Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ತಾರತಮ್ಯ, ಅಸ್ಪೃಶ್ಯತೆಯಿಂದ ಧರ್ಮದ ಅಸ್ತಿತ್ವಕ್ಕೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ ಕಳವಳ

ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಆಚರಣೆಗಳಿಂದಾಗಿ ಹಿಂದೂ ಧರ್ಮ ಅಳಿವಿನ ಹಾದಿಯಲ್ಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವಿಜಯದಶಮಿಯ ಅಂಗವಾಗಿ ನಗರದ ಬುದ್ಧ ವಿಹಾರದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಆಯೋಜಿಸಿದ್ದ 70ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, "ಹಿಂದೂ ಧರ್ಮದಲ್ಲಿದ್ದ ಅನ್ಯಾಯ ಹಾಗೂ ಅಸ್ಪೃಶ್ಯತೆಯನ್ನು ಸದಾ ವಿರೋಧಿಸುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, 'ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ' ಎಂದು 1935ರಲ್ಲೇ ಘೋಷಿಸಿದ್ದರು," ಎಂದು ಸ್ಮರಿಸಿಕೊಂಡರು.

ಇಂದಿಗೂ ಜಾತೀಯತೆ ಜೀವಂತ: ದೇಶದಲ್ಲಿ ಇಂದಿಗೂ ಜಾತೀಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದ ಖರ್ಗೆ, ತಮ್ಮ ಸ್ವಂತ ಅನುಭವವೊಂದನ್ನು ಹಂಚಿಕೊಂಡರು. "ಉತ್ತರಾಖಂಡದಲ್ಲಿ ನಾನು ಭಾಷಣ ಮಾಡಿ ಬಂದ ಎರಡು ದಿನಗಳ ಬಳಿಕ, ನಾನು ನಿಂತಿದ್ದ ಸ್ಥಳವನ್ನು ತೊಳೆದು ಸ್ವಚ್ಛಗೊಳಿಸಲಾಯಿತು. ಭಾಷಣ ಮುಗಿದ ತಕ್ಷಣ ತೊಳೆದಿದ್ದರೆ ಕೊಳೆ ಸ್ವಚ್ಛಗೊಳಿಸಿದರು ಎಂದು ಭಾವಿಸಬಹುದಿತ್ತು. ಆದರೆ ಎರಡು ದಿನಗಳ ನಂತರ ಸ್ಥಳ ತೊಳೆಯುವ ಈ ಮಾನಸಿಕತೆ ಎಂತಹ ಮೂಢನಂಬಿಕೆ? ಇದು ಮಾನಸಿಕ ಹಿಂಸೆಯಲ್ಲವೇ?" ಎಂದು ಅವರು ಪ್ರಶ್ನಿಸಿದರು.

ಸಮಾನತೆಯ ಹಕ್ಕಿಗಾಗಿ ಪ್ರಶ್ನೆ: "ನೀವು ಮಾರ್ಟಿನ್ ಅವರನ್ನು ಆಹ್ವಾನಿಸುತ್ತೀರಿ, ಮೊಹಮ್ಮದ್ ಅವರನ್ನು ಪ್ರೀತಿಯಿಂದ ಕರೆಯುತ್ತೀರಿ, ಆದರೆ ಮಲ್ಲಿಕಾರ್ಜುನನನ್ನು ಮಾತ್ರ ಏಕೆ ಆಹ್ವಾನಿಸುವುದಿಲ್ಲ? ನನ್ನ ಜನರನ್ನು ಸಮಾಜದಿಂದ ಹೊರಗಿಡುವುದೇಕೆ? ನಮಗೆ ಕುಡಿಯಲು ನೀರು ಮತ್ತು ಸೂಕ್ತ ಶಿಕ್ಷಣವನ್ನು ಏಕೆ ತಡೆಯುತ್ತೀರಿ, ನಾವೇನು ಮನುಷ್ಯರಲ್ಲವೇ? ಧರ್ಮದೊಳಗೆ ಇಂತಹ ವಿಭಜನೆಗಳು ಹಾಗೂ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಲು ಈ ತಾರತಮ್ಯವೇ ಮುಖ್ಯ ಕಾರಣವಲ್ಲವೇ?" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹರಿಯಬ್ಬೆಯಲ್ಲಿ ಮಕ್ಕಳಿಗಾಗಿ 'ಮಿಡ್ ಬ್ರೈನ್ ಆ್ಯಂಡ್‌ ಥರ್ಡ್ ಐ ಆ್ಯಕ್ಟಿವೇಷನ್' ವಿಶೇಷ ತರಬೇತಿ ಶಿಬಿರತಗಡೂರಿನಲ್ಲಿ ವಿಜಯದಶಮಿ ಹಬ್ಬದ ಸಂಭ್ರಮಕಿತ್ತೂರು ರಾಣಿ ಚೆನ್ನಮ್ಮನ ಚೇತನದಲ್ಲಿ ಚಿರಂತನ ಸ್ವಾತಂತ್ರ್ಯದ ಕನಸು ಕಲ್ಯಾಣ ಕ್ರಾಂತಿಯ ವಿಜಯೋತ್ಸವ: ಮರಣವನ್ನೇ ಮಹಾನವಮಿಯನ್ನಾಗಿಸಿದ ಶರಣರ ವಚನ ಪರಂಪರೆಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿವಿ ಸಾಗರ ನಾಲೆಯ ಸೇತುವೆ – ತುರ್ತು ದುರಸ್ತಿಗೆ ಸಾರ್ವಜನಿಕರ ಆಗ್ರಹಮೈಸೂರು ದಸರಾದಲ್ಲಿ ದಲಿತ ಸಚಿವರಿಗೆ ಅಪಮಾನ: ಕಾಂಗ್ರೆಸ್ ಸರ್ಕಾರದ 'ಸಾಮಾಜಿಕ ನ್ಯಾಯ'ದ ಕಪಟ ನಾಟಕ ಬಯಲು - ಆರ್. ಅಶೋಕ್ ವಾಗ್ದಾಳಿದಸರಾ ಮಹೋತ್ಸವ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿಬೆಂಗಳೂರಿಗೆ ಪ್ರವಾಹ ತಡೆ ಕಾವಲು: ಮಳೆನೀರು ಕಾಲುವೆ ವ್ಯವಸ್ಥೆ ಬಲಪಡಿಸಲು 2,000 ಕೋಟಿ ಹೂಡಿಕೆ – ಸಚಿವ ಕೃಷ್ಣ ಬೈರೇಗೌಡಮೂವರು ಸಚಿವರ ತಡೆಹಿಡಿದ ಪೊಲೀಸರ ವರ್ತನೆಗೆ ಜೆಡಿಎಸ್‌ತೀವ್ರ ಆಕ್ರೋಶ; ಕಾಂಗ್ರೆಸ್ ವಿರುದ್ಧ ವಾಗ್ದಾಳಿತಾರತಮ್ಯ, ಅಸ್ಪೃಶ್ಯತೆಯಿಂದ ಧರ್ಮದ ಅಸ್ತಿತ್ವಕ್ಕೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ ಕಳವಳ