ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸ್ಥಳೀಯ ಸ್ವಾಭಿಮಾನವಾ…? ಅಥವಾ ಚುನಾವಣಾ ಕಾಲದ ದ್ವಂದ್ವ ರಾಜಕೀಯವಾ…? — ಹಿರಿಯೂರಿನ ರಾಜಕೀಯದ ನಗ್ನ ಸತ್ಯ ಅನಾವರಣ!.....”
ಹಿರಿಯೂರು ವಿಧಾನಸಭೆ ಉಪಚುನಾವಣೆಯ ಹೊತ್ತಿಗೆ ಕೆಲವರು “ಸ್ಥಳೀಯ ಸ್ವಾಭಿಮಾನ” ಎಂಬ ಘೋಷಣೆಯನ್ನು ಹೊತ್ತು ಬೀದಿಗಿಳಿದಿದ್ದಾರೆ. ಆದರೆ ಪ್ರಶ್ನೆ ಏನು ಅಂದ್ರೆ. ಈ ಸ್ವಾಭಿಮಾನ ಇಷ್ಟು ವರ್ಷ ಎಲ್ಲಿತ್ತು…? ಯಾವ ಮೋರಿಯಲ್ಲಿ ಬೀಗ ಹಾಕಿ ಇಟ್ಟಿದ್ದ್ರಿ…?
1989ರಲ್ಲಿ ಮೊದಲ ಬಾರಿಗೆ ಹಿರಿಯೂರು ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ದಿವಗಂತ ಹೆಚ್.ಕೆ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದಾಗ ನಿಮ್ಮ ಸ್ವಾಭಿಮಾನ ನಿದ್ರಿಸುತ್ತಿತ್ತಾ…?
1999ರಲ್ಲಿ ಲಂಬಾಣಿ ಸಮುದಾಯದ ವಕೀಲರಾದ ಕಾಶಿ ವಿಶ್ವನಾಥ್ ನಾಯಕ ಅವರನ್ನು ಅಭ್ಯರ್ಥಿ ಮಾಡಿದಾಗ ನಿಮ್ಮ ಎದೆ ಒಳಗಿನ ಸ್ಥಳೀಯ ರಕ್ತ ಕುದಿಯಲಿಲ್ಲವೇ…?
2004ರಲ್ಲಿ ಸ್ಥಳೀಯ ಪ್ರಬಲ ನಾಯಕರಾಗಿದ್ದ ಮಾದಿಗ ಜನಾಂಗದ ಜಿಎಸ್ ಮಂಜುನಾಥ್ ಹಾಗೂ ಬೋವಿ ಜನಾಂಗದ ಭೀಮಯ್ಯ ಅವರನ್ನು ಕಡೆಗಣಿಸಿ ಹೊರಗಿನವರಿಗೆ ಮಣೆ ಹಾಕಿದಾಗ, ನಿಮ್ಮ ಬಾಯಿಗೆ ಬೀಗ ಹಾಕಲಾಗಿತ್ತಾ…?
2008ರಲ್ಲಿ ಮರುವಿಂಗಡಣೆಯ ನಂತರ ಗೀತಾ ನದಿ ಗೌಡ, ಲಕ್ಷ್ಮಿಕಾಂತ್, ಯಶೋಧರ್ ಜಿಎಸ್ ಮಂಜುನಾಥ್ ಆರ್ ಮಂಜುನಾಥ್ ಸೇರಿದಂತೆ ಅನೇಕ ಅಭ್ಯರ್ಥಿಗಳು ಕಣಕ್ಕಿಳಿದಾಗ “ಸ್ಥಳೀಯ ಸ್ವಾಭಿಮಾನ” ಎಂಬ ಕೊಗು ಏಕೆ ಇರ್ಲಿಲ್ಲ ಧ್ವನಿ ಪೆಟ್ಟಿಗೆ ಸತ್ತೋಗಿತ್ತಾ.......????
2013ರಲ್ಲಿ ಸ್ಥಳೀಯರಾದ ಎಂ. ಜಯಣ್ಣ ಮತ್ತು ದಿವಂಗತ ಸಿದ್ದೇಶ್ ಯಾದವ್ ಇದ್ದಾಗ ಏಕೆ ಜನರು ಒಗ್ಗಟ್ಟಾಗಲಿಲ್ಲ…? 2018ರಲ್ಲಿ ಡಿ. ಯಶೋಧರ್ ಅವರನ್ನು ಏಕೆ ಗೆಲ್ಲಿಸಲಿಲ್ಲ…? 2023ರಲ್ಲಿ ರವೀಂದ್ರ ಅವರನ್ನು ಏಕೆ ಕೈಹಿಡಿಯಲಿಲ್ಲ…? ಆಗ ಮೌನವಾಗಿದ್ದವರು ಇಂದು ಮಾತ್ರ “ಸ್ಥಳೀಯ” ಎಂಬ ಹೆಸರಿನಲ್ಲಿ ಎದೆ ಬಡಿದುಕೊಳ್ಳುವುದು ರಾಜಕೀಯ ದ್ವಂದ್ವವಲ್ಲವೇ…?
