದ್ಧವೇ ಹೋರಾಟ: ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದ ಡಿ ಕೆ ಶಿವಕುಮಾರ್, "ಅವರು ನಮ್ಮ ವಿರುದ್ಧ ಹೋರಾಡುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ತಲೆಎತ್ತಬಾರದು ಎಂಬ ಏಕೈಕ ಉದ್ದೇಶದಿಂದ ಬಿಜೆಪಿ ವಿರುದ್ಧವೇ ಹೋರಾಟ ನಡೆಸುತ್ತಿದ್ದಾರೆ" ಎಂದರು.

ದಾಖಲೆ ಬಿಡುಗಡೆ ಹೆದರಿಕೆಯಿಲ್ಲ: 'ದೇಶವೇ ಅಲ್ಲೋಲ ಕಲ್ಲೋಲವಾಗುವ ದಾಖಲೆ ಬಿಡುಗಡೆ ಮಾಡುತ್ತೇನೆ' ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, "ಬಹಳ ಸಂತೋಷ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ" ಎಂದು ಲಘುವಾಗಿ ತಳ್ಳಿಹಾಕಿದರು.

ವಿಪಕ್ಷಗಳ ಪಾದಯಾತ್ರೆಗೆ ಟಾಂಗ್: ಬಿಜೆಪಿ-ಜೆಡಿಎಸ್ ಕೈಗೊಳ್ಳಲಿರುವ ಪಾದಯಾತ್ರೆ ಬಗ್ಗೆ ಮಾತನಾಡಿ, "ಮೊದಲು ಅವರು ಪಾದಯಾತ್ರೆ ಆರಂಭಿಸಲಿ. ನಾವು ರಾಜಕಾರಣಿಗಳು, ಆ ನಂತರ ನಾವೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ. ಮಳೆ-ಬೆಳೆ, ರೈತರ ಹಿತರಕ್ಷಣೆ ಹಾಗೂ ಕಸ್ತೂರಿರಂಗನ್ ವರದಿ ಜಾರಿ ಕುರಿತು ಶಾಸಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು" ಎಂದು ಸ್ಪಷ್ಟಪಡಿಸಿದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉದ್ಯೋಗ ಆಕಾಂಕ್ಷಿಗಳಿಗೆ ಭಾರಿ ಸಿಹಿ ಸುದ್ದಿ: 4,697ಕ್ಕೂ ಹೆಚ್ಚು ಹುದ್ದೆಗಳ ಭರ್ಜರಿಗೆ ಮುಹೂರ್ತ!ಚಿಲ್ಲಹಳ್ಳಿಯಲ್ಲಿ ಸೆಪ್ಟೆಂಬರ್ 8ರಂದು 'ಸಮಾಜಕ್ಕೆ ಶಿಕ್ಷೆ ಅರ್ಥಾತ್ ರೈತನ ನರಳಾಟ' ನಾಟಕ ಪ್ರದರ್ಶನಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನಿಂದ ಕಾಟವ್ವನಹಳ್ಳಿ ಶಾಲಾ ಮಕ್ಕಳಿಗೆ ನೀರಿನ ಬಾಟಲಿ ವಿತರಣೆವಿವಿ ಸಾಗರ ರಕ್ಷಣೆಗೆ ಹಿರಿಯೂರು ಉಪಚುನಾವಣೆ ಬಹಿಷ್ಕಾರಕ್ಕೆ ಎಚ್ಚರಿಕೆ: ಕಸವನಹಳ್ಳಿ ರಮೇಶ್ ನೇತೃತ್ವದಲ್ಲಿ ಸೆ. 8ಕ್ಕೆ ಜಂಟಿ ಹೋರಾಟದ ಸಭೆವಾಣಿ ವಿಲಾಸ ಸಾಗರ ಉಳಿಸಿ' ಸಮಾವೇಶದಲ್ಲಿ ಜಲ ಹೋರಾಟಗಾರರ ಆಗ್ರಹವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ರದ್ದು: ಸೆ. 5 ರ ದೆಹಲಿ ಪ್ರತಿಭಟನಾ ಮೆರವಣಿಗೆ ಹಿಂಪಡೆದ ಸಿಜೆಪಿ  ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೋದರ ಸೊಸೆ ಅನುಮಾನಾಸ್ಪದ ಸಾವು: ಮನೆಯಲ್ಲೇ ಶವವಾಗಿ ಪತ್ತೆಇಂಡಿಗೋ ವಿಮಾನ ಎಂಜಿನ್ ದೋಷ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಪ್ರಾಣಾಪಾಯ, ತುರ್ತು ಭೂಸ್ಪರ್ಶರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಷ್ 'ಮಾಫಿ ಸಾಕ್ಷಿ'ಗೆ ನಟ ದರ್ಶನ್ ತಡೆ ಅರ್ಜಿ, ತುರ್ತು ವಿಚಾರಣೆ ನಿರಾಕರಿಸಿದ ಹೈಕೋರ್ಟ್ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಮನವಿ, ದಿನಾಂಕ ನಿಗದಿಗೆ ಸಿಜೆಐ ನಿರಾಕರಣೆ