Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

​"ಕಾಂಗ್ರೆಸ್ ಪಕ್ಷದ ದಯನೀಯ ಸ್ಥಿತಿ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ"- ವಾಗ್ದಾಳಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಾಮಾಜಿಕ ಜಾಲತಾಣಗಳ ಯುದ್ಧ ಮತ್ತೊಂದು ಹಂತಕ್ಕೆ ತಲುಪಿದೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜನತಾದಳ (ಜಾತ್ಯತೀತ) ಪಕ್ಷವು
, ಎಕ್ಸ್ (ಟ್ವಿಟರ್) ಮೂಲಕ ಅವರ ವಿರುದ್ಧ ನೇರ ಹಾಗೂ ಗಂಭೀರ ವಾಗ್ದಾಳಿ ನಡೆಸಿದೆ.

​ಬೇರೆ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುವ ಮುನ್ನ ತಮ್ಮದೇ ಪಕ್ಷದ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಒಮ್ಮೆ ತಿರುಗಿ ನೋಡಿಕೊಳ್ಳಿ ಎಂದು ಜೆಡಿಎಸ್ ಕುಟುಕಿದೆ.

​​ಕಾಂಗ್ರೆಸ್‌ನ ದಯನೀಯ ಸ್ಥಿತಿ: "ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನ ಪ್ರಸ್ತುತ ಪರಿಸ್ಥಿತಿ ದೇಶದಲ್ಲಿ ಏನಾಗಿದೆ ಎಂಬುದನ್ನು ಡಿ.ಕೆ. ಶಿವಕುಮಾರ್ ಅವರೇ ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ. ದೇಶಾದ್ಯಂತ ಹರಿದು ಹಂಚಿಹೋಗುತ್ತಿರುವ ನಿಮ್ಮದೇ ಪಕ್ಷದ ದಯನೀಯ ಸ್ಥಿತಿಯ ಬಗ್ಗೆ ಒಮ್ಮೆ ಚಿಂತಿಸುವುದು ಒಳ್ಳೆಯದು" ಎಂದು ಜೆಡಿಎಸ್ ಉಚಿತ ಸಲಹೆ ನೀಡಿದೆ.

​ಅಧಿಕಾರದ ಸೊಕ್ಕಿನ ಮಾತುಗಳು: "ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತೂ ಗೌರವ ತರುವುದಿಲ್ಲ. ನಾಡಿನ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಲವೇ ನಿಮಗೆ ತಕ್ಕ ಪಾಠ ಕಲಿಸಲಿದೆ" ಎಂದು ಜೆಡಿಎಸ್ ಎಚ್ಚರಿಸಿದೆ.

​'ಸೊನ್ನೆ'ಯ ಗಣಿತ ಪಾಠ: ಡಿ.ಕೆ. ಶಿವಕುಮಾರ್ ಅವರಿಗೆ ಶೂನ್ಯದ ಮಹತ್ವವನ್ನು ನೆನಪಿಸಿರುವ ಜೆಡಿಎಸ್, "ಸೊನ್ನೆಯೂ ಕೀಳಲ್ಲ, ನೆನಪಿರಲಿ. ಸೊನ್ನೆಯಿಂದಲೇ ಸರ್ವವೂ ಆರಂಭ ಎನ್ನುವುದನ್ನು ಮರೆಯಬೇಡಿ. ಆದರೆ, ಈ ಸೊನ್ನೆ ನಿಮ್ಮ ಕಣ್ತೆರೆಸಲಿ ಎಂಬುದಷ್ಟೇ ನಮ್ಮ ಕಳಕಳಿ" ಎಂದು ವ್ಯಂಗ್ಯವಾಡಿದೆ.

​ರಾಜಕೀಯ ವಲಯದಲ್ಲಿ ಚರ್ಚೆ:
​ಜೆಡಿಎಸ್‌ನ ಈ ಪೋಸ್ಟ್ ಪ್ರಸ್ತುತ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಸಾಗುತ್ತಿರುವ ಸರಣಿ ಟ್ವೀಟ್ ವಾರ್‌ಗೆ ಇದು ಮತ್ತೊಂದು ಸೇರ್ಪಡೆಯಾಗಿದ್ದು
, ಕಾಂಗ್ರೆಸ್ ಇದಕ್ಕೆ ಯಾವ ರೀತಿ ಕೌಂಟರ್ ಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸ ವಿಂಗಡನೆ ಕುರಿತು ಜಾಗೃತಿ ಮೂಡಿಸುವ ವಿಶೇಷ ಅಭಿಯಾನಕ್ಕೆ ಚಾಲನೆಇದೇ 24ರಂದು ಮಾಸಿಕ ಗಮಕ ಕಾರ್ಯಕ್ರಮಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸುರೇಶ್ ಋಗ್ವೇದಿಸಹಕಾರ ಸಂಘದ ಆಡಳಿತ ಮಂಡಳಿ ವಜಾಕ್ಕೆ ಆಗ್ರಹಿಸಿ ಉಪನಿಬಂಧಕರಿಗೆ ದೂರುದಾರರಿಂದ ಮನವಿ"ರಾಹುಲ್ ಗಾಂಧಿ ಭಾರತ ವಿರೋಧಿ": ಕಾಂಗ್ರೆಸ್ ವಿರುದ್ಧ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿಸೈದ್ಧಾಂತಿಕ ಬದ್ಧತೆಯೊಂದಿಗೆ ಪಕ್ಷ ಬಲವರ್ಧನೆಗೆ ವಿಜಯೇಂದ್ರ ಕರೆ​​"ಕಾಂಗ್ರೆಸ್ ಪಕ್ಷದ ದಯನೀಯ ಸ್ಥಿತಿ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ"- ವಾಗ್ದಾಳಿ"2024ರಲ್ಲಿ ನಿಮ್ಮ ತಮ್ಮನನ್ನು ಸೋಲಿಸಿದಂತೆ, 2028ರಲ್ಲಿ ನಿಮಗೂ ಅದೇ ಗತಿ":ಜೆಡಿಎಸ್ಚಿಕಿತ್ಸೆ ಸಿಗದೆ ಆಂಬ್ಯುಲೆನ್ಸ್‌ನಲ್ಲೇ 900 ಕಿಮೀ ಅಲೆದಾಡಿದ ಯುವಕ!ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಕೈಜೋಡಿಸಬೇಕು-ಡಾ.ಪ್ರಭಾ