E-PAPER
20 Nov 2026, 09:03:46 AM|
Gold₹13023/gGold24K ₹13,023/g - 22K ₹11,927/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪುರುಷರ ರಕ್ಷಣೆಗೂ ಪ್ರತ್ಯೇಕ ಕಾನೂನು ರೂಪಿಸಲಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಾನೂನಿನಲ್ಲಿ ಮಹಿಳೆಯರಿಗೆ ಇರುವಂತ ರಕ್ಷಣೆ ಪುರುಷರಿಗೂ ಸಿಗಬೇಕಾಗಿರುವುದರಿಂದ ಪ್ರತ್ಯೇಕವಾಗಿ ಪುರುಷರಿಗೂ ಕಾನೂನು ಜಾರಿಗೆ ತರುವಂತೆ ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ನಾಗರೀಕರ ರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ ಸಾಂಸಾರಿಕ ಜೀವನ ಸುಖಮಯವಾಗಿರಬೇಕಾದರೆ ದಂಪತಿಗಳ ಪಾತ್ರ ಅತಿ ಮುಖ್ಯ. ಎಲ್ಲಾ ಕುಟುಂಬಗಳಲ್ಲಿಯೂ ಮನಸ್ತಾಪ ಮೂಡುವುದು ಸಹಜ. ಸಮಸ್ಯೆಗಳನ್ನು ಮನೆಯೊಳಗೆ ಬಗೆಹರಿಸಿಕೊಳ್ಳಬೇಕು. ಬೀದಿಗೆ ತರಬಾರದು. ಕಲಂ ೪೯೭ ರ ಅನ್ವಯ ವಿವಾಹಿತ ಮಹಿಳೆ ಪರ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಕಾನೂನು ಬಾಹಿರವಾಗಿತ್ತು. ೨೦೧೮ ರಲ್ಲಿ ಸುಪ್ರೀಂಕೋರ್ಟ್ ಈ ಕಾಯಿದೆಯನ್ನು ರದ್ದುಪಡಿಸಿ ಯಾವುದೇ ಒಬ್ಬ ಮಹಿಳೆ ಪರ ಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದುವುದು ಕಾನೂನು ಬಾಹಿರವಲ್ಲ ಎಂಬ ತೀರ್ಪು ನೀಡಿರುವುದು ಪುರಷರಿಗೆ ಅನ್ಯಾಯವಾಗಿದೆ. ಎಷ್ಟೊ ಮಹಿಳೆಯರು ಇದನ್ನೆ ಅಸ್ತ್ರವನ್ನಾಗಿಸಿಕೊಂಡು ಪುರುಷರ ಮೇಲೆ ವರದಕ್ಷಿಣೆ ಕಿರುಕುಳ, ಅತ್ಯಾಚಾರದ ಕೇಸ್‌ಗಳನ್ನು ದಾಖಲಿಸುತ್ತಿದ್ದಾರೆ. ಸರ್ಕಾರ ಪುರುಷರ ರಕ್ಷಣೆಗಾಗಿ ಪ್ರತ್ಯೇಕ ಕಾನೂರು ರಚಿಸುವಂತೆ ಜಿಲ್ಲಾಡಳಿತದ ಮೂಲಕ ಆಗ್ರಹಿಸಿದರು.

ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಹೀಗೆ ಅನೇಕ ಕೇಸುಗಳಾಗುತ್ತಿರುವುದರಿಂದ ಅಮಾಯಕ ಪುರುಷರು ಜೈಲು ಪಾಲಾಗಿದ್ದಾರೆ. ಅದಕ್ಕಾಗಿ ಮಹಿಳೆಯರ ರಕ್ಷಣೆಗೆ ಕಾಯಿದೆಯಿರುವಂತೆ ಪುರುಷರಿಗೂ ಪ್ರತ್ಯೇಕ ಕಾನೂನು ರೂಪಿಸಿ ರಕ್ಷಣೆ ನೀಡಬೇಕು. ಹೆಸರಿಗಷ್ಟೆ ಪುರುಷರ ದಿನಾಚರಣೆ ಬೇಡವೆಂದು ಸರ್ಕಾರವನ್ನು ಒತ್ತಾಯಿಸಿದರು.

ನ್ಯಾಯವಾದಿ ಬಿ.ಕೆ.ಎಸ್.ಅಂಜುಮ್ ಮಾತನಾಡಿ ಕೆಲವು ಮಹಿಳೆಯರು ತಮ್ಮ ರಕ್ಷಣೆಗಾಗಿ ಇರುವ ಕಾನೂನನ್ನು ದುರಪಯೋಗಪಡಿಸಿಕೊಳ್ಳುತ್ತಿರುವುದರಿಂದ ಏನು ತಪ್ಪು ಮಾಡದ ಪುರುಷರು ಕಾನೂನಿನಡಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪತಿ ತನ್ನ ಪತ್ನಿಯ ತಪ್ಪನ್ನು ಪ್ರಶ್ನಿಸಿದಾಗ ವರದಕ್ಷಿಣೆ ಕಿರುಕುಳ ನೀಡುತ್ತಾರೆಂದು ದೂರು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡುವುದನ್ನು ನೋಡಿದ್ದೇವೆ. ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದಕ್ಕಾಗಿ ಪುರುಷರ ರಕ್ಷಣೆಗೂ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ಶ್ರೀದೇವಿ ಮಾತನಾಡಿ ಪ್ರತಿ ಕುಟುಂಬವೂ ನೆಮ್ಮದಿಯಿಂದ ಇರಬೇಕಾದರೆ ಸ್ತ್ರೀ-ಪುರುಷ ಇಬ್ಬರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು. ಮಹಿಳೆ ಅಬಲೆ ಎನ್ನುವ ಕಾರಣವನ್ನೇ ಮುಂದಿಟ್ಟುಕೊಂಡು ಪುರುಷರಿಗೆ ನಾನಾ ರೀತಿಯ ತೊಂದರೆ ನೀಡುತ್ತಿರುವುರಿಂದ ಅನೇಕರು ಜೈಲು ಪಾಲಾಗುತ್ತಿದ್ದಾರೆ. ಹೆಸರಿಗಷ್ಟೆ ಪುರುಷ ಪ್ರದಾನ ಸಮಾಜವೆನ್ನುವುದು ಬೇಡ. ಮಹಿಳೆಯರಂತೆ ಪುರುಷರಿಗೂ ರಕ್ಷಣೆ ಸಿಗಬೇಕೆಂದು ಜಿಲ್ಲಾಡಳಿತವನ್ನು ವಿನಂತಿಸಿದರು.

ನ್ಯಾಯವಾದಿಗಳಾದ ಸೌಮ್ಯ, ಪುಷ್ಪ, ಚಂಪ, ಅಶ್ವಿನಿ, ಅರ್ಚನ, ಮಮತ, ಲಿಖಿತ, ಮನ್ಸೂರ್, ಮುಯಿನ್, ಅಶೋಕ್‌ಬೆಳಗಟ್ಟ, ಎಂ.ಜೆ.ತಿಪ್ಪೇಸ್ವಾಮಿ, ನವಾಜ್‌ಖಾನ್ ಕೀತಿ, ಖಾನ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.21ರಂದು ಯೋಗ ಸಂಸ್ಥೆಯ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ಆರೋಗ್ಯ ಸಮಸ್ಯೆಪುರುಷರ ರಕ್ಷಣೆಗೂ ಪ್ರತ್ಯೇಕ ಕಾನೂನು ರೂಪಿಸಲಿಎನ್.ಪಿ.ಎಸ್ ಯೋಜನೆ: ಅಧಿಕಾರಿಗಳಿಗೆ ತರಬೇತಿಅರಣ್ಯ ಇಲಾಖೆಗೆ ಸೇರಿದ ಮರಗಳನ್ನು ಅಕ್ರಮವಾಗಿ ಹರಾಜು ಮಾಡಿದ ಗ್ರಾಮ ಪಂಚಾಯ್ತಿನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆ : ಡಿ. 07ಕ್ಕೆ ಕನ್ನಡೇತರ ನಾಮಫಲಕ ತೆರವಿಗೆ ಕನ್ನಡಪರ ಹೋರಾಟಗಾರರು ಸಿದ್ಧತೆಸರ್ಕಾರಿ ಖರಾಬ್ ಜಮೀನನ್ನು ಪ್ರಭಾವಿಗಳು ಒತ್ತುವರಿ ಮಾಡಿರುವುದನ್ನು ವಿರೋಧಿಸಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಸರ್ಕಾರಿ ಖರಾಬ್ ಜಮೀನನ್ನು ಪ್ರಭಾವಿಗಳು ಒತ್ತುವರಿ ಮಾಡಿರುವುದನ್ನು ವಿರೋಧಿಸಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಕೆಯುಡಬ್ಲ್ಯೂಜೆ ನವೀಕೃತ ವೆಬ್‌ಸೈಟ್ ಅನಾವರಣಗೊಳಿಸಿದ ತ್ಯಾಗರಾಜ್‌ಗೆ ಸನ್ಮಾನಹಿರಿಯೂರು ಉಪಚುನಾವಣೆ ಟಿಕೆಟ್‌ಗಾಗಿ ಜೆಡಿಎಸ್ ಜೊತೆ ಜಗಳವಿಲ್ಲ, ಗೆಲುವಷ್ಟೇ ಗುರಿ: ಅಶೋಕ್