ಚಂದ್ರವಳ್ಳಿ ನ್ಯೂಸ್,ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ವತಿಯಿಂದ ಇತ್ತೀಚೆಗೆ ನಮ್ಮನ್ನು ಅಗಲಿದ ಹಿರಿಯ ಪತ್ರಕರ್ತರಾದ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ, ಚಾಮರಾಜನಗರದ ಪ್ರಜಾವಾಣಿ ಪೋಟೋಗ್ರಾರ್ ಸಿ.ಆರ್.ವೆಂಕಟರಾಮ್ ಅವರಿಗೆ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಂದಾಯ ಭವನದಲ್ಲಿರುವ ಕೆಯುಡಬ್ಲೂೃಜೆ ಸಭಾಂಗಣದಲ್ಲಿ ಅ.29ರಂದು ಗುರುವಾರ ಬೆಳಿಗ್ಗೆ 11.15ಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ.



