ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಖಜಾನೆ ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಟವಾಡೆ ಅಧಿಕಾರಿಗಳು ಮತ್ತು ವಿಷಯ ನಿರ್ವಾಹಕರಿಗೆ ಎನ್.ಪಿ.ಎಸ್ ಯೋಜನೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಖಜಾನೆಯ ಉಪ ನಿರ್ದೇಶಕ ಹೆಚ್.ಟಿ.ಅಶೋಕ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಕೆ.ºಚ್.ಓಂಕಾರಪ್ಪ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಉಪ ನಿರ್ದೇಶಕ ಹೆಚ್.ಟಿ.ಅಶೋಕ, ನೌಕರರ ನಿವೃತ್ತಿ ವೇಳೆ ಎನ್.ಪಿ.ಎಸ್. ಮೊತ್ತ ಪಾವತಿ, ಭಾಗಶಃ ಹಿಂಪಡೆಯುವ ಪ್ರಕ್ರಿಯೆ ಹಾಗೂ ಡಿ.ಡಿ.ಒ.ರವರು ಅಧಿಕಾರಿಗಳು ಪಾಲಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಜಿಲ್ಲಾ ಖಜಾನೆಯ ಪ್ರಥಮ ದರ್ಜೆ ಸಹಾಯಕ ಬಿ.ಗೋವರ್ಧನ ಅವರು ಎನ್.ಪಿ.ಎಸ್. ನಿವೃತ್ತಿ ಉಪದಾನ, ಎನ್.ಪಿ.ಎಸ್.ನಿಂದ ಒ.ಪಿ.ಎಸ್.ಗೆ ಪರಿವರ್ತಿಸುವ ವಿಧಾನ, ಕುಟುಂಬ ಪಿಂಚಣಿ, ಭಾಗಶಃ ಹಿಂಪಡೆಯುವಿಕೆ, ಐಐಎಸ್, ಡಿಡಿಒ ಲಾಗಿನ್ ಬಳಕೆ ಹಾಗೂ ನೌಕರರ ವೈಯಕ್ತಿಕ ದಾಖಲೆಗಳ ಬದಲಾವಣೆ ಸೇರಿದಂತೆ ವಿವಿಧ ಎನ್.ಪಿ.ಎಸ್. ವಿಷಯಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆ ಮುಖ್ಯ ಲೆಕ್ಕಿಗರು ಅಶೋಕ್.ಪಿ. ತುಮ್ಮಿನಕಟ್ಟಿ, ಪ್ರಥಮ ದರ್ಜೆ ಸಹಾಯಕ ಹೆಚ್.ಎನ್.ಚೈತ್ರ, ದ್ವಿತೀಯ ದರ್ಜೆ ಸಹಾಯಕರಾದ ಟಿ.ಎಸ್.ಶರಣ್ಯ ಇದ್ದರು.




