Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ವಾಲ್ಮೀಕಿ ಮಹರ್ಷಿಗಳ ಜೀವನ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ: ಮುಖ್ಯಶಿಕ್ಷಕ ಟಿ.ಪಿ. ಉಮೇಶ್

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು. ನಂತರ ಮುಖ್ಯಶಿಕ್ಷಕ ಟಿ.ಪಿ. ಉಮೇಶ್ ಅವರು ಕುಕೃತ್ಯಗಳ ನಡೆಸುತ್ತ ಬದುಕಿದ ವ್ಯಕ್ತಿಯೊಬ್ಬರು ಆತ್ಮಪರಿವರ್ತನೆ
, ತಪಸ್ಸು ಮತ್ತು ಜ್ಞಾನಸಾಧನೆಯ ಮೂಲಕ ಮಹರ್ಷಿಯಾಗಿ, ಆದಿಕವಿಯಾಗಿ ಜಗತ್ತಿನ ಗೌರವಕ್ಕೆ ಪಾತ್ರರಾದದ್ದು ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿದೆ. ಮನುಷ್ಯನ ಹಿಂದಿನ ಬದುಕು ಹೇಗಿದ್ದರೂ, ತನ್ನ ತಪ್ಪುಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆದರೆ ಉನ್ನತ ಸಾಧನೆ ಮಾಡಬಹುದು ಎಂಬುದನ್ನು ವಾಲ್ಮೀಕಿ ಮಹರ್ಷಿಗಳ ಜೀವನ ನಮಗೆ ಕಲಿಸುತ್ತದೆ ಎಂದು ಹೇಳಿದರು.

ರಾಮಾಯಣ ಕೇವಲ ಮಹಾಕಾವ್ಯವಲ್ಲ; ಅದು ಧರ್ಮ, ಸತ್ಯ, ತ್ಯಾಗ, ಸಹನೆ, ಕರ್ತವ್ಯಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಜೀವನದರ್ಶನವಾಗಿದೆ. ಶ್ರೀರಾಮನ ಆದರ್ಶಗಳು, ಸೀತೆಯ ಸಹನೆ ಹಾಗೂ ಲವಕುಶರ ವ್ಯಕ್ತಿತ್ವದ ಮೂಲಕ ಮಹರ್ಷಿ ವಾಲ್ಮೀಕಿ ಅವರು ಸಮಾಜಕ್ಕೆ ಅಮೂಲ್ಯ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳು ಅವರ ಜೀವನದಿಂದ ಸ್ಫೂರ್ತಿ ಪಡೆದು ಸತ್ಯ, ಪ್ರಾಮಾಣಿಕತೆ, ಶಿಸ್ತು ಮತ್ತು ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಮಹರ್ಷಿ ವಾಲ್ಮೀಕಿ ಅವರ ಜೀವನ ಸಾಧನೆ ಮತ್ತು ರಾಮಾಯಣ ಮಹಾಕಾವ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

 ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಜಿ.ಎನ್.ರೇಷ್ಮಾ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೂಢಿಯ ಗೋಡೆಯಾಚೆ ಚಿಂತನೆಯ ಹೊಸ ಕಿಟಕಿ ತೆರೆಯಲಿಮಹರ್ಷಿ ವಾಲ್ಮೀಕಿ — ವ್ಯಕ್ತಿತ್ವದ ಉನ್ನತಿಗೆ ಜ್ಞಾನದ ದಾರಿದೀಪನವೆಂಬರ್ 2ಕ್ಕೆ ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿದ್ದರಾಮಯ್ಯ: 'ಸ್ಟಿಂಗ್' ಷಡ್ಯಂತ್ರದ ಕುರಿತು ಚರ್ಚೆಎಸ್‌ಸಿ-ಎಸ್‌ಟಿ ಕಾಯ್ದೆ ಅನ್ವಯಕ್ಕೆ 'ಜಾತಿ ಆಧಾರಿತ ಅವಮಾನ'ದ ಸ್ಪಷ್ಟ ಆರೋಪ ಕಡ್ಡಾಯ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪುಪ್ರಧಾನಿ ಮೋದಿಗೆ ಹೇಳಿ ಜ್ಞಾನೇಶ್ ಕುಮಾರ್ ವಜಾ ಮಾಡಿಸಿ, 30 ಸೆಕೆಂಡುಗಳಲ್ಲಿ ಪ್ರತಿಭಟನೆ ವಾಪಸ್: ರಾಹುಲ್ದೆಹಲಿಯ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಬೆಂಕಿ ಅವಘಡ: ಆರು ಅಗ್ನಿಶಾಮಕ ವಾಹನಗಳಿಂದ ಕಾರ್ಯಚರಣೆಖರ್ಗೆ ಹೇಳಿಕೆ ಕ್ಷಮಾರ್ಹವಲ್ಲ: ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶಕನ್ನಡಿಗರಿಗೆ ಉದ್ಯೋಗ: ಕೌಶಲ ಅಭಿವೃದ್ಧಿಗೆ ಮೋಹನ್ ದಾಸ್ ಪೈ ಆಗ್ರಹಬಿಜೆಪಿ ನಾಯಕರ ಬೃಹತ್ ಧರಣಿ; ಖರ್ಗೆ ಕ್ಷಮೆಯಾಚನೆಗೆ ಒತ್ತಾಯಪ್ರಧಾನಿ ಮೋದಿ ವಿರುದ್ಧ ಖರ್ಗೆ 'ವಿವಾದಾತ್ಮಕ' ಹೇಳಿಕೆ: ದೇಶಾದ್ಯಂತ ಬಿಜೆಪಿ ಉಗ್ರ ಪ್ರತಿಭಟನೆ, ರಾಜೀನಾಮೆಗೆ ಆಗ್ರಹ!