Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

ಗ್ರಾಮೀಣ ಪ್ರತಿಭೆ ರಂಜಿತಾ ಸ್ವಾಮಿಗೆ ಪ್ರಥಮ ಸ್ಥಾನ

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೈನ್ಸ್ ಎಂದರೆ ಕಬ್ಬಿಣದ ಕಡಲೆ ಎನ್ನುವಂತೆ ಇರುವ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಡಿ ಗ್ರಾಮ ಟಿ.ಕಲ್ಲಹಳ್ಳಿಯ ಕಲ್ಲಹಳ್ಳಿಮಠದ ಕೆ.ಎಂ.ಬಸಯ್ಯ ಮತ್ತು ಏಕಾಂತಮ್ಮನವರ ಕುಟುಂಬದ ಮೊಮ್ಮಗಳು ಹಾಗೂ ಖ್ಯಾತ ಸಾಹಿತಿ ಡಾ. ಉಬಾಮ ಅವರ ಅಣ್ಣನ ಮಗಳು ಕುಮಾರಿ ರಂಜಿತ ಪ್ರಥಮ ಸ್ಥಾನ ಪಡೆದಿದ್ದಾಳೆ.

ಚಿತ್ರದುರ್ಗ ನಗರದ ಚಿನ್ಮುಲ್ಲಾದ್ರಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ತಲಾ ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿರುವುದು ವಿಶೇಷ. ಈ ಮೂಲಕ ತೀವ್ರ ಪೈಪೋಟಿಯ ನಡುವೆ
ರಂಜಿತ ಸ್ವಾಮಿ. ಎಂ 578 ಅಂಕ (96.3%) ಗಳಿಸಿ ಸಿ. ಎನ್. ಸಿ ಕಾಲೇಜು ಹಾಗೂ ಗ್ರಾಮಕ್ಕೆ ಹೆಸರು ತಂದಿರುತ್ತಾಳೆ.

ವಿದ್ಯಾರ್ಥಿಯ ಅಮೋಘ ಸಾಧನೆಗೆ ಸಿಎನ್‌ಸಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಕಾಲೇಜಿನ ಡೀನ್ ಆದ ಶ್ರೀ ಗೋಪಾಲ್, ಪ್ರಾಂಶುಪಾಲರಾದ ಶ್ರೀ ನಾಗರಾಜ್. ಬಿ, ಹಾಗೂ ಉಪಪ್ರಾಂಶುಪಾಲರಾದ ಶ್ರೀ ಮಂಜುನಾಥ್. ಹೆಚ್.ಪಿ ಅವರು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಎಲ್ಲಾ ಬೋಧಕ ವರ್ಗದವರಿಗೂ ಮತ್ತು ಸಾಧಕ ವಿದ್ಯಾರ್ಥಿಗಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಟಿ ರಚಿತಾ ರಾಮ್‌ಗೆ ಮುಜುಗರ; ಸೆಲ್ಫಿ ನೆಪದಲ್ಲಿ ಅಭಿಮಾನಿಯ ಅತಿರೇಕದ ವರ್ತನೆ!ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಗೆ ಕಾಂಗ್ರೆಸ್ ಸಿದ್ಧತೆ:125ಕ್ಕೂ ಹೆಚ್ಚು ಸ್ಥಾನಗಳ ಮೇಲೆ ಕಣ್ಣು!ಖರ್ಗೆ-ಮೋದಿ ಮುಖಾಮುಖಿ: ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕುರಿತು ಇಂದು ಪ್ರಧಾನಿ ಭೇಟಿಕಾಂಗ್ರೆಸ್‌ನಲ್ಲಿ ಸ್ಟಿಂಗ್ ಆಪರೇಷನ್ ವಿವಾದದ ನಡುಕ: ಸಿದ್ದರಾಮಯ್ಯ ಮೌನ, ಮುಖಂಡರ ಸರಣಿ ಸಭೆಗಳಿಂದ ಹೆಚ್ಚಿದ ಕುತೂಹಲಶ್ರೇಷ್ಠ ತೋಟಗಾರಿಕಾ ರೈತ/ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭ್ರಮೆಯಿಂದ ಹೊರಬರಬೇಕುಅವಳಿ ಕರುವಿಗೆ ಜನ್ಮ ನೀಡಿದ ಹಸುದಸರಾ ಹಬ್ಬದ ಅಂಗವಾಗಿ ಚಿಕ್ಕ ಮಕ್ಕಳ ಪಾದ ತೊಳೆದು ಹೊಸಯಳನಾಡು ಶಶಿಕಲಾ ಪ್ರಕಾಶ್ಆಗ್ನೇಯ ಪದವೀಧರರ ಕ್ಷೇತ್ರದ ಗೆಲುವು ನಮ್ಮದೇ: ಶಾಸಕ ಎಂ. ಚಂದ್ರಪ್ಪದುರ್ಗಾಷ್ಟಮಿ ಸಂಭ್ರಮ 108 ಹೆಣ್ಣು ಮಕ್ಕಳಿಗೆ ಮೂಗುತಿಧಾರಣೆ