Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಸರಾ ಜಂಬೂಸವಾರಿ ವೇಳೆ ಸಚಿವರಿಗೆ ತಡೆ: ತನಿಖೆಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ನೆರವೇರಿದ್ದು
, ನಿನ್ನೆ ವಿಜಯದಶಮಿ ಸಂಭ್ರಮಾಚರಣೆಯೊಂದಿಗೆ ಯಶಸ್ವಿಯಾಗಿ ತೆರೆಬಿದ್ದಿದೆ. ಈ ನಡುವೆ ಜಂಬೂಸವಾರಿ ಸಂದರ್ಭದಲ್ಲಿ ದಲಿತ ಸಚಿವರನ್ನು ಪೊಲೀಸರು ತಡೆದಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ದಸರಾ ಕಾರ್ಯಕ್ರಮಗಳು ಅತ್ಯಂತ ಸುಗಮ ಹಾಗೂ ವಿಜೃಂಭಣೆಯಿಂದ ನಡೆದಿವೆ. ಆದರೆ ಧ್ವಜಸ್ತಂಭ ಪೂಜೆಯ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಸಚಿವರನ್ನು ತಡೆದಿರುವುದು ನಿಜ ಎಂದು ಅವರು ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಳೆದ ಬುಧವಾರ ದಸರಾ ಮಹೋತ್ಸವ ಅತ್ಯಂತ ವೈಭವಯುತವಾಗಿ ನೆರವೇರಿದೆ. ಧ್ವಜಸ್ತಂಭದ ಬಳಿ ಯಾವುದೇ ದೊಡ್ಡ ಮಟ್ಟದ ಗೊಂದಲಗಳಾಗಿರಲಿಲ್ಲ. ಆದರೆ ಕೆಲವು ಅಧಿಕಾರಿಗಳು ಸಚಿವರನ್ನು ತಡೆದಿದ್ದು ನಿಜ. ಬಳಿಕ ನಾನೇ ಖುದ್ದಾಗಿ ಹೋಗಿ ಸಚಿವರು ಧ್ವಜಸ್ತಂಭ ಪೂಜೆಗೆ ತೆರಳಲು ಅವಕಾಶ ಮಾಡಿಕೊಡಬೇಕಾಯಿತು” ಎಂದು ಸ್ಪಷ್ಟಪಡಿಸಿದರು.

ಮುಖ್ಯ ಕಾರ್ಯದರ್ಶಿಗೆ ತನಿಖೆಗೆ ಆದೇಶ: ಈ ಸಂಪೂರ್ಣ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಸಿಸಿಟಿವಿ ಹಾಗೂ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದರು. "ಧ್ವಜಸ್ತಂಭದ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಪ್ರತಿಯೊಬ್ಬ ಸಚಿವರಿಗೂ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಲಾಗಿತ್ತು ಹಾಗೂ ಕಾರ್ಯಕ್ರಮಕ್ಕೂ ಮುನ್ನ ಪೂರ್ವಾಭ್ಯಾಸವನ್ನೂ ನಡೆಸಲಾಗಿತ್ತು" ಎಂದು ಅವರು ವಿವರಿಸಿದರು.

ಘಟನೆಯ ಹಿನ್ನೆಲೆ: ಅಕ್ಟೋಬರ್-21ರಂದು ಅಪರಾಹ್ನ ಮೈಸೂರು ಅರಮನೆ ಆವರಣದಲ್ಲಿ ದಸರಾ ಜಂಬೂಸವಾರಿಗೆ ಚಾಲನೆ ನೀಡುವ ಮುನ್ನ ನಂದಿಧ್ವಜ ಪೂಜೆ ನೆರವೇರಿಸಲು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಾಲನಾ ವೇದಿಕೆಯತ್ತ ಹೊರಟಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನೇ ಹಿಂಬಾಲಿಸಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಹಾಗೂ ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ತೆರಳುತ್ತಿದ್ದರು.

ಈ ವೇಳೆ ಸ್ಥಳದಲ್ಲಿದ್ದ ಎಸ್‌ಪಿ ರಿಷ್ಯಂತ್ ಅವರು ಡಿಸಿಎಂ ಹೋದ ನಂತರ, ಹಿಂಬದಿಯಲ್ಲಿದ್ದ ಸಚಿವರನ್ನು ತಡೆದು "ನಿಮಗೆ ಒಳಗಡೆ ಹೋಗಲು ಅನುಮತಿ ಇಲ್ಲ" ಎಂದು ಅಡ್ಡಗಟ್ಟಿದ್ದರು. ಈ ವಿಷಯ ಸಾರ್ವಜನಿಕವಾಗಿ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಎಲ್ಲರಿಗೂ ಧನ್ಯವಾದ ಸಮರ್ಪಣೆ: ಇದೇ ವೇಳೆ, ಮೈಸೂರು ದಸರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸಾಂಸ್ಕೃತಿಕ ಕಲಾವಿದರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಡಿ.ಕೆ. ಶಿವಕುಮಾರ್ ಧನ್ಯವಾದ ಅರ್ಪಿಸಿದರು. ನಗರದಾದ್ಯಂತ ಕಣ್ಣುಮನ ಸೆಳೆದ ಜಗಮಗಿಸುವ ವಿದ್ಯುತ್ ದೀಪಾಲಂಕಾರ, ಕೃಷಿ ಪ್ರದರ್ಶನ, ಅತ್ಯಾಕರ್ಷಕ ಸ್ತಬ್ಧಚಿತ್ರಗಳು ಹಾಗೂ ಡ್ರೋನ್ ಪ್ರದರ್ಶನದ ಯಶಸ್ಸನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹರಿಯಬ್ಬೆಯಲ್ಲಿ ಮಕ್ಕಳಿಗಾಗಿ 'ಮಿಡ್ ಬ್ರೈನ್ ಆ್ಯಂಡ್‌ ಥರ್ಡ್ ಐ ಆ್ಯಕ್ಟಿವೇಷನ್' ವಿಶೇಷ ತರಬೇತಿ ಶಿಬಿರತಗಡೂರಿನಲ್ಲಿ ವಿಜಯದಶಮಿ ಹಬ್ಬದ ಸಂಭ್ರಮಕಿತ್ತೂರು ರಾಣಿ ಚೆನ್ನಮ್ಮನ ಚೇತನದಲ್ಲಿ ಚಿರಂತನ ಸ್ವಾತಂತ್ರ್ಯದ ಕನಸು ಕಲ್ಯಾಣ ಕ್ರಾಂತಿಯ ವಿಜಯೋತ್ಸವ: ಮರಣವನ್ನೇ ಮಹಾನವಮಿಯನ್ನಾಗಿಸಿದ ಶರಣರ ವಚನ ಪರಂಪರೆಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿವಿ ಸಾಗರ ನಾಲೆಯ ಸೇತುವೆ – ತುರ್ತು ದುರಸ್ತಿಗೆ ಸಾರ್ವಜನಿಕರ ಆಗ್ರಹಮೈಸೂರು ದಸರಾದಲ್ಲಿ ದಲಿತ ಸಚಿವರಿಗೆ ಅಪಮಾನ: ಕಾಂಗ್ರೆಸ್ ಸರ್ಕಾರದ 'ಸಾಮಾಜಿಕ ನ್ಯಾಯ'ದ ಕಪಟ ನಾಟಕ ಬಯಲು - ಆರ್. ಅಶೋಕ್ ವಾಗ್ದಾಳಿದಸರಾ ಮಹೋತ್ಸವ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿಬೆಂಗಳೂರಿಗೆ ಪ್ರವಾಹ ತಡೆ ಕಾವಲು: ಮಳೆನೀರು ಕಾಲುವೆ ವ್ಯವಸ್ಥೆ ಬಲಪಡಿಸಲು 2,000 ಕೋಟಿ ಹೂಡಿಕೆ – ಸಚಿವ ಕೃಷ್ಣ ಬೈರೇಗೌಡಮೂವರು ಸಚಿವರ ತಡೆಹಿಡಿದ ಪೊಲೀಸರ ವರ್ತನೆಗೆ ಜೆಡಿಎಸ್‌ತೀವ್ರ ಆಕ್ರೋಶ; ಕಾಂಗ್ರೆಸ್ ವಿರುದ್ಧ ವಾಗ್ದಾಳಿತಾರತಮ್ಯ, ಅಸ್ಪೃಶ್ಯತೆಯಿಂದ ಧರ್ಮದ ಅಸ್ತಿತ್ವಕ್ಕೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ ಕಳವಳ