ಚಂದ್ರವಳ್ಳಿ ನ್ಯೂಸ್,ಹಿರಿಯೂರು: ತಾಲೂಕಿನ ಧರ್ಮಪುರ ಹೋಬಳಿಯ ಹರಿಯಬ್ಬೆ ಗ್ರಾಮದ ಕುರಿ ತಿಮ್ಮಣ್ಣನವರ ವಂಶಸ್ತರಾದ, ಗಿರಿಯಪ್ಪನವರ ಪುತ್ರ ಶ್ರೀಮಾನ್ ಹನುಮಂತರಾಯಪ್ಪ (50) (ಕಾನಿ ಬಟ್ರು) ಅವರು ದೈವಾಧೀನರಾಗಿದ್ದಾರೆ.
ಮೃತರು ತಂದೆ ಗಿರಿಯಪ್ಪ, ಪತ್ನಿ, ನಾಲ್ಕು ಮಂದಿ ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.
ಇಂದು ಅಂತಿಮ ಸಂಸ್ಕಾರ:
ಮೃತರ ಅಂತಿಮ ವಿಧಿವಿಧಾನಗಳು ಶನಿವಾರ (ಇಂದು) ಮಧ್ಯಾಹ್ನ 12.30ಕ್ಕೆ ಹರಿಯಬ್ಬೆ ಗ್ರಾಮದಲ್ಲಿ ನೆರವೇರಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಅಗಲಿಕೆಗೆ ಗ್ರಾಮಸ್ಥರು ಹಾಗೂ ಬಂಧು-ಮಿತ್ರರು ತೀವ್ರ ಕಂಬನಿ ಮಿಡಿದಿದ್ದಾರೆ.




