ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆ ವ್ಯಾಪ್ತಿಯ ಸಮಸ್ತ ಆಸ್ತಿ ಮಾಲೀಕರಿಗೆ ಪೌರಾಯುಕ್ತರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಅರ್ಹ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ಅಂತಿಮ ಇ-ಖಾತಾ ವಿತರಿಸಲು ವಿಶೇಷ ಇ-ಆಸ್ತಿ ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪೌರಾಯುಕ್ತ ಎ.ವಾಸೀಂ ಅವರು ತಿಳಿಸಿದ್ದಾರೆ.
ಈ ಮಹತ್ವದ ಅಭಿಯಾನದ ಮೂಲಕ ನಗರಸಭೆ ವ್ಯಾಪ್ತಿಯಲ್ಲಿರುವ ಕರಡು ಇ-ಖಾತಾಗಳನ್ನು ಅಂತಿಮ ಖಾತಾಗಳನ್ನಾಗಿ ಪರಿವರ್ತಿಸುವುದು ಹಾಗೂ ಹೊಸ ಇ-ಖಾತಾ ನೀಡುವ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ. ಆಸ್ತಿ ಮಾಲೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಆಸ್ತಿಗಳಿಗೆ ಅಧಿಕೃತ ಇ-ಖಾತಾ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ಹೆಲ್ಪ್‌ಲೈನ್ ಮತ್ತು ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು.
ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆಯಲ್ಲಿ ವಿಶೇಷ ಹೆಲ್ಪ್‌ಲೈನ್ ಸ್ಥಾಪಿಸಲಾಗಿದ್ದು, ಕಂದಾಯ ವಿಭಾಗದ ಕೆಳಗಿನ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು.
ನಗರಸಭೆ ಹೆಲ್ಪ್‌ಲೈನ್ ಸಂಖ್ಯೆ: 9108108084
ವಿನಯ್: 9353833372, ಮಹಾಂತೇಶ್: 9916416904, ಮಲ್ಲಿಕಾರ್ಜುನ: 9620287514, ಶ್ರೀನಿವಾಸ್: 9663433957.
ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ನಗರಸಭೆಯ ಕಂದಾಯ ವಿಭಾಗವನ್ನು ಅಥವಾ ಮೇಲೆ ನೀಡಲಾದ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಿ ತಮ್ಮ ಇ-ಖಾತಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಲು ಪೌರಾಯುಕ್ತ ವಾಸೀಂ ಅವರು ಕೋರಿದ್ದಾರೆ.




