E-PAPER
16 Nov 2026, 05:33:02 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭೋವಿ ನಿಗಮದ ನಿರ್ದೇಶಕರ ನೇಮಕಕ್ಕೆ ಹಿರಿಯೂರು ಭೋವಿ ಸಮಾಜ ವಿರೋಧ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ಸರ್ಕಾರವು ನೂತನವಾಗಿ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಎಲ್. ಸರವಣನ್ ಅವರನ್ನು ನೇಮಕ ಮಾಡಿರುವುದಕ್ಕೆ ಹಿರಿಯೂರು ತಾಲ್ಲೂಕು ಭೋವಿ ಸಮಾಜದ ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನೇಮಕವನ್ನು ತಕ್ಷಣವೇ ರದ್ದುಗೊಳಿಸಿ, ಅರ್ಹರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿ ಸಮಾಜದ ವತಿಯಿಂದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ.

ಪಕ್ಷಕ್ಕಾಗಿ ದುಡಿದವರ ಕಡೆಗಣನೆ: ತಾಲ್ಲೂಕು ಭೋವಿ ಸಮಾಜದ ಮುಖಂಡರ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ ಸಮಾಜದ ಹಿರಿಯ ಮುಖಂಡರನ್ನು ಪರಿಗಣಿಸದೆ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸದ ಹಾಗೂ ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಎಲ್. ಸರವಣನ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಅವರು ದೂರಿದ್ದಾರೆ.

 ಅಲ್ಲದೆ, ಇವರು ತಾಲ್ಲೂಕಿನ ಭೋವಿ ಸಮಾಜದ ಯಾವುದೇ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ ಎಂದು ಸಮಾಜದ ಪದಾಧಿಕಾರಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚುನಾವಣೆಯಲ್ಲಿ ಹಿನ್ನಡೆಯ ಎಚ್ಚರಿಕೆ: ಸಮಾಜದ ಗಮನಕ್ಕೆ ತಾರದೆ ವೈಯಕ್ತಿಕ ಹಿತಾಸಕ್ತಿಯಿಂದ ಈ ಆಯ್ಕೆ ನಡೆದಿದೆ ಎಂದು ಆರೋಪಿಸಿರುವ ಸಮಾಜದ ಮುಖಂಡರು, ಕೂಡಲೇ ಸರವಣನ್ ಅವರ ನೇಮಕವನ್ನು ಬದಲಾಯಿಸಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ಕೆ. ತಿಮ್ಮರಾಜು, ಕಾರ್ಯದರ್ಶಿ ಟಿ. ಭೂತ ಭೋವಿ, ಉಪಾಧ್ಯಕ್ಷ ಆಲೂರು ನಾಗೇಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಚಳಮಡು ಬಾಲರಾಜು, ಹಿರಿಯೂರು ಗುರುಪ್ರಸಾದ್, ಬಳಗಟ್ಟ ಮೂರ್ತಿ, ಆದಿವಾಲ ಗೋವಿಂದರಾಜ್, ಹಿರಿಯೂರು ಪಲ್ಲವ ಮತ್ತು ಬಬ್ಬೂರು ತಿಮ್ಮರಾಜು ಅವರು ಈ ಮನವಿ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ವಿಕಸಿತ ಭಾರತ' ಗುರಿಗೆ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಕೊಡುಗೆ ಮಹತ್ವದ್ದು: ಕುಮಾರಸ್ವಾಮಿಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ; 16ನೇ ಪ್ರತಿಭೋತ್ಸವ ಸಂಪನ್ನ​ ಹಿರಿಯೂರು ಉಪಸಮರ: ಟಿಕೆಟ್‌ಗಾಗಿ ದೋಸ್ತಿಗಳಲ್ಲಿ ಗೊಂದಲ; ಅಶೋಕ್‌ಗೆ ಹೆಚ್‌ಡಿಕೆ ಖಡಕ್ ಸಲಹೆ!ಹಿರಿಯೂರು ಉಪಚುನಾವಣೆ: ಹೈಕಮಾಂಡ್ ಅಂಗಳಕ್ಕೆ ಚೆಂಡು ಬಿರ್ಸಾ ಮುಂಡಾ ಜಯಂತಿ: ಸಂಸತ್ ಆವರಣದಲ್ಲಿ ಪ್ರಧಾನಿ ಮೋದಿ ಪುಷ್ಪನಮನಪ್ರಗತಿಪರ ರೈತನ ಮುಖವಾಡದ ಮರೆಯಲ್ಲಿ ಡ್ರಗ್ಸ್ ದಂಧೆ: ಪೆಡ್ಲರ್ ಅರೆಸ್ಟ್!ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ವಿರೋಧ: ಬಿಜೆಪಿ-ಕಾಂಗ್ರೆಸ್ ನಾಯಕರ ವಾಕ್ಸಮರಶ್ರೀಕೃಷ್ಣದೇವರಾಯ ವಿವಿಯ 14ನೇ ವಾರ್ಷಿಕ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್, 42 ಸಾಧಕರಿಗೆ ಚಿನ್ನದ ಪದಕಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐಪಿಎಸ್, ಕೆಎಎಸ್ ಅಧಿಕಾರಿಗಳ ವರ್ಗಾವಣೆಸಂಸತ್ ಗ್ರಂಥಾಲಯದ ಪುಸ್ತಕಗಳನ್ನು ಓದಿ ಇತಿಹಾಸ ತಿಳಿಯಿರಿ: ಕಂಗನಾ ರಣಾವತ್‌ಗೆ ರಮ್ಯಾ ವ್ಯಂಗ್ಯದ ಸಲಹೆ