Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶ್ರೇಷ್ಠ ತೋಟಗಾರಿಕಾ ರೈತ/ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2026ರ ಡಿಸೆಂಬರ್ 23 ರಿಂದ 25 ರವರೆಗೆ
“ಹವಾಮಾನ ವೈಪರೀತ್ಯದಲ್ಲಿ ಸುಸ್ಥಿರ ತೋಟಗಾರಿಕೆ” ಎಂಬ ಪ್ರಮುಖ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ಹಮ್ಮಿಕೊಂಡಿದೆ.

ಈ ಮೇಳದ ಅಂಗವಾಗಿ ರಾಜ್ಯದ 25 ಜಿಲ್ಲೆಗಳಿಂದ ತಲಾ ಒಬ್ಬರಂತೆ ಸಾಧನೆ ಮಾಡಿರುವ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು 2026 ನೇ ಅಕ್ಟೋಬರ್ 30 ಕೊನೆಯ ದಿನಾಂಕವಾಗಿದೆ.

ಆಸಕ್ತ ರೈತರು ವಿಶ್ವವಿದ್ಯಾಲಯದ ಅಧಿಕೃತ ವೆಬ್‍ಸೈಟ್ www.uhsbagalkot.karnataka.gov.in ಮೂಲಕ ಅರ್ಜಿ ನಮೂನೆಯನ್ನು (ಅನುಬಂಧ-1) ಡೌನ್‍ಲೋಡ್ ಮಾಡಿಕೊಳ್ಳಬಹುದು ಅಥವಾ ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ವಿಶ್ವವಿದ್ಯಾಲಯದ ತೋಟಗಾರಿಕೆ ಮಹಾವಿದ್ಯಾಲಯಗಳು / ಸಂಶೋಧನಾ ಕೇಂದ್ರಗಳ ಅಧಿಕಾರಿಗಳಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 30, 2026 ರೊಳಗೆ ಆಯಾ ವಿಳಾಸಗಳಿಗೆ ತಲುಪಿಸಬೇಕು.

ಅರ್ಹತಾ ನಿಯಮಗಳು ಮತ್ತು ನಿಬಂಧನೆಗಳು: ಅರ್ಜಿದಾರರು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಸರ್ಕಾರದ ಯಾವುದೇ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಅಥವಾ ಐಸಿಎಆರ್ ಪ್ರಶಸ್ತಿಗಳನ್ನು ಪಡೆದಿರಬಾರದು. ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ ಕಿರುಪಟ್ಟಿ ಮಾಡಲಾಗುವ ಮೂರು ಕ್ಷೇತ್ರಗಳಿಗೆ ಮಾತ್ರ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮ ಆಯ್ಕೆಯು ವಿಶ್ವವಿದ್ಯಾಲಯದ ನಿಯಮ ಹಾಗೂ ಆಯ್ಕೆ ಸಮಿತಿಯ ತೀರ್ಮಾನಕ್ಕೆ ಬದ್ಧವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಡಾ. ವೆಂಕಟೇಶಲು, ವಿಸ್ತರಣಾ ನಿರ್ದೇಶಕರು, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ದೂರವಾಣಿ ಸಂಖ್ಯೆ: 9480696381 / 08354-230101, ಡಾ.ದೀಪಾ ತೇರದಾಳ ಸಹಾಯಕ ಪ್ರಾಧ್ಯಾಪಕರು ಮೊ.ಸಂ. 7899285785, ಶ್ರೀಪಾದ ವಿ, ಸಹಾಯಕ ಪ್ರಾಧ್ಯಾಪಕರು ಮೊ.ಸಂ. 9448344103, ಎಂ.ಎ.ವಾಸೀಮ್ ಸಹಾಯಕ ಪ್ರಾಧ್ಯಾಪಕರು ಮೊ.ಸಂ. 7259793847, ಡಾ.ಶಶಿಧರ ದೊಡ್ಡಮನಿ ಸಹಾಯಕ ಪ್ರಾಧ್ಯಾಪಕರು ಮೊ.ಸಂ. 7795674153 ಮತ್ತು ಪಿ.ಬಿ.ದೇಸೂರ, ಸಹಾಯಕ ಆಡಳಿತಾಧಿಕಾರಿ ಮೊ.ಸಂ. 8884612692 ಹಾಗೂ ವಿಶ್ವವಿದ್ಯಾಲಯದ ಇತರ ನೋಂದಾಯಿತ ಸಹಾಯಕ ಪ್ರಾಧ್ಯಾಪಕರನ್ನು ಅಥವಾ ಆಯಾ ಜಿಲ್ಲೆಯ ತೋಟಗಾರಿಕೆ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿಗಳು, ಮುಖ್ಯಸ್ಥರು ಅಥವಾ ತೋಟಗಾರಿಕಾ ಉಪನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

ಪ್ರತಿಭಾವಂತ ಹಾಗೂ ನಾವೀನ್ಯತೆ ಅಳವಡಿಸಿಕೊಂಡ ತೋಟಗಾರಿಕಾ ರೈತರು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಡಿಗೇಹಳ್ಳಿ ಗ್ರಾಮದಲ್ಲಿ ಸಂಭ್ರಮದ ಬನ್ನಿ ಉತ್ಸವ ಆಚರಣೆರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥ ಸಂಚಲನಹಿರಿಯೂರಿನಲ್ಲಿ ವಿಜೃಂಭಣೆಯ ದಸರಾ ಅಂಬಿನೋತ್ಸವ: ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮದ ಆಚರಣೆತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೀ ಮಧ್ವಾಚಾರ್ಯ ಜಯಂತಿ ಆಚರಣೆಭದ್ರಾ ಮೇಲ್ದಂಡೆ ಯೋಜನೆ: ಹಿರಿಯೂರು ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೆ ಮಹತ್ವದ ಹೆಜ್ಜೆSC/ST ಕುಂದುಕೊರತೆ ಸಭೆ - ಮಾದಕ ವಸ್ತು ತಡೆಗೆ ಕಟ್ಟುನಿಟ್ಟಿನ ಕ್ರಮದ ಭರವಸೆಜಂಭದ ಜಂಬೂಸವಾರಿಸಮಾಜದ ಶಾಂತಿ, ಸುವ್ಯವಸ್ಥೆಗಾಗಿ ಪೊಲೀಸರ ತ್ಯಾಗ ಸ್ಮರಣೀಯ– ನ್ಯಾಯಾಧೀಶ ಹಡಪದ್25ನೇ ವರ್ಷದ ರಜತ ಮಹೋತ್ಸವ ದಸರಾ ಹಾಗೂ ನಂದಿನಿ ಉತ್ಸವ ವೈಭವಸುತ್ತೂರು ಮಠದಲ್ಲಿ ದಸರಾ ವಿಶೇಷ ಹೋಮ: ಡಿ.ಕೆ ಶಿವಕುಮಾರ್ ಭಾಗಿ