Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವ

Advertisement
 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ ಗ್ರಾಮದಲ್ಲಿ  ಕೇಂಪೇಗೌಡ ಜಿಲ್ಲಾ ಮಹಿಳಾ ವಕ್ಕಲಿಗರ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅಹಾರ ನಾಗರೀಕ ವ್ಯವಹಾರ ಸಚಿವ ಕೆ. ಹೆಚ್. ಮುನಿಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿ   ಮಹಿಳೆಯರ ಸಮಾನತೆಯು ಮೂಲಭೂತ ಮಾನವ ಹಕ್ಕು.ಇದು ಲಿಂಗದ ಆಧಾರದ ಮೇಲೆ ತಾರತಮ್ಯವಿಲ್ಲದೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾದ ಅವಕಾಶ ಇದೆ. ಆದ್ದರಿಂದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ  ತಮ್ಮದೆ ಅದ ಸಾಮರ್ಥ್ಯದಿಂದ ಮುನ್ನುಗುತ್ತಿದ್ದಾರೆ.

ಮನೆಯ ಜವಾಬ್ದಾರಿಗಳನ್ನು ತೆಗೆದು ಕೊಂಡು ಉತ್ತಮ ಜೀವ ನಡೆಸುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಂಪೇಗೌಡ ಮಹಿಳಾ ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷೆ  ಶಾಂತಮ್ಮ, ಗೌರವಾಧ್ಯಕ್ಷರು ಶ್ರೀಮತಿ ಹೆಚ್.ಎಸ್. ರೇವತಿ ಅನಂತರಾಮ್ , ಘಾಟಿ ಸುಬ್ರಹ್ಮಣ್ಯ ಅಭಿವೃದ್ದಿ  ಪ್ರಾಧಿಕಾರ ಸದಸ್ಯರಾದ ರಂಗಪ್ಪಆರ್. ವಿ.ಮಹೇಶ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಕೆ.ಪಿ.ಸಿ.ಸಿ. ಸದಸ್ಯರು ಎಸ್.ಆರ್. ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ದೇವನಹಳ್ಳಿ  ಕೆ.ಸಿ. ಮಂಜುನಾಥ್, ಶ್ರೀಮತಿ ವರಲಕ್ಷ್ಮೀ ವೆಂಕಟರಮಣಯ್ಯ, ಶ್ರೀಮತಿ ಮಂಗಳಾ ರಮೇಶ್, ಲಕ್ಷ್ಮೀ, ರತ್ನಮ್ಮಕಲ್ಪನಾ ಆನಂದ್‌,   ಶೋಭಾ, ಮಮತಾ, ಸಾವಿತ್ರಮ್ಮ, ಜಿ.ಎಂ. ಶ್ರೀಮತಿ, ಭಾಗ್ಯಮ್ಮ, ರೂಪ, ಮಂಜುಳಾ ಬಿ, ಲಕ್ಷ್ಮೀದೇವಮ್ಮ, ಎ.ಎಸ್.  ಆಶಾ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST