ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ 'ನಾಡಹಬ್ಬ' ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಹಬ್ಬದ ಮೆರುಗನ್ನು ಹೆಚ್ಚಿಸಿದ ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಹಾಗೂ ಗಣ್ಯ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ರಾಜ್ಯದ ಸಮಸ್ತ ಜನರ ಪರವಾಗಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನಮ್ಮ ನಾಡಿನ ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ನಾಡಹಬ್ಬದ ಉತ್ಸಾಹ ಹಾಗೂ ಗೌರವವನ್ನು ದೇಶದ ರಕ್ಷಣಾ ಪಡೆಗಳ ಉನ್ನತಾಧಿಕಾರಿಗಳೊಂದಿಗೆ ಹಂಚಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದ್ದಾರೆ.
ವಿಶೇಷವಾಗಿ ಧನ್ಯವಾದ ಸಲ್ಲಿಸಿದ ರಕ್ಷಣಾ ಅಧಿಕಾರಿಗಳ ಪಟ್ಟಿ:
ಲೆಫ್ಟಿನೆಂಟ್ ಜನರಲ್ ಉಲ್ಹಾಸ್ ಕಿರ್ಪೇಕರ್– ಜನರಲ್ ಆಫೀಸರ್ ಕಮಾಂಡಿಂಗ್, ಹೆಡ್‌ಕ್ವಾರ್ಟರ್ಸ್ ದಕ್ಷಿಣ ಭಾರತ್ ಏರಿಯಾ
ಮೇಜರ್ ಜನರಲ್ ಅಜಯ್ ಮಿಶ್ರಾ – ಚೀಫ್ ಆಫ್ ಸ್ಟಾಫ್, ಹೆಡ್‌ಕ್ವಾರ್ಟರ್ಸ್ ದಕ್ಷಿಣ ಭಾರತ್ ಏರಿಯಾ
ಮೇಜರ್ ಜನರಲ್ ಭಾರತ್ ಮೆಹ್ತಾನಿ – ಜನರಲ್ ಆಫೀಸರ್ ಕಮಾಂಡಿಂಗ್, ಹೆಡ್‌ಕ್ವಾರ್ಟರ್ಸ್ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ
ರಿಯರ್ ಅಡ್ಮಿಪಲ್ ವಿಕ್ರಮ್ ಮೆನನ್– ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್, ಕರ್ನಾಟಕ ನೇವಿ ಏರಿಯಾ
ರಿಯರ್ ಅಡ್ಮಿಪಲ್ ರವನೀಶ್ ಸೇಥ್ – ಅಡ್ಮಿಪಲ್ ಸೂಪರಿಂಟೆಂಡೆಂಟ್, ನೇವಲ್ ಶಿಪ್ ರಿಪೇರ್ ಯಾರ್ಡ್, ಕಾರವಾರ
ಏರ್ ವೈಸ್ ಮಾರ್ಷಲ್ ಜಿ. ಅನಂತ್ – ಹಿರಿಯ ಆಡಳಿತಾಧಿಕಾರಿ, ಹೆಡ್‌ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್, ಭಾರತೀಯ ವಾಯುಪಡೆ, ಬೆಂಗಳೂರು.
"ಮೈಸೂರು ದಸರಾದ ಕಲಾತ್ಮಕ ವೈಭವ, ಕರ್ನಾಟಕದ ಆತಿಥ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಈ ದೇಶಪ್ರೇಮಿ ಅಧಿಕಾರಿಗಳೊಂದಿಗೆ ಆಚರಿಸಿರುವುದು ನಮಗೆ ಸಿಕ್ಕ ಗೌರವವಾಗಿದೆ. ಅವರ ಉಪಸ್ಥಿತಿಯು ಈ ಬಾರಿಯ ನಾಡಹಬ್ಬಕ್ಕೆ ಮತ್ತಷ್ಟು ವಿಶೇಷ ಕಳೆಯನ್ನು ತಂದಿತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಅವರು ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.



