ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ರಾಜಘಟ್ಟ ಗ್ರಾಮದ ನಂದಿಕುಂಟೆ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಮಾಡಲಾಯಿತು.
ಕೆರೆ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆನಂದ್ ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಂದಿಕುಂಟೆ ಕೆರೆ ಯನ್ನು 11,55,000 ವೆಚ್ಚದಲ್ಲಿ ಹೂಳು ತೆಗೆದು ಕೊಟ್ಟಿದ್ದಾರೆ ,ಕೆರೆ ಹಸ್ತಾಂತರ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಅವರು ಆಗಮಿಸಿ ಹೂಳೆತ್ತಿದ ಕೆರೆಯನ್ನು ಹಸ್ತಾಂತರ ಮಾಡಿದ್ದಾರೆ. ಇದನ್ನು ನಾವುಗಳು ಉಳಿಸಿಕೊಂಡು ಹೋಗಬೇಕು. ಈ ವರ್ಷ ಉತ್ತಮ ಮಳೆ ಆದಲ್ಲಿ ಕೆರೆ ತುಂಬಿ ಗ್ರಾಮಕ್ಕೆ ಅನುಕೂಲವಾಗುತ್ತದೆ ಎಂದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ವಲಯ ಮೇಲ್ವಿಚಾರಕ ರಘು, ಶಿವಪುರ ಶೌರ್ಯ ತಂಡದ ಚಂದ್ರಶೇಖರ್ ಅವರ ತಂಡ ಗಿಡ ನಾಟಿ ಮಾಡಿದರು ಸೇವಾಪ್ರತಿನಿಧಿಗಳಾದ ಅಮರಾವತಿ, ಸರ್ವೇಶ್, ಪುಷ್ಪ, ಭುವನೇಶ್ವರಿ ಶೌರ್ಯ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.



