Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಕಾಂಗ್ರೆಸ್‌ನಿಂದ ಸಾಂವಿಧಾನಿಕ ಸಂಸ್ಥೆಗಳಿಗೆ ಅಪಮಾನ, ದೇಶಹಿತದ ಚಿಂತನೆ ಇಲ್ಲ: ಹರೀಶ್ ದ್ವಿವೇದಿ ಕಿಡಿ​

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಚುನಾವಣಾ ಆಯೋಗ
, ಇವಿಎಂ ಹಾಗೂ ಸುಪ್ರೀಂ ಕೋರ್ಟ್‌ನಂತಹ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ನಿರಂತರವಾಗಿ ಅಪಮಾನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

​ಚಿತ್ರದುರ್ಗದಲ್ಲಿ ಏರ್ಪಡಿಸಲಾಗಿದ್ದ "ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ" ಜಾಗೃತಿ ಅಭಿಯಾನ ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ದೇಶವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸುತ್ತಿವೆ ಎಂದು ಆರೋಪಿಸಿದರು.

​ಸಂವಿಧಾನದ ಹೆಸರಿನಲ್ಲಿ ನಾಟಕ: ರಾಹುಲ್ ಗಾಂಧಿ ಅವರ ನಡವಳಿಕೆಯನ್ನು ಟೀಕಿಸಿದ ಅವರು, "ರಾಹುಲ್ ಗಾಂಧಿಯವರು ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಾರೆ. ಆದರೆ, ಒಮ್ಮೆ ಆ ಪುಸ್ತಕ ಕೆಳಗೆ ಬಿದ್ದಾಗ ಅದರೊಳಗೆ ಖಾಲಿ ಪುಟಗಳಿರುವುದು ಕಂಡುಬಂತು. ಸಂವಿಧಾನದ ಮೇಲಿನ ಅವರ ನಿಜವಾದ ಗೌರವ ಹಾಗೂ ಅವರ ರಾಜಕೀಯ ಸ್ವರೂಪ ಏನೆಂಬುದು ಜನರಿಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿದೆ" ಎಂದು ವ್ಯಂಗ್ಯವಾಡಿದರು.

​ದೇಶವಿರೋಧಿ ಧೋರಣೆ: "ಕಾಂಗ್ರೆಸ್ ಎಂದಿಗೂ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಿಲ್ಲ. ದೇಶದ ಅಭಿವೃದ್ಧಿ, ರಾಮಮಂದಿರ ನಿರ್ಮಾಣ ಹಾಗೂ ರಾಷ್ಟ್ರಹಿತದ ಪ್ರತಿಯೊಂದು ಕೆಲಸವನ್ನೂ ಆ ಪಕ್ಷ ವಿರೋಧಿಸುತ್ತಾ ಬಂದಿದೆ. ಜೊತೆಗೆ ದೇಶಕ್ಕಾಗಿ ತ್ಯಾಗ ಮಾಡಿದ ಮಹಾಪುರುಷರಿಗೂ ಅಪಮಾನ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

​೨೦೨೮ ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ಜನವಿರೋಧಿಯಾಗಿದೆ ಎಂದು ದೂರಿದ ದ್ವಿವೇದಿ, ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

​ಈ ಪಾದಯಾತ್ರೆ ಹಾಗೂ ಜಾಗೃತಿ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಎಂ. ಚಂದ್ರಪ್ಪ, ಎಸ್. ಸುರೇಶ್ ಗೌಡ, ಜಿ.ಬಿ. ಜ್ಯೋತಿ ಗಣೇಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಬಿ.ಸಿ ಹನುಮಂತೇಗೌಡ ಸೇರಿದಂತೆ ಹಲವು ಶಾಸಕರು, ಮಾಜಿ ಜನಪ್ರತಿನಿಧಿಗಳು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು: ಶಿವಾನಂದ ತಗಡೂರು 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ 10 ವರ್ಷ ಜೈಲು, ₹6.84 ಲಕ್ಷ ದಂಡಬಸ್ ಪ್ರಯಾಣ ಹಾಗೂ ಹಾಲು ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿಕೆಶಿ: ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ಬಸ್ ದರವೂ ಕಡಿತಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡನೆ: ಸಾರ್ವಜನಿಕ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹಕಾಂಗ್ರೆಸ್‌ನಿಂದ ಸಾಂವಿಧಾನಿಕ ಸಂಸ್ಥೆಗಳಿಗೆ ಅಪಮಾನ, ದೇಶಹಿತದ ಚಿಂತನೆ ಇಲ್ಲ: ಹರೀಶ್ ದ್ವಿವೇದಿ ಕಿಡಿ​ಪ್ರಿಯಕರನಿಂದಲೇ ಯುವತಿ ಭೀಕರ ಕೊಲೆ; ನಾಪತ್ತೆ ನಾಟಕವಾಡಿದ ಖಾಕಿ!​ ರಾಜ್ಯ ಸಾರಿಗೆ ಬಸ್ ದರ ಭಾರಿ ಏರಿಕೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಟಿಕೆಟ್ ಬೆಲೆ ಹೆಚ್ಚಳ, ಮಧ್ಯರಾತ್ರಿಯಿಂದಲೇ ಜಾರಿಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: ‘ಭಾರತದಲ್ಲೂ ಇದೇ ಬದಲಾವಣೆ ಶೀಘ್ರ’ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ವಿರುದ್ಧ ಕನ್ನಡಿಗರ ಆಕ್ರೋಶ: ಬೇಷರತ್ ಕ್ಷಮೆಗೆ ಆಗ್ರಹ