ನಿಜ ಹೇಳಬೇಕಂದ್ರೆ, ಹಿರಿಯೂರಿನ ಜನರಿಗೆ ಹೊಸ ಮುಖ ಬೇಕಾ ಬೇಡವಾ ಅನ್ನೋದನ್ನು ಜನತೆಯೇ ತೀರ್ಮಾನ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಚುನಾವಣೆ ಬಂದಾಗ “ಸ್ವಾಭಿಮಾನ” ಎಂಬ ಭಾವನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದೇ ಜನರು ಕಳೆದ ಎರಡು-ಮೂರು ವರ್ಷಗಳಿಂದ ಹೊರಗಿನ ನಾಯಕರ ಜೊತೆ ವೇದಿಕೆ ಹಂಚಿಕೊಂಡರು…ಜಾತ್ರೆಗಳಲ್ಲಿ ಓಡಾಡಿದರು…ಮದುವೆಗಳಲ್ಲಿ ಫೋಟೋ ತೆಗೆಸಿಕೊಂಡರು…ರಾಜಕೀಯ ಸಭೆಗಳಲ್ಲಿ ಹೊಗಳಿಕೆ ಮಾತು ಆಡಿದರು…
ಆಗ ಹೊರಗಿನ ಅಭ್ಯರ್ಥಿಗಳು ಒಳ್ಳೆಯವರಾಗಿದ್ದರು, ಇಂದು ಮಾತ್ರ ಪ್ರಶ್ನೆ ಏಕೆ…? ಪ್ರಶ್ನೆ ಕೇಳಬೇಕಾದರೆ ಎಲ್ಲರಿಗೂ ಒಂದೇ ರೀತಿಯಾಗಿ ಕೇಳಬೇಕು.
ಇಂದೋ ಹೊರಗಡೆ ಅಭ್ಯರ್ಥಿಗಳನ್ನ ಟಾರ್ಗೆಟ್ ಮಾಡಿ “ಸ್ವಾಭಿಮಾನ”ದ ರಾಜಕೀಯ ಮಾಡುವುದರಲ್ಲಿ ಅರ್ಥವೇ ಏನಾದ್ರು ಅರ್ಥ ಇದ್ದೀಯ...?
ತಾವುಗಳೇಲ್ಲ ಹೊರಗಡೆಯವರನ್ನ ರೆಡ್ ಕಾರ್ಪೊರೇಟ್ ಹಾಕಿ ಸ್ವಾಗತ ಮಾಡಿ ಇವತ್ತು ತಮ್ಮಗಳ ಬುಡಕ್ಕೆ ಬಂದಾಗ ಸ್ಥಳೀಯ ಸ್ವಾಭಿಮಾನಿಗಳ ಎಂಬ ಕಿಚ್ಚು ಬಂತಾ....???
ಅಂದು ನಿಮ್ಮ ಕಣ್ಣಿಗೆ ಸ್ಥಳೀಯ ಸ್ವಾಭಿಮಾನಿಗಳು ಯಾರು ಕಾಣಲಿಲ್ವಾ.....??? ಚಿತ್ರದುರ್ಗ ಲೋಕಸಭೆ ರಾಜಕೀಯ ಇತಿಹಾಸದ ಪುಟಗಳನ್ನು ಒಮ್ಮೆ ತೆರೆದು ನೋಡಿ, 1996 ಲೋಕಸಭೆ, 1999, 2014, 2019 ಮತ್ತು 2024…
ಎಷ್ಟೋ ಬಾರಿ ವಿವಿಧ ಪಕ್ಷಗಳು ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಆಗ ಯಾರೂ “ಸ್ಥಳೀಯ ಸ್ವಾಭಿಮಾನ”ದ ಕೂಗು ಹಾಕಲಿಲ್ಲ.
ಹೀಗಿರುವಾಗ 2026ರ ಉಪಚುನಾವಣೆ ಮಾತ್ರ ಕೆಲವರ ಕಣ್ಣಿಗೆ “ಸ್ವಾಭಿಮಾನದ ಯುದ್ಧ”ವಾಗಿ ಕಾಣುವುದು ರಾಜಕೀಯದ ದೊಡ್ಡ ವ್ಯಂಗ್ಯ. ಜನತೆ ಈಗ ಜಾಗೃತರಾಗಿದ್ದಾರೆ.
ಯಾರು ನಿಜವಾದ ಹೋರಾಟಗಾರರು…ಯಾರು ಚುನಾವಣಾ ಕಾಲದ ಸ್ವಾಭಿಮಾನವಾದಿಗಳು…ಅನ್ನೋದಕ್ಕೆ ಉತ್ತರವನ್ನು ಈ ಬಾರಿ ಮತಪೆಟ್ಟಿಗೆಯೇ ನೀಡಲಿದೆ..!
ಲೇಖನ:ಶ್ರೀನಿವಾಸ್ ಕೆಟಿ, ಬೆಂಗಳೂರು.



