ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸಾರ್ವಜನಿಕ ಸ್ವತ್ತನ್ನು ಉಳಿಸುವಂತೆ ಹಲವು ಬಾರಿ ಮನವಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ಮೇಲಿನ ನಾಯಕರಂಡಳ್ಳಿಗ್ರಾಮದ ಸರ್ವೇ ನಂಬರ್ 17ರಲ್ಲಿ ಸುಮಾರು 85ಕ್ಕೂ ಅಧಿಕ ರೈತರಿಗೆ ಜಮೀನು ಮಂಜೂರಾಗಿದ್ದು ರಸ್ತೆಗಾಗಿ ಸರ್ಕಾರಿ ಕಚೇರಿಗಳಿಗೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅಲೆಯುತ್ತಿದ್ದರು ಯಾವುದೇ ಕ್ರಮವಾಗಿಲ್ಲ ಜಿಲ್ಲಾಧಿಕಾರಿಗಳ ಕಚೇರಿಯಿಂದ 3ನೇ ಬಾರಿಗೆ ಕಡತಗಳು ಹಿಂದಿರುಗಿವೆ ಸಾರ್ವಜನಿಕರ ಹಿತ ಕಾಪಾಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದೋರಣೆ ಖಂಡಿಸಿ ಮೇ.25ರ ಇಂದು ತಾಲೂಕುದಂಡಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡು ರಾಷ್ಟ್ರೀಯ ಸೇನೆ ರಾಜ್ಯಾಧ್ಯಕ್ಷ ಬಿ ಶಿವಶಂಕರ್ ತಿಳಿಸಿದರು.
ನಗರದಲ್ಲಿನ ಕರುನಾಡು ರಾಷ್ಟ್ರೀಯ ಸೇನೆ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು ತಾಲ್ಲೂಕಿನಲ್ಲಿ ಹಲವಾರು ಸಾರ್ವಜನಿಕ ಭೂಮಿಗಳ ಮೇಲೆ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು ಇಲ್ಲಸಲ್ಲದ ನೆಪ ಹೇಳಿಕೊಂಡು ಭೂಮಿ ವಶಪಡಿಸಿಕೊಳ್ಳುತ್ತಿದ್ದಾರೆ ಈ ಕುರಿತು ತಾಲ್ಲೂಕು ಆಡಳಿತಕ್ಕೆ ಎಷ್ಟೇ ಮನವಿ ಸಲ್ಲಿಸಿ ತಿಳಿಸಿ ಹೇಳಿದರು ಯಾವ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಿಲ್ಲ ಎಂದರು.
ಸುಮಾರು 30 ಕ್ಕೂ ಹೆಚ್ಚು ವರ್ಷಗಳಿಂದ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿರುವ ಮೇಲಿನ ನಾಯಕರಂಡಳ್ಳಿಗ್ರಾಮದ ಸರ್ವೇ ನಂಬರ್ 17ರ ಭೂಮಿಯನ್ನು ಇಂದು ಏಕಾಏಕಿ ಖಾಸಗಿ ವ್ಯಕ್ತಿಗಳು ಬಂದು ನಮ್ಮದು ಜಾಗ ಖಾಲಿ ಮಾಡಿ ಎನ್ನುತ್ತಿದ್ದಾರೆ. ರೈತರ ಜೀವನಕ್ಕೆ ಆಧಾರವಾಗಿರುವ ಉಳುಮೆ ಭೂಮಿಯನ್ನು ಕಿತ್ತುಕೊಳ್ಳಲು ಕೆಲ ಪ್ರಭಾವಿಗಳು ಪ್ರಯತ್ನಿಸುತ್ತಿದ್ದು ಸದರಿ ಭೂಮಿ ಉಳಿಸಿಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈ ವೇಳೆ ಕರುನಾಡು ರಾಷ್ಟ್ರೀಯ ಸೇನೆ ರಾಜ್ಯ ಉಪಾಧ್ಯಕ್ಷ ಗಂಗಿರೆಡ್ಡಿ,ರಾಜ್ಯ ನಿರ್ದೇಶಕರಾದ ಚಂದ್ರಿಕಾ,ರಾಜ್ಯ ಖಜಾಂಚಿ ಕುಮಾರ್, ಮೇಲಿನ ನಾಯಕರಂಡಳ್ಳಿ ಗ್ರಾಮದ ಮುಖಂಡರಾದ ಉಮೇಶ್, ಶ್ರೀನಿವಾಸ್, ಮಂಜುನಾಥ್, ಗಂಗಾಧರ್, ಸುರೇಶ, ರಾಮಾಂಜಿನಪ್ಪ , ಸೇರಿದಂತೆ ಹಲವು ಪ್ರಮುಖರು ಕರುನಾಡು ರಾಷ್ಟ್ರೀಯ ಸೇನೆ ಪದಾಧಿಕಾರಿಗಳು ಹಾಜರಿದ್ದರು.